ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದರೋಡೆಗೆ ಹೊಂಚು ಹಾಕಿದ್ದ ಹಾಗೂ ಹಲವು ದರೋಡೆ ನಡೆಸಿದ್ದ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಶಿವಮೊಗ್ಗ ಪೊಲೀಸರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು, ಹಲವು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ದೀಪಾವಳಿಯಲ್ಲಿ ಜಯನಗರ ಮತ್ತು ಕೋಟೆ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 8 ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆದಿತ್ತು.
ಇದಕ್ಕಾಗಿ, ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಶೇಖರ್ ಟೆಕ್ಕಣ್ಣನವರ್, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್, ಕೋಟೆ ಸಿಪಿಐ ಚಂದ್ರಶೇಖರ್, ರೌಡಿ ನಿಗ್ರಹದಳದ ಮಹಿಳಾ ಠಾಣೆಯ ಪಿಐ ಅಭಯ್ ಪ್ರಕಾಶ್ ಸೋಮನಾಳ್, ಪಿಎಸ್‌ಐ ಉಮೇಶ್, ಪಿಎಸ್‌ಐ ಶಿವಾನಂದ ಕೋಳಿ, ಪಿಎಸ್‌ಐ ರಾಹತ್ ಆಲಿ, ಸಿಬ್ಬಂದಿಗಳಾದ ವೀರೇಶಯ್ಯ, ನಾಗಪ್ಪ, ಎಎಸ್‌ಐ ಹರ್ಷ, ಸೋಮು, ಸುರೇಶ್, ಮೋಹನ್ ಕುಮಾರ್, ಸುಧಾಕರ್, ಗೋಪಾಲ್, ಕಲ್ಲನಗೌಡ, ರಾಮಕೃಷ್ಣ, ಆದರ್ಶ, ಶಿವರಾಜ್, ಆಂಡ್ರಸ್ ಜಾನ್ಸ್, ನಿಗ್ರಹದಳದ ಸಿಬ್ಬಂದಿಗಳಾದ ಕಿರಣ್ ಮೋರೆ, ನಾಗರಾಜ್ ಸಂದೀಪ್, ಅಶೋಕ, ಫಾರೂಕ್, ಇಂದ್ರೇಶ್ ಗುರುರಾಜ್ ವಿನಯ್ ಅವರನ್ನಳಗೊಂಡ ದೊಡ್ಡತಂಡವನ್ನು ರಚಿಸಲಾಗಿತ್ತು.
ಉತ್ತರ ಪ್ರದೇಶದ ಮೀರತ್’ನ ನಿವಾಸಿ ಫೈಜಲ್(25), ಸಲ್ಮಾನ್ (24), ಆಶೀಸ್ ಕುಮಾರ್ (36), ಮೆಹತಾಬ್ (35), ಸಲ್ಮಾನ್ (22), ಶಿವಮೊಗ್ಗದ ಜೋಸೆಫ್ ನಗರದ ನಿವಾಸಿ ಮಹಮ್ಮದ್ ಚಾಂದ್ ಅವರುಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಲಾಗಿದ್ದ ಯುಪಿ 15 ಡಿಎಫ್ 4745 ಕ್ರಮಸಂಖ್ಯೆಯ ಬೈಕ್, 2 ಪಿಸ್ತೂಲ್, 12 ಜೀವಂತ ಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೇ, ಈ ಎಂಟು ಪ್ರಕರಣಗಳಲ್ಲಿ 9 ಲಕ್ಷ ರೂ. ಮೌಲ್ಯದ 31 ಸಾವಿರದ 50 ರೂ. ಮೌಲ್ಯದ 213.20 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು ಎಂಬ ಅಂಶವನ್ನು ವಿಚಾರಣೆ ವೇಳೆ ಈ ದರೋಡೆಕೋರರ ತಂಡ ಬಾಯಿಬಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post