ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಾಂಕಾಂಗ್‌ನೊಂದಿಗೆ ಉತ್ತಮ ವ್ಯಾವಹಾರಿಕ ಬಾಂಧವ್ಯ ಹೊಂದುವ ಉದ್ದೇಶದಿಂದ ಇದೇ ಅಕ್ಟೋಬರ್ 11ರಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಕಾಂಗ್‌ಗೆ ನೇರ ವಿಮಾನ ಸಂಪರ್ಕ ಪ್ರಾರಂಭಿಸಲಾಗುತ್ತಿದ್ದು, ಕ್ಯಾಥೆ ಪೆಸಿಫಿಕ್ ವಿಮಾನವು ಹಾರಟ ನಡೆಸಲಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದರು.
ಬೆಂಗಳೂರು ವಿಮಾನ ನಿಲ್ದಾಣವೂ ದೇಶದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ವಿಶ್ವದ 8 ಪತಿಷ್ಠಿತ ವಿಮಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಗೇಟ್‌ವೇ ಎಂದೇ ಪರಿಗಣಿಸಿವೆ. ಇದರ ಹೆಮ್ಮೆಯ ಭಾಗವಾಗಿ ಇದೀಗ ಹಾಂಕಾಂಗ್‌ಗೆ ನೇರವಾಗಿ ವಿಮಾನ ಹಾರಟವನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದೆ ಎಂದರು.











Discussion about this post