ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಹಾಗೂ ತುಂಗಾ ನದಿಯಲ್ಲಿ Tunga River ಸ್ವಚ್ಛ ಸುಂದರಗೊಳಿಸುವ ದೃಷ್ಟಿಯಲ್ಲಿ ಇಂದು ಸಂಸದ ಬಿ. ವೈ. ರಾಘವೇಂದ್ರ MP B Y Raghavendra ಅವರು ಬೆಕ್ಕಿನ ಕಲ್ಮಠ ಸಮೀಪದ ತುಂಗಾ ನದಿಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ವತಿಯಿಂದ ತುಂಗಾ ನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳಬೇಕಿರುವ ಮಿನಿ ಅಡ್ಡಕಟ್ಟೆಯ ( CONSTRUCTION OF WEIR ACROSS TUNGA RIVER FOR RIVER FRONT DEVELOPMENT PROJECT ) ಸ್ಥಳವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ನಗರದಲ್ಲಿ ತುಂಗಾ ನದಿ ಉತ್ತರ ದಂಡೆ ಅಭಿವೃದ್ಧಿ ಕಾಮಗಾರಿಯಲ್ಲಿ ದೋಣಿವಿಹಾರ ವಾಕಿಂಗ್ ಪಾಥ್, Jetty, steps & Ramps to Lower Promenade ಇತ್ಯಾದಿಗಳಿಗೆ ನಿರಂತರವಾಗಿ ನೀರು ನಿಲುಗಡೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ ತುಂಗಾ ನದಿಗೆ ಅಡ್ಡಲಾಗಿ ಬಂದಾರ (CONSTRUCTION OF WEIR) ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
Also read: 12 ರಿಂದ 14 ವರ್ಷದೊಳಗಿನ ಮಕ್ಕಳು ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಕರೆ
ಕೆಎಸ್ಎಸ್ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪಾಲಿಕೆಯ ಮಹಾಪೌರರಾದ ಸುನಿತಾ ಅಣ್ಣಪ್ಪ, ಉಪ ಮಹಾಪೌರರಾದ ಶಂಕರ್ ಗನ್ನಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್ ವಟಾರೆ, ಸಣ್ಣ ನೀರಾವರಿ ಎಇಇ ಮಂಜುನಾಥ್, ಸ್ಮಾರ್ಟ್ ಸಿಟಿ ಇಇ ಕೃಷ್ಣಪ್ಪ, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post