ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ, ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ, ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ. ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ, ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಆರ್‌ಎಸ್‌ಎಸ್ ತಂಟೆಗೆ ಬರಬೇಡಿ ಹುಷಾರ್… ಎಂದು ಶಾಸಕ ಈಶ್ವರಪ್ಪ MLA Eshwarappa ಸಿದ್ಧರಾಮಯ್ಯ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿದ್ಧರಾಮಯ್ಯನವರ ಚಡ್ಡಿ ಅಭಿಯಾನದ ಕುರಿತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹುಚ್ಚಾ, ಅಯೋಗ್ಯ, ನಿಮ್ಹಾನ್ಸ್ ರೋಡ್‌ನಲ್ಲಿ ಹೋಗುವ ನಾಯಿಯು ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಮರ್ಯಾದೆ ಕೊಡಲ್ಲ ಎಂದು ಏಕವಚನದ ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡು ಸಂಸ್ಕಾರ ಕಲಿತವರೇ ದೇಶ ನಡೆಸಿ, ಇಡೀ ಜಗತ್ತಿನಲ್ಲೇ ಹೆಸರು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳು ಕೂಡ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡವರು. ಈ ಹುಚ್ಚ ಸಿದ್ಧರಾಮಯ್ಯನಿಗೆ ಹುಚ್ಚು ಬಿಡಿಸುವ ಔಷಧಿ ಇಲ್ಲ. ಕಾಂಗ್ರೆಸ್‌ನಲ್ಲಿಯೇ ಈ ಹುಚ್ಚನ ಮಾತಿಗೆ ಬೆಲೆ ಇಲ್ಲ. ಹುಚ್ಚುಚ್ಚು ಹೇಳಿಕೆಗಳಿಂದ ಹುಚ್ಚು ಪ್ರಚಾರ ಪಡೆಯುವ ಹುಚ್ಚ ಆಗಿದ್ದಾನೆ. ಈ ಹುಚ್ಚ ಸಿದ್ಧರಾಮಯ್ಯನಿಗೆ ಸೋನಿಯಾ ಗಾಂಧಿ ಹೇಳಿದರೂ ಅರ್ಥವಾಗಲ್ಲ. ನಾವು ಹೇಳಿದರೂ ಆಗಲ್ಲ. ಈ ಚಡ್ಡಿ ವಿಚಾರದಲ್ಲಿ ಕೀಳು ಮಟ್ಟದಲ್ಲಿ ಮಾತನಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಏಕೆ ಸೋತ? ನೂರು ಕಡೆ ನಿಂತರೂ ಕೂಡ ಸಿದ್ಧರಾಮಯ್ಯ ಸೋಲುವುದು ನಿಶ್ಚಿತ. ನಿಮ್ಮ ಯುವಕರನ್ನ ಕಂಟ್ರೋಲ್ ಮಾಡಿಕೊಳ್ಳುವ ಶಕ್ತಿ ನಿನಗೆ ಇಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಪಕ್ಷ. ಆದರೆ ಇವತ್ತು ಗೂಂಡಾಗಳ ಕೈಯಲ್ಲಿ ಪಕ್ಷ ಇದೆಯಲ್ಲಾ ಎಂಬ ನೋವು ಆ ಪಕ್ಷದ ಹಿರಿಯ ನಾಯಕರಿಗೂ ಇದೆ ಎಂದು ಹೇಳಿದರು.

ಆರ್ ಎಸ್ ಎಸ್ ಶಕ್ತಿಶಾಲಿಯಾಗಿ ಬೆಳೆದಿದೆ. ಇದನ್ನು ಇವತ್ತು ಸೋಲಿಸಲು ಆಗಲ್ಲ. ಹಾಗಾಗಿಯೇ ಆರ್‌ಎಸ್‌ಎಸ್ ಟಾರ್ಗೆಟ್ ಮಾಡ್ತಿದ್ದಾರೆ. ಈ ಹುಚ್ಚನನ್ನು ಕಟ್ಟಿಕೊಂಡು ಆ ಪಕ್ಷದವರಿಗೆ ಸಾಕಾಗಿ ಹೋಗಿದೆ. ಹೇಗೆ ಪಕ್ಷ ಕಟ್ಟೋದು ಅಂತಾ ಎಂದು ವ್ಯಂಗ್ಯವಾಡಿದರು.
Also read: ಖಾದಿ ನೇಕಾರರಿಗೆ 24.26 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ
ನಿಮ್ಮ ಕಾಂಗ್ರೆಸ್ ಮೂಲಗುಂಪು ಮಾಡಿರೋದು ಈ ಚೆಡ್ಡಿಯೇ, ನಿನಗೆ ಸೋನಿಯಾಗಾಂಧಿ ಹೇಳಿದರೆ ಕೇಳೋಲ್ಲ. ರಾಹುಲ್ ಗಾಂಧಿಗೆ ಹೇಳುವಂತಹ ಬುದ್ದಿ ಇಲ್ಲ. ಡಿಕೆಶಿಗೆ ನಿನಗೆ ಹೇಗೆ ಹೇಳಬೇಕು ಅಂತಾ ಗೊತ್ತಾಗ್ತಿಲ್ಲ. ನೀವು ಚುನಾವಣೆಗೆ ಎಲ್ಲಿ ನಿಲ್ಲಬೇಕು ಅಂತಾ ಗೊತ್ತಾಗ್ತಿಲ್ಲ. ೨೦ ಕಡೆ ಕರೆಯುತ್ತಿದ್ದಾರೆ ಅಂತಾ ಹೇಳ್ತೀರಾ, ೨೦ ಕಡೆ ನಿಂತುಕೊಳ್ಳಿ ಎಲ್ಲಾ ಕಡೆ ನಿಮ್ಮನ್ನು ಚೆಡ್ಡಿಯೇ ಸೋಲಿಸುತ್ತದೆ. ರಸ್ತೆಯಲ್ಲಿ ಹೋಗುವ ನಾಯಿ ಸಹ ನಿನಗೆ ಗೌರವ ಕೊಡಲು ಇಷ್ಟಪಡಲ್ಲ ಎಂದು ಕಠಿಣ ಪದಪ್ರಯೋಗ ಮಾಡಿದರು.

ವಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದಿರುವ ಮನುಷ್ಯ, ಅವನೊಬ್ಬ ಅಯೋಗ್ಯ. ಈ ರೀತಿ ಮಾತನಾಡುತ್ತಿರುವುದರಿಂದಲೇ ಕಾಂಗ್ರೆಸ್‌ನ ಹಲವು ನಾಯಕರು ಪಕ್ಷ ಬಿಟ್ಟು ಹೋಗ್ತಿದ್ದಾರೆ. ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರಕಾರ ಇರೋದು, ನಿಮ್ಮ ಗೂಂಡಾಗಿರಿ ನಡೆಯಲ್ಲ. ಸದ್ಯಕ್ಕೆ ವಿರೋಧ ಪಕ್ಷದಲ್ಲಿ ಇದ್ದೀರಾ, ಮುಂದೆ ಅಧಿಕೃತ ವಿಪಕ್ಷದಲ್ಲು ಇರಲ್ಲ, ಇದಕ್ಕೆ ಸಿದ್ದರಾಮಯ್ಯ ಅವಕಾಶ ಕೊಡಲ್ಲ ಎಂದು ವ್ಯಂಗ್ಯವಾಡಿದರು.
ಆರ್‌ಎಸ್‌ಎಸ್ ಸುಮ್ಮನಿದೆ ಬಿಜೆಪಿಗೇಕೆ ಕಷ್ಟ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ, ಆರ್‌ಎಸ್‌ಎಸ್ ನಮಗೆ ಸಂಸ್ಕಾರ ಕೊಟ್ಟಿದೆ. ನಾವು ಆರ್‌ಎಸ್‌ಎಸ್ ಸ್ವಯಂಸೇವಕರು. ಇಂತಹ ಹೇಳಿಕೆಯಿಂದ ನಮಗೆ ನೋವಾಗುವುದು ಸಹಜ. ನೀಡುವ ಒಂದು ಹೇಳಿಕೆಯಿಂದ ಕೋಟಿ ಜನರ ಮನಸ್ಸ್ಸಿಗೆ ನೋವು ಮಾಡಬೇಡಬೇಡಿ. ನಿಮ್ಮನ್ನು ಎಲ್ಲ ಕಡೆ ಸೋಲಿಸಿಯಾಗಿದೆ. ಗೆಲ್ಲಲು ನಿಮಗೆ ಜಾಗವಿಲ್ಲವಾಗಿದೆ. ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲಿಸುವುದು ಈ ಚಡ್ಡಿನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಮುಖ್ಯಸ್ಥರು ಬ್ರಾಹ್ಮಣರು ಎಂಬ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು, ಆರ್‌ಎಸ್‌ಎಸ್ ಪದಾಧಿಕಾರಿಗಳು ಮೇಲ್ವರ್ಗದವರಲ್ಲ, ಹಿಂದುಳಿದವರಲ್ಲ, ಎಲ್ಲರೂ ಹಿಂದುಗಳು. ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಾಕಲು ಹೋದವರಿಗೆ ಬುದ್ದಿವಾದ ಹೇಳಿದ್ದರೆ ದೊಡ್ಡವರಾಗುತ್ತಿದ್ದರು. ಹರ್ಷ ಕೊಲೆ ನಂತರ ಉದ್ರಿಕ್ತರನ್ನು ಸಮಾಧಾನಪಡಿಸಿ ಶಾಂತಿ ತರಲು ಪ್ರಯತ್ನಿಸಿದ್ದೆ. ಆದರೆ ಸಿದ್ದರಾಮಯ್ಯ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹುಚ್ಚುತನದಿಂದಲೇ ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಸ್ಥಾನ ಕಳೆದುಕೊಂಡಿದ್ದು, ಈ ಹುಚ್ಚುತನದಿಂದಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದು. ಇಂತಹ ಗೂಂಡಾಗಳ ಕೈಯಲ್ಲಿ ಸರ್ಕಾರ ಇರಬಾರದು ಎಂದು ಇವರನ್ನು ಜನರು ದೂರ ತಳ್ಳಿದ್ದಾರೆ. ಈ ಹುಚ್ಚುತನ ಬಿಡಬೇಕು ಎಂದರು.
ನಾವು ಆರ್‌ಎಸ್‌ಎಸ್‌ನವರೇ ಆಗಿದ್ದೇವೆ. ನಾವು ಬಿಜೆಪಿ ಕಟ್ಟಿ ಬೆಳೆಸಿದ್ದೇವೆ. ನಾವು ಆರ್‌ಎಸ್‌ಎಸ್‌ನಿಂದಲೇ ಸಂಸ್ಕಾರ ಕಲಿತು ಬಿಜೆಪಿ ನಡೆಸುತ್ತಿದ್ದೇವೆ. ನಮ್ಮ ಹಿರಿಯರು ಆರ್‌ಎಸ್‌ಎಸ್‌ನಲ್ಲಿ ಇರಬೇಕು ಇಲ್ಲವಾದರೇ, ಜನಸಂಘದಲ್ಲಿ ಇರಬೇಕು ಎಂದು ಆದೇಶ ಮಾಡಿದ್ದರು. ನಾವು ಕೂಡ ಆರ್‌ಎಸ್‌ಎಸ್‌ನವರಾದ್ದರಿಂದಲೇ ಈ ಬಗ್ಗೆ ಉತ್ತರ ನೀಡುತ್ತಿದ್ದೇವೆ ಎಂದರು.

ರಾಷ್ಟ್ರಭಕ್ತಿ ಕುತ್ತಿಗೆ ಮೇಲೆ ಇಡುವುದಲ್ಲ. ಹೃದಯದಲ್ಲಿ ದೇಶಭಕ್ತಿ ಇರಬೇಕು. ಪಾಕಿಸ್ತಾನಕ್ಕೆ ಇಡೀ ಜಗತ್ತೇ ಭಾರತದ ಜತೆ ಮೂಲೆಗುಂಪು ಮಾಡಿದೆ. ಕಾಶ್ಮೀರದ ಗಡಿ ಭಾಗದಲ್ಲಿ ರಕ್ಷಣೆಗೆ ಕೇಂದ್ರ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ನಮ್ಮ ತಾಕತ್ತನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ತೋರಿಸಿಕೊಟ್ಟಿದೆ. ಉಗ್ರರು ನೀಡುತ್ತಿರುವ ಉಪಟಳಕ್ಕೆ ನಮ್ಮ ರಕ್ಷಣಾ ಮಂತ್ರಿ, ಪ್ರಧಾನಿ ಸೂಕ್ತ ಉತ್ತರ ಕೊಡುತ್ತಾರೆ. ಇದರ ದುರ್ಲಾಭ ಪಡೆಯಲು ಓವೈಸಿಯಂತಹವರು ಪ್ರಯತ್ನಿಸುವುದು ಬೇಡ ಎಂದು ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಓವೈಸಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಎಸ್.ಎನ್. ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















