No Result
View All Result
Marriott Bonvoy Expands ICC Partnership to Include Women’s T20 World Cup 2026
English Articles

Marriott Bonvoy Expands ICC Partnership to Include Women’s T20 World Cup 2026

by ಕಲ್ಪ ನ್ಯೂಸ್
May 19, 2026
0

Kalpa Media House  |  Special Article | Marriott Bonvoy, the global travel platform by Marriott International, has announced the expansion...

Read moreDetails
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
  • Advertise With Us
  • Grievances
  • About Us
  • Contact Us
Tuesday, May 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮತಾಂಧರೇ, ಇದು ನಮ್ಮ ಸಂಸ್ಕೃತಿ: ಹರೇಕಳ ಹಾಜಬ್ಬ ಎಂಬ ಅಮೂಲ್ಯರತ್ನವನ್ನು ಜಗತ್ತಿಗೆ ಪರಿಚಯಿಸಿದ ಪ್ರಧಾನಿ

ಗುಣಕ್ಕೆಂದೂ ಮತ್ಸರವಿಲ್ಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 27, 2020
in Army
0
ಮತಾಂಧರೇ, ಇದು ನಮ್ಮ ಸಂಸ್ಕೃತಿ: ಹರೇಕಳ ಹಾಜಬ್ಬ ಎಂಬ ಅಮೂಲ್ಯರತ್ನವನ್ನು ಜಗತ್ತಿಗೆ ಪರಿಚಯಿಸಿದ ಪ್ರಧಾನಿ

Image Courtesy: Internet

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಬ್ಬರನ್ನು ಹೊಡೆದು ಹಿಂದಿಕ್ಕಿ ತಾನು ಶ್ರೇಷ್ಠನಾಗುವವನನ್ನು ಸನ್ಮಾನಿಸುವುದು ಅಂತಹ ವ್ಯಕ್ತಿಗಳು ಮಾತ್ರ. ಒಬ್ಬನ ಪರಿಶ್ರಮದ ಅನುಭವವನ್ನು ತಿಳಿಯಬೇಕಾದರೆ ಅಂತಹ ಪರಿಶ್ರಮದ ವ್ಯಕ್ತಿಯೋ ಅಥವಾ ಸೌಹಾರ್ದತೆಯನ್ನು ಬಯಸುವವನೋ ಮಾತ್ರ ಆಗಬೇಕಷ್ಟೆ. ಯಾಕೆ ಈ ಪೀಠಿಕೆ ಹಾಕಿದೆ ಎಂದು ಕಾಣಬಹುದು ನಿಮಗೆ.

ಇಂದಿನ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾದ ಹರೇಳ ಹಾಜಪ್ಪ ಅವರ ವ್ಯಕ್ತಿತ್ವವನ್ನೊಮ್ಮೆ ನೋಡಿ. ಬಹಳ ಹಿಂದೆಯೇ ಇವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಕಿತ್ತಳೆ ವ್ಯಾಪಾರ ಮಾಡಿ ಇವರು ಧನ ಸಂಪಾದನೆ ಮಾಡುತ್ತಿದ್ದರು ಎನ್ನುವುದಕ್ಕಿಂತ, ಜ್ಞಾನ ಸಂಪಾದನೆ ಮಾಡಿಕೊಂಡರು ಎಂದು ಹೇಳಿದರೆ ಅದು ಉತ್ತಮ ಶ್ಲಾಘನೆಯಾಗುತ್ತದೆ. ಹತ್ತು ಕಿತ್ತಳೆ ಒಬ್ಬ ಕೊಂಡುಕೊಂಡರೆ ಹತ್ತು ನಿಮಿಷ ಕೈಕಾಲು ಬೆರಳುಗಳನ್ನು ಅಲ್ಲಾಡಿಸುತ್ತಾ ಲೆಕ್ಕ ಹಾಕುವ ತನ್ನ ಮನೋಸ್ಥಿತಿಯು ಮುಂದಿನ ಪೀಳಿಗೆಗೆ ಬರಬಾರದು ಎಂದು ತಿಳಿದುಕೊಂಡ ಜ್ಞಾನದಿಂದಲೇ ಇವರು ಜ್ಞಾನ ದೇಗುಲ ಕಟ್ಟಿದವರು. ಇದು ಇಂದು ನಿನ್ನೆ ಕಟ್ಟಿದ್ದೇನಲ್ಲ. ಹಲವಾರು ವರ್ಷಗಳ ಪರಿಶ್ರಮ ಇದರೊಳಗಿದೆ. ಆದರೆ ಸಮಾಜ ಗುರುತಿಸಿದ್ದರೂ, ಇದರಿಂದ ಜ್ಞಾನ ಪಡೆದಿದ್ದರೂ ಮನದೊಳಗೆ ಮಾತ್ರ, ಸೀಮಿತ ಕ್ಷೇತ್ರದೊಳಗೆ ಮಾತ್ರವೇ ಇವರು ಅನುಗ್ರಹಕ್ಕೆ ಪಾತ್ರರಾಗಿದ್ದರೇ ವಿನಃ ಇಡೀ ಪ್ರಪಂಚಕ್ಕೆ ಕಾಣಲಿಲ್ಲ. ಅವರು ಕಾಯಕವೇ ಕೈಲಾಸ ಎನ್ನುವ ತಪಸ್ಸಿನಲ್ಲಿದ್ದರೇ ಹೊರತು ಪ್ರಶಸ್ತಿ ಪ್ರಶಂಸೆಗಳನ್ನು ಬಯಸಿರಲಿಲ್ಲ. ಆದರೆ ನಾವು ಯಾವಾಗ ಅವರ ಈ ಸತ್ಕರ್ಮವನ್ನು ನೋಡಿದೆವೋ ಆಗ ಅವರನ್ನು ಜಗತ್ತಿಗೇ ಪರಿಚಯಿಸಿ ಗುರುತಿಸಲು ಹೊರಟಾಗ ನಾವು ಕೃತಾರ್ಥರಾಗುತ್ತೇವೆ.

ಸರ್ವಧರ್ಮವನ್ನೂ ಅಂದಿನಿಂದ ಇಂದಿನವರೆಗೆ ಗೌರವಿಸುತ್ತಾ ಬಂದಿದೆ ನಮ್ಮ ಭಾರತೀಯ ಪರಂಪರೆ. ಎಲ್ಲೋ ಒಂದು ಕಡೆ ಇದ್ದ ಬಡ ವ್ಯಕ್ತಿಯ ಜ್ಞಾನ ಭಂಡಾರವನ್ನು ನೋಡಿ ಅವರನ್ನು ಈ ದೇಶದ ರಾಷ್ಟ್ರಪತಿಯನ್ನಾಗಿಸಿತು. ಅವರೇ ಡಾ ಅಬ್ದುಲ್ ಕಲಾಂಜಿ. ಜೋಗಿಯಾಗಿ ಅಲೆಯುತ್ತಿದ್ದ ಪಾರಮಾರ್ಥಿಕ ಚಿಂತನೆಯಲ್ಲಿದ್ದ ಶಿಶುನಾಳ ಶರೀಫರು ನಮಗೆಲ್ಲರಿಗೂ ಅಜ್ಜನಾದರು. ಹೀಗೇ ನೋಡುತ್ತಾ ಹೋದರೆ ಇನ್ನೂ ಅನೇಕರಿದ್ದಾರೆ. ಸತ್ಕಾರ್ಯಕ್ಕೆ ಎಂದೂ ಜಾತಿ, ಸಂಪ್ರದಾಯ, ಮತ, ಧರ್ಮಗಳು ಅಡ್ಡಿಯಾಗುವುದಿಲ್ಲ ಎಂದು ತೋರಿಸುವಂತದ್ದೇ ನಮ್ಮ ಭಾರತೀಯ ಪರಂಪರೆ. ಆದರೆ ದುರಂತವೆಂದರೆ ನಮ್ಮ ಸಮಾಜದೊಳಗೆ ಒಡೆದು ಆಳುವ ವಿಷದ ಬೀಜಗಳೂ ಇರುವುದರಿಂದ ಸಮಾಜವನ್ನು ಒಡೆಯುತ್ತಾ ಹೋಯ್ತು. ಒಂದಾಗಿಸಲಿಲ್ಲ. ಆದರೆ ಸಂಭವಾಮಿ ಯುಗೇ ಯುಗೇ ಎಂಬಂತೆ ಈಗಿನ ಪ್ರಧಾನಮಂತ್ರಿಯವರು ಮೂಲೆಯಲ್ಲಿದ್ದ ಅಮೂಲ್ಯರತ್ನಗಳನ್ನು ಹುಡುಕಿ ಜಗತ್ತಿಗೆ ತೋರಿಸಿದರು. ಅಂತಹ ರತ್ನಗಳಲ್ಲೊಂದು ಇವತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಳ ಹಾಜಪ್ಪನವರು.

ಇದು ಯಾವುದೇ ಸಮಾಜ, ಸಮುದಾಯದಲ್ಲಿದ್ದ ವಿಷದ ಬೀಜಗಳನ್ನು ನಾಶ ಮಾಡುವುದು ಮಾತ್ರವಲ್ಲ, ನಮ್ಮನ್ನು ಕೃತಾರ್ಥರನ್ನಾಗಿಯೂ ಮಾಡುತ್ತದೆ. ಯಾವುದೋ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿರಬೇಕಾದರೆ, ಹೇಳಿಕೆ ಗೀಳಿಕೆ ಇಲ್ಲದೆ ನಾವಲ್ಲಿಗೆ ಹೋಗಿ ಪ್ರಸಾದ ಸ್ವೀಕರಿಸಿದಾಗ ಯಾವ ಆನಂದ ಸಿಗುವುದೋ ಅದೇ ಆನಂದವವು ಹರೇಳ ಹಾಜಪ್ಪನವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ನಾವಿಂದು ಪಡೆದೆವು. ಇದರ ಪರಿಣಾಮವಾಗಿ ಇನ್ನಷ್ಟು ಹಾಜಪ್ಪನವರು ಹುಟ್ಟಿಕೊಳ್ಳುತ್ತಾರೆ. ಯಾವುದೋ ಮತಾಂಧರ ಬಗ್ಗೆ ಕಣ್ಣೀರು ಸುರಿಸಿದರೆ ಮತ್ತೊಂದಷ್ಟು ಮತಾಂಧರು ಹುಟ್ಟಿಕೊಳ್ಳಬಹುದು. ಆ ಮತಾಂಧರ ನಾಶ ಮಾಡಿದರೆ ಅನೇಕ ಮತಾಂಧರು ಕಣ್ಮರೆಯಾಗುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಸಮಾಜದಲ್ಲಿ ಇಂತಹ ಸಜ್ಜನರನ್ನು ಗುರುತಿಸಿ ಸನ್ಮಾನಿಸಿದಾಗ ದುಷ್ಟರ ಮನಃಪರಿವರ್ತನೆಯೂ, ಮತ್ತೊಂದಷ್ಟು ಸಜ್ಜನರ ಸೃಷ್ಟಿಯೂ, ನಮಗೊಂದಷ್ಟು ಕೃತಾರ್ಥತೆಯೂ ಬಂದೇ ಬರುತ್ತದೆ.

ದುಷ್ಕರ್ಮಿಗಳನ್ನು ನಾಶ ಮಾಡುವುದಕ್ಕಿಂತ ಸತ್ಕರ್ಮಿಗಳನ್ನು ಗೌರವಿಸುತ್ತಾ, ಮತ್ತೊಂದಷ್ಟು ಸತ್ಕರ್ಮಿಗಳ ಸೃಷ್ಠಿ, ಪ್ರಚೋದನೆಯ ಕಾರ್ಯ ಮಾಡಿದಾಗ ದುಷ್ಕರ್ಮಿಗಳು ನಿಷ್ಕ್ರಿಯರಾಗಿ ಸತ್ಕರ್ಮಿಗಳೂ ಆಗಬಹುದು ಅಥವಾ ದುಷ್ಕರ್ಮಗಳಿಂದ ದೂರವಾಗಬಹುದು. ಇಂದಿನ ಈ ಹಾಜಪ್ಪ ಮುಂತಾದವರ ಸನ್ಮಾನವು ಭಾರತಾಂಬೆಯ ಕಿರೀಟಕ್ಕೆ ಪೋಣಿಸುವ ಅಮೂಲ್ಯ ರತ್ನವಾಗುತ್ತದೆ.


Get in Touch With Us info@kalpa.news Whatsapp: 9481252093

Tags: FanaticsHarekala HajabbaKannada News WebsiteKarnatakaPadma Sri AwardPrakash AmmannayaSocial WorkSpecial Articleಎಪಿಜೆ ಅಬ್ದುಲ್ ಕಲಾಂಕಿತ್ತಳೆ ವ್ಯಾಪಾರಪದ್ಮಶ್ರೀ ಪ್ರಶಸ್ತಿಪ್ರಕಾಶ್ ಅಮ್ಮಣ್ಣಾಯಮತಾಂಧರುಸಾಮಾಜಿಕ ಕಾರ್ಯಹರೇಳ ಹಾಜಪ್ಪ
Share196Tweet123Send
Previous Post

ಕೆರೆಮನೆ ಪ್ರತಿಷ್ಠಾನದ ಬ್ರಾಂಡ್ ಪ್ರಾಡಕ್ಟ್‌-ಅಭಿನೇತ್ರಿ ನೀಲ್ಕೊಡು…

Next Post

ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು

ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಅರಸೀಕೆರೆಯಲ್ಲಿ RPF ಆಪರೇಷನ್ ಸತರ್ಕ ಕಾರ್ಯಾಚರಣೆ | ಮದ್ಯದ ಬಾಟಲಿಗಳ ವಶ

ಅರಸೀಕೆರೆಯಲ್ಲಿ RPF ಆಪರೇಷನ್ ಸತರ್ಕ ಕಾರ್ಯಾಚರಣೆ | ಮದ್ಯದ ಬಾಟಲಿಗಳ ವಶ

May 19, 2026
ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

May 19, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಫಸ್ಟ್ ಲುಕ್ ಹೇಗಿದೆ ನೋಡಿ | ಎಲ್ಲಿಂದ ಎಲ್ಲಿಗೆ?

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ

May 19, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ರಸಾಯನಶಾಸ್ತ್ರ ತರಗತಿ ಸಂಸ್ಥಾಪಕ ಶಿವರಾಜ್ ಸಿಬಿಐನಿಂದ ಬಂಧನ

May 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL