ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಆರಾಧನಾ ಆರ್ಥೋಪೆಡಿಕ್ ಸೆಂಟರ್ ಇಂದು ಲೋಕಾರ್ಪಣೆಗೊಂಡಿದೆ.
ಇಂದು ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಸವಳಂಗ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಆರಾಧನಾ ಆರ್ಥೋಪೆಡಿಕ್ ಸೆಂಟರ್ ವಿಶೇಷವಾಗಿ ಮೂಳೆ ಹಾಗೂ ಕೀಲು ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಗಾಗಿಯೇ ಆರಂಭವಾಗಿದ್ದು, ತುರ್ತು ಚಿಕಿತ್ಸಾ ಸೌಲಭ್ಯವನ್ನೂ ಸಹ ಹೊಂದಿದೆ.

ಪಾದದ, ಕಾಲು, ಸ್ಪ್ಲಿಂಟ್ಸ್ ಮತ್ತು ಸ್ಪ್ಲಿಂಟಿಂಗ್ ಪರಿಕರಗಳು, ಕಿಬ್ಬೊಟ್ಟೆ, ಸೊಂಟ, ಮಣಿಕಟ್ಟು, ಕೈ ಮತ್ತು ಮಣಿಕಟ್ಟು, ಎಳೆತ, ಸ್ಥಾನಿಕ ಸಾಧನಗಳು, ಮೊಣಕಾಲು ಸೇರಿದಂತೆ ಮೂಳೆ ಹಾಗೂ ಕೀಲು ಸಂಬಂಧಿತ ಎಲ್ಲ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ.
Get In Touch With Us info@kalpa.news Whatsapp: 9481252093
















