ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ನಾಳೆ ಮುಂಜಾನೆ 7ರಿಂದ ಸಂಜೆ 7ರವರೆಗೂ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಕೋವಿಡ್19 ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ನಾಳೆ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಮುಂಜಾನೆ 7ರಿಂದ ಸಂಜೆ 7ರವರೆಗೂ ಎಲ್ಲ ರೀತಿಯ ಚಟುವಟಿಕೆ, ವ್ಯಕ್ತಿ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ನಾಳೆ ಅಗತ್ಯ ವಸ್ತು ಹಾಗೂ ತುರ್ತು ಸಂಚಾರಕ್ಕೆ ಮಾತ್ರ ಅನುಮತಿಯಿದ್ದು, ಉಳಿದಂತೆ ಎಲ್ಲ ರೀತಿಯ ಸಂಚಾರ ನಿಷೇಧವಿರುತ್ತದೆ.
Get in Touch With Us info@kalpa.news Whatsapp: 9481252093

















