ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಪ್ರತಿಮ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದಂದೇ ದೇಶದ್ರೋಹಿ ಪಿಎಫ್’ಐ ಸಂಘಟನೆಯನ್ನು ನಿಷೇಧಿಸಿರುವುದು ಸಂತಸ ಮೂಡಿಸಿದ್ದು, ಎಲ್ಲ ಸ್ವಾತಂತ್ರ ಹೋರಾಟಗಾರರ ಆತ್ಮಕ್ಕೆ ಇಂದು ಶಾಂತಿ ದೊರೆತಿರುತ್ತದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಪಿಎಫ್’ಐ ಸೇರಿದಂತೆ ಹಲವು ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಅವರು ಮಾತನಾಡಿದರು.
ಹಸ್ಕರ್ ಲಿಯೇ ಪಾಕಿಸ್ತಾನ್ ಲಡ್ತೆ ಹುವೇ ಲೇಂಗೆ ಹಿಂದೂಸ್ಥಾನ್ ಎಂಬ ಘೋಷಣೆ ಮಾಡಿಕೊಂಡು ಓಡಾಡುತ್ತಿದ್ದರು. ಇವರು ನಡೆಸಿರುವ ಕೃತ್ಯಗಳು ಒಂದೇ ಎರಡೇ… ಇಂತಹ ಸಂಘಟನೆಯನ್ನು ನಿಷೇಧಿಸಿರುವುದನ್ನು ಪಕ್ಷಬೇಧ ಮರೆತು ಸ್ವಾಗತಿಸಬೇಕು. ಬದಲಾಗಿ ಯಾರು ನಿಷೇಧ ಮಾಡಿದ್ದು ಎಂಬ ಪ್ರಶ್ನೆ ಉದ್ಬವವಾಗಬಾರದು ಎಂದರು.
ದೇಶ ವಿರೋಧಿ ಚಟುವಟಿಕೆ, ಉಗ್ರರ ಜೊತೆ ಸಂಬಂಧ, ಉಗ್ರ ಚಟುವಟಿಕೆಗಳಿಗೆ ಫಂಡ್ ಸಂಗ್ರಹ, ಯುವಕರಿಗೆ ಉಗ್ರ ಸಂಘಟನೆಗಳಿಗೆ ಸೇರಲು ಪ್ರೇರೇಪಣೆ ಸೇರಿದಂತೆ ಇಂತಹ ಕೃತ್ಯಗಳಿಗಾಗಿ ಈ ಸಂಘಟನೆಯನ್ನು ನಿಷೇಧ ಮಾಡಲಾಗಿದ್ದು, ಎಲ್ಲ ಧರ್ಮದ ಪ್ರಮುಖರು ಇದನ್ನು ಸ್ವಾಗತಿಸಬೇಕು ಎಂದರು.
ಪಾಕಿಸ್ಥಾನದ ಪರವಾಗಿ ಇನ್ನೂ ಬಹಳಷ್ಟು ಮಂದಿಗೆ ಮನಸ್ಸಿದೆ. ಇಂತಹ ವಿಚಾರದಲ್ಲಿ ಮುಸ್ಲಿಂ ಮುಖಂಡರು, ಹಿರಿಯರು ಹಾಗೂ ರಾಷ್ಟ್ರ ಭಕ್ತ ಮುಸ್ಲೀಮರು ತಮ್ಮ ಹುಡುಗರಿಗೆ ಮನಃಪರಿವರ್ತನೆ ಮಾಡಬೇಕು. ರಾಷ್ಟçವನ್ನು ಪ್ರೇಮಿಸುವ ಮನಃಸ್ಥಿತಿಯನ್ನು ಬೆಳೆಸುವಲ್ಲಿ ಪ್ರಯತ್ನಗಳನ್ನು ಮಾಡಬೇಕು. ಇಲ್ಲದೇ ಹೋದಲ್ಲಿ ಇಂತಹ ದೇಶದ್ರೋಹಿ ಚಟುವಟಿಕೆಯ ಪರಿಣಾಮಗಳಿಂದ ನೀವೂ ಸಹ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂಘಟನೆಯನ್ನು ನಿಷೇಧಿಸಲು ಎಲ್ಲ ರಾಜ್ಯಗಳಿಂದ ಕೇಂದ್ರಕ್ಕೆ ದಾಖಲೆಗಳನ್ನು ಕಳುಹಿಸಲಾಗಿತ್ತು. ಇದು ಹಿಂದೆಯೇ ಆಗಬೇಕಿತ್ತು. ಮಾತ್ರವಲ್ಲ, ಈ ಹಿಂದೆಯೇ ಪರಿಷತ್’ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಅವರು ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಬ್ಯಾನ್ ಮಾಡಿ ಎಂದಿದ್ದರು. ಆದರೆ ಪ್ರಕ್ರಿಯೆ ನಡೆಸದೆ ಬ್ಯಾನ್ ಮಾಡಲು ಸಾಧ್ಯನಾ ಎಂದು ಪ್ರಶ್ನಿಸಿ, ವ್ಯಂಗ್ಯವಾಡಿದ್ದರು ಎಂದರು.
ಹರ್ಷನ ಕೊಲೆಯಾದಾಗ ಕೋಮುಗಲಭೆ ನಡೆಯಿತು. ಪ್ರೇಮ್ ಸಿಂಗ್ ಎಂಬ ಅಮಾಯಕನ ಕೊಲೆಗೆ ಯತ್ನಿಸಲಾಯಿತು. ಆತನ ಕೊಲೆ ಸಂಚುಕೊರರು ಅಂತಾರಾಷ್ಟ್ರೀಯ ಉಗ್ರರ ಜೊತೆಯ ಲಿಂಕ್ ಹೊಂದಿದ್ದನು. ಇಂತಹ ಚಟುವಟಿಕೆಯಲ್ಲಿ ಭಾಗಿಯಾದನ ವಿರುದ್ಧ ಯುಎಪಿಎ ಕಾಯ್ದೆ ಹಾಕಲಾಗಿದೆ ಎಂದರು.
ಮುಸ್ಲಿಂ ಮತಬ್ಯಾಂಕ್’ಗಾಗಿ ಕಾಂಗ್ರೆಸ್ ಪಿಎಫ್’ಐ ಸಂಘಟನೆಯನ್ನು ಪೋಷಿಸಿಕೊಂಡು ಬಂದಿತ್ತು ಎಂದು ಕಿಡಿ ಕಾರಿದ ಅವರು, ರಾಷ್ಟ್ರಭಕ್ತಿ ಬೆಳೆಸುವ ಕೆಲಸಕ್ಕೆ ಎಲ್ಲ ಪಕ್ಷಗಳು ಒತ್ತು ನೀಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post