ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆರ್’ಎಸ್’ಎಸ್ ಸಂಘಟನೆ ಹಾಗೂ ಧ್ವಜವನ್ನು ಟೀಕಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರುಗಳಿಗೆ ತಿಳುವಳಿಕೆಯ ಕೊರತೆಯಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರುಗಳು ಆರ್’ಎಸ್’ಎಸ್ ಧ್ವಜದ ಕುರಿತಾಗಿ ಟೀಕೆ ಮಾಡಿದ್ದಾರೆ. ಅವರ ವಿರುದ್ದವೂ ಸಹ ನಮಗೆ ಟೀಕಿಸಲು ಬರುತ್ತದೆ. ಆದರೆ, ಇಂತಹ ಸಂಸ್ಕೃತಿಯನ್ನು ಸಂಘಟನೆ ನಮಗೆ ಕಳುಹಿಸಿಲ್ಲ ಎಂದರು.
ಸಂಘದ ಧ್ವಜ ತ್ಯಾಗದ ಸಂಕೇತ. ಅದನ್ನು ಗುರು ಎಂದು ಭಾವಿಸಿ ಕಾಣಿಕೆ ನೀಡುವುದು ನಮ್ಮ ಪದ್ದತಿ. ಅದನ್ನ ಟೀಕಿಸಿದರೆ ಜಾತಿ ವಾದಿಗಳು ಎಂದರೆ ಸಹಿಸಲು ಸಾಧ್ಯವಿಲ್ಲ ಎಂದರು.
ಆರ್’ಎಸ್’ಎಸ್’ನ್ನು ಟೀಕಿಸಿದರೆ ಸೋನಿಯಾ ಗಾಂಧಿಗೆ ಸಂತೋಷ ಸಿಗಬಹುದು. ಇದಕ್ಕಾಗಿ ಇವರೆಲ್ಲಾ ಹೀಗೆ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ನಾಯಕರ ಬಹಳಷ್ಟು ಮಕ್ಕಳೂ ಸಹ ಆರ್’ಎಸ್’ಎಸ್’ಗೆ ಬರುತ್ತಾರೆ. ಇದರ ಜೊತೆಯಲ್ಲಿ ಕಾಂಗ್ರೆಸ್ ನಾಯಕರಿಗೆ ತಿಳುವಳಿಕೆಯ ಕೊರತೆಯೂ ಸಹ ಇದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post