ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ Kuvempu University ನಿರ್ವಹಣಾ ಮತ್ತು ಅಧ್ಯಯನ ಸಂಶೋಧನಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಕೆ.ಆರ್.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಜಿ.ಆರ್. ರಾಜೇಂದ್ರ ಪ್ರಸಾದ್ ಇವರು “ಹ್ಯೂಮನ್ ರಿಸೋಸ್ಸ್ ಡೆವೆಲಮೆಂಟ್ ಸ್ಟಾಟಜೀಸ್ ಆಸ್ ಎ ಟೂಲ್ ಫಾರ್ ರಿಯಲೈಜಿಂಗ್ ಫಂಕ್ಷನಲ್ ಕಾಂಪಿಟೆನ್ಸಿ – ಎ ಸ್ಟಡಿ ಆಫ್ ಸೆಲೆಕ್ಟೆಡ್ ಇನ್ಸೂರೆನ್ಸ್ ಕಂಪನೀಸ್ ಇನ್ ಕರ್ನಾಟಕ” ಎಂಬ ವಿಷಯ ಕುರಿತು ಸಂಶೋಧನಾ ಅಧ್ಯಯನ ಕೈಗೊಂಡು, ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿದೆ.
ರಾಜೇಂದ್ರ ಪ್ರಸಾದ್.ಜಿ.ಆರ್ ಇವರು ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು, ಕಾನನ ಕಟ್ಟೆ ಗ್ರಾಮದ ನಿವಾಸಿಗಳಾದ ಗೌಡರ ಗೋಪಾಲನಾಯಕ ಮತ್ತು ಈರಮ್ಮ ಇವರ ಪುತ್ರರಾಗಿದ್ದಾರೆ.
Also read: ಮೂಲ ಸಂಸ್ಕೃತಿ ಉಳಿಯಲು ಎಲ್ಲರೂ ಒಗ್ಗೂಡಬೇಕು: ಯೋಗಿ ನಿವೃತ್ತಿನಾಥ್‌ಜಿ ಕರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post