ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ಮಹಿಳೆಯೊಬ್ಬರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮಕ್ಕಳು ಆರೋಗ್ಯದಿಂದಿದ್ದಾರೆ.
ಭದ್ರಾವತಿ ತಾಲೂಕಿನ ತಡಸ ಗ್ರಾಮದ ಆರೀಫ್ ಎನ್ನುವವರ ಪತ್ನಿ ಅಲ್ಮಾಜ್ ಬಾನು (22) ಅವರು ಇಂದು ಮುಂಜಾನೆ 7.30ಕ್ಕೆ ಸರ್ಜಿ ಆಸ್ಪತ್ರೆಯಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನವಜಾತ ಶಿಶು ಮತ್ತು ಮಕ್ಕಳ ತಜ್ಞರಾದ ಡಾ ಅನಿಲ್ ಬಿ. ಕಲ್ಲೇಶ್, ನಾಲ್ಕೂ ಮಕ್ಕಳು ನವಜಾತ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನಡೆದಿದೆ. ಶಿಶುಗಳ ತೂಕ 1.1, 1.2, 1.3 ಹಾಗೂ 1.8 ಕೆಜಿ ಹೊಂದಿದ್ದು, 2 ಶಿಶುಗಳಿಗೆ ಆಕ್ಸಿಜನ್ ನೀಡಲಾಗುತ್ತಿದೆ. ಎಲ್ಲ ಶಿಶುಗಳಿಗೆ ತಾಯಿಯ ಎದೆ ಹಾಲನ್ನು ನೀಡಲು ಪ್ರಯತ್ನಿಸುತ್ತಿದ್ದು, ಶಿಶುಗಳಿಗೆ ಕೆಎಂಸಿಯನ್ನೂ ಸಹ ನೀಡಲಾಗುತ್ತಿದೆ ಎಂದಿದ್ದಾರೆ.
Also read: ಬರಗೂರು ರಾಮಚಂದ್ರಪ್ಪ ವಿರುದ್ಧ ಶಿಕ್ಷಣ ಸಚಿವ ನಾಗೇಶ್ ಹಿಗ್ಗಾಮುಗ್ಗಾ ವಾಗ್ದಾಳಿ
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ ಸರ್ಜಿ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಈ ರೀತಿ 4 ಮಕ್ಕಳಿಗೆ ಜನ್ಮ ನೀಡಿರುವುದು ಸಂತೋಷದ ವಿಚಾರ. ಎಲ್ಲ ಶಿಶುಗಳು ಆರೋಗ್ಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಆಸ್ಪತ್ರೆಯ ವತಿಯಿಂದ ಅತಿ ಕಡಿಮೆ ದರದಲ್ಲಿ ಇವರಿಗೆ ಚಿಕಿತ್ಸೆ ನೀಡುತ್ತೇವೆ ಎಂದಿದ್ದಾರೆ.
ನಾಲ್ಕು ಮಕ್ಕಳಿಗೆ ಜನ್ಮ ನೀಡಲ ಇದು ಸಾಮಾನ್ಯ ಕಾರಣ!
ಈ ಕುರಿತಂತೆ ಮಾತನಾಡಿರುವ ಹಿರಿಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರಾದ ಡಾ. ಚೇತನಾ ಅವರು, ಸಾಮಾನ್ಯವಾಗಿ ಅವಳಿ, ತ್ರಿವಳಿಗಳಿಗೆ ಜನ್ಮ ನೀಡುತ್ತಾರೆ. ಆದರೆ, ಈ ರೀತಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ತೀರಾ ವಿಳರವಾಗಿದ್ದು, 5.12 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿಯಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ ಎನ್ನುತ್ತಾರೆ.
ನಾಲ್ಕು ಮಕ್ಕಳಾಗುವುದಕ್ಕೆ ಅನುವಂಶೀಯ ಅಂಶಗಳೇ ಕಾರಣವಾಗಿರುತ್ತದೆ ಎಂದಿರುವ ಅವರು, ಈ ರೀತಿಯಾಗಿ ಹೆರಿಗೆ ಮಾಡಿಸುವುದು ತುಂಬಾ ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಅರವಳಿಕೆ ತಜ್ಞರಾದ ಡಾ. ಮೂರ್ಕಣಪ್ಪನವರ ಸಹಕಾರ ದೊಡ್ಡದಿದೆ ಎಂದರು.
ಆಡಳಿತಾಧಿಕಾರಿ ಕೆ.ಆರ್. ಪುರುಷೋತ್ತಮ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news












Discussion about this post