ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಶ್ರೀವಿಜಯ ಕಲಾನಿಕೇತನದ ವತಿಯಿಂದ ನ.23ರ ನಾಳೆ ಒಡಿಸ್ಸಿ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನೃತ್ಯ ನೀರಾಜನ ಶಾಸ್ತ್ರೀಯ ನೃತ್ಯ ಮಾಲಿಕೆಯಲ್ಲಿ ನಾಳೆ ಶನಿವಾರ ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಕಲಾವಿದರಾದ ವಿದುಷಿ ಯಶೋಮತಿ ಮಿಶ್ರ ಅವರಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮ ಹಾಗೂ ವಿದುಷಿ ಕುಸುಮ ಎ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಶಿವಮೊಗ್ಗದ ಖ್ಯಾತ ಉದ್ಯಮಿ ಭಾಸ್ಕರ್ ವಿ. ಕಾಮತ್, ಶ್ರೀವಿಜಯದ ಅಧ್ಯಕ್ಷರಾದ ಡಾ. ಕೆ.ಆರ್. ಶ್ರೀಧರ್ ಅವರು ಪಾಲ್ಗೊಳ್ಳಲಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post