ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಾನಂತೂ ಓದಿಲ್ಲ… ನೀನಾದರೂ ಓದು ಎಂದು ಪತ್ನಿಯನ್ನು ಕೆಎಎಸ್ ಮಾಡಿಸಿದ್ದ ಪತಿ ಕೊರೋನಾಗೆ ಬಲಿಯಾಗಿರುವ ಮನ ಕಲುಕುವ ಘಟನೆ ನಗರದಲ್ಲಿ ನಡೆದಿದೆ.
ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಎಂಬಾತನೇ ಮೃತ ದುರ್ದೈವಿ.
ತನ್ನ ಸ್ವಂತ ಅಕ್ಕನ ಮಗಳು ಅಶ್ವಿನಿ ಎಂಬುವವರನ್ನು ವಿವಾಹವಾಗಿದ್ದ ಸೀನಾ, ನಾನಂತೂ ಕಲಿತಿಲ್ಲ. ನೀನಾದರೂ ಓದು ಎಂದು ಪತ್ನಿಗೆ ಪ್ರೋತ್ಸಾಹ ನೀಡಿದ್ದರು. ಹೆಂಡತಿಯನ್ನು ಕೆಎಎಸ್ ಓದಿಸಬೇಕು ಎಂಬ ಕನಸು ಕಂಡು, ಹಿಂದಿನಿಂದಲೂ ಆಕೆಗೆ ಪೂರ್ವಭಾವಿ ತರಬೇತಿ ಕೊಡಿಸಿದ್ದ.
ಕೆಪಿಎಸ್’ಸಿ ಪರೀಕ್ಷೆಯಲ್ಲಿ ಪಾಸಾಗಿದ್ದ ಅಶ್ವಿನಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯ ಜವಾಬ್ದಾರಿ ತೆಗೆದುಕೊಂಡಿದ್ದರು.
ಆದರೆ, ಪತ್ನಿಗೆ ಇಷ್ಟೆಲ್ಲಾ ಪ್ರೀತಿಯ ಪ್ರೋತ್ಸಾಹ ನೀಡಿದ್ದ ಸೀನಾ ಈಗ ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದು ಅವರ ಕುಟುಂಬಸ್ತರಿಗೆ ತೀವ್ರ ಆಘಾತ ಉಂಟು ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















