ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಭದ್ರಾವತಿಯ ಎಚ್.ಕೆ. ಜಂಕ್ಷನ್‌ನ ಪಿಯುಸಿ ವಿದ್ಯಾರ್ಥಿ ಯಶವಂತ್ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಶವಂತ್ ಬಿಆರ್ ಪ್ರಾಜೆಕ್ಟ್ ನಲ್ಲಿರುವ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪಥಮ ಓದುತ್ತಿದ್ದ. ಕರೊನಾ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಾಗಿ ಯಶವಂತ ನಿಗೆ ಪಾಲಕರು ಮೊಬೈಲ್ ಕೊಡಿಸಿದ್ದರು. ಇದೀಗ ರೆಗ್ಯುಲರ್ ತರಗತಿಗಳು ನಡೆಯುತ್ತಿದ್ದು ಕಾಲೇಜಿನಿಂದ ಮನೆಗೆ ಬಂದಾಗಲೂ ಮೊಬೈಲ್ ಹಿಡಿದುಕೊಂಡಿರುತ್ತಿದ್ದ. ಮೊಬೈಲ್ ಹೆಚ್ಚಾಗಿ ಬಳಸಬೇಡ ಎಂದು ತಂದೆ ಸುರೇಶ್ ಯಶವಂತ್‌ಗೆ ಬುದ್ಧಿಮಾತು ಹೇಳಿದ್ದರು. ಇಷ್ಟಕ್ಕೆ ಬೇಸರಗೊಂಡ ಯಶವಂತ್ ಸೆ.3ರಂದು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಗೆ ವಾಪಸ್ ಬಂದಿರಲಿಲ್ಲ.

Also read: ಕೇಸರಿಯಲ್ಲಿ ಮಿಂದೆದ್ದ ಶಿವಮೊಗ್ಗ: ಗಣಪತಿ ರಾಜಬೀದಿ ಉತ್ಸವಕ್ಕೆ ಹರಿದು ಬಂದ ಜನಸಾಗರ…










Discussion about this post