ಕಲ್ಪ ಮೀಡಿಯಾ ಹೌಸ್
ವಿಜಾಪುರ: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಏಕಾಏಕಿ ಹೆಚ್ಚಾಗುತ್ತಿರುವ ಹಿನ್ನೆಲೆ, ಏ.16 ರಿಂದ ಮೇ 15 ರ ವರೆಗೆ ನಗರದ ಐತಿಹಾಸಿಕ ಪ್ರವಾಸಿ ತಾಣಗಳ ಸ್ಮಾರಕಗಳ ವೀಕ್ಷಣೆ ನಿರ್ಬಂಧಿಸಿ, ಸ್ಮಾರಕಗಳನ್ನು ಲಾಕ್ ಮಾಡಲಾಗಿದೆ ಎಂದು ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ತಿಳಿಸಿದೆ.
ಇಲ್ಲಿನ ವಿಶ್ವ ವಿಖ್ಯಾತಿ ಐತಿಹಾಸಿಕ ಸ್ಮಾರಕಗಳಾದ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್, ಗಗನ ಮಹಲ್, ಉಪ್ಪಲಿ ಬುರ್ಜ ಸೇರಿದಂತೆ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಅಡಿಯ ಸ್ಮಾರಕಗಳ ವೀಕ್ಷಣೆಯನ್ನು ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ, ಬೀಗ ಹಾಕಲಾಗಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















