ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಂಸದೀಯ ವರ್ತನೆಯನ್ನು ಪಾಲಿಸದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ ಕಲಾಪದಲ್ಲಿ ಪಾಠ ಹೇಳಿರುವ ಘಟನೆ ಜರುಗಿದೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಮಾತನಾಡುತ್ತಿದ್ದ ವೇಳೆ ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶಿ ಏನನ್ನೋ ಹೇಳಲು ಮುಂದಾದರು, ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಮಾತು ಮುಗಿದ ಬಳಿಕ ಮತ್ತೋರ್ವ ಸಂಸದನಿಗೆ ಮಾತನಾಡಲು ಅನುಮತಿ ನೀಡುವುದಾಗಿ ಹೇಳಿದರು.
ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆಗೆ ಗರಮ್ ಆದ ಸ್ಪೀಕರ್ ಬಿರ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹಾಗೂ ಅನುಮತಿ ನೀಡಲು ನೀವು ಯಾರು? ನೀವು ಅನುಮತಿ ನೀಡುವಂತಿಲ್ಲ, ಸಂಸದರಿಗೆ ಮಾತನಾಡಲು ಅನುಮತಿ ನೀಡುವುದು ನನ್ನ ಹಕ್ಕು. ಸಭಾಧ್ಯಕ್ಷರು ಮಾತ್ರ ಆ ಕೆಲಸ ಮಾಡುತ್ತಾರೆ ಎಂದು ಸಂಸದೀಯ ಪಾಠ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post