ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣ್ ಅವರು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ರಂಗನಾಥ್ ಹಾಗೂ ಅಲ್ಲಿನ ಶಿಕ್ಷಕರಾದಂತ ಗೋಪಾಲಕೃಷ್ಣ, ಹಾಗೂ ಲೀಲಾ ಮತ್ತು ಅಲ್ಲಿನ ಅಧಿಕಾರಿ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿ ಕೇಂದ್ರ ಕಾರಾಗೃಹದ ಅಭಿವೃದ್ಧಿಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಬಂದಿ ಒಬ್ಬರು ರಚಿಸಿರುವ ಚಿತ್ರಕಲೆಯನ್ನು ಕಿರು ಕಾಣಿಕೆಯಾಗಿ ಮುಖ್ಯ ಅಧೀಕ್ಷಕರಾದ ಡಾ.ಕೆ.ರಂಗನಾಥ್ ಅವರು ಡಿ.ಎಸ್. ಅರುಣ್ ಅವರಿಗೆ ನೀಡಿ ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















