ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಮ್ಮ 70ನೆಯ ವರ್ಷದಲ್ಲಿ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಮೆಡಿಕಲ್ ಡಿಪ್ಲೊಮೋ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಖ್ಯಾತ ವೈದ್ಯ ಹಾಗೂ ವೃದ್ಧ ರೋಗ ತಜ್ಞ ಸಿ.ಜೆ. ಕೇಶವಮೂರ್ತಿ ನಗರಕ್ಕೆ ಕೀರ್ತಿ ತಂದಿದ್ದಾರೆ.
ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜೂನ್ 2018ರಲ್ಲಿ ನಡೆದ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮೋ ಇನ್ ಜೆರಿಯಾಟ್ರಿಕ್ ಮೆಡಿಸನ್ ವಿಷಯದಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ತಮ್ಮ 70ನೆಯ ವರ್ಷದಲ್ಲಿ ಈ ಸಾಧನೆ ಮಾಡಿರುವ ನಗರದ ವೈದ್ಯರ ಬಗ್ಗೆ ಮಲೆನಾಡು ಹೆಮ್ಮೆ ಪಡುತ್ತದೆ. ಇಂತಹ ಸಾಧನೆಯನ್ನು ಮಾಡಿರುವ ಡಾ.ಕೇಶವಮೂರ್ತಿ ಅವರಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಸಿಹಿಮೊಗೆ ವಿಶ್ರಾಂತ ನೌಕರರ ಸಂಘ ಶುಭ ಹಾರೈಸಿದ್ದು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಹ ಅಭಿನಂದಿಸುತ್ತದೆ.
Get in Touch With Us info@kalpa.news Whatsapp: 9481252093

















