ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್‌ಎಲ್ ನ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನ್ಯೂಟೌನ್, ಶಾರದಾ ಮಂದಿರದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಸುಗಾಲಿ ಲೋಕನಾಥ್ ಮತ್ತು ತರಂಗ ಕಿವುಡ ಮತ್ತು ಮೂಕರ ಶಾಲೆಯ ವಿದ್ಯಾರ್ಥಿ ಪ್ರತಿನಿಗಳು ಜ್ಯೋತಿ ಬೆಳಗಿಸಿ, ಗಾಂಧಿಜಿ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಾ. ಎಸ್. ಕವಿತ ಭಗವದ್ಗೀತೆ, ನೋರಾ ಮೆನೆಜಸ್ ಬೈಬಲ್ ಮತ್ತು ಹಫೀಝ್-ಉರ್-ರೆಹಮಾನ್ ಕುರಾನ್ ಪಠಿಸಿದರು.
ಸ್ವಚ್ಛ ಭಾರತ, ಗ್ರಾಮೋಧ್ಯೋಗಗಳ ಮೂಲಕ ಸ್ವಾಬಲಂಬನೆ. ಗಾಂಧಿಜಿಯವರ ಕನಸು – ಎಂಬ ನಾಟಕಗಳನ್ನು ತರಂಗ ಕಿವುಡ ಮತ್ತು ಮೂಕರ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಹಾಗೂ ವಿದ್ಯಾರ್ಥಿಗಳಿಂದ ರಚಿತವಾದ ಸ್ವಾತಂತ್ರ್ಯ ಹೋರಾಟಗಾರರ ರೇಖಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ವಿಐಎಸ್‌ಎಲ್ ಮತ್ತು ಇಸ್ಪಾತ್ ಮಹಿಳಾ ಸಮಾಜದವರು ಇದೇ ಸಂದರ್ಭದಲ್ಲಿ ತರಂಗ ಕಿವುಡ ಮತ್ತು ಮೂಕರ ಶಾಲೆಗೆ ಬೇಕಾದ ಸಾಮಗ್ರಿಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಸ್ತಾಂತರಿಸಿದರು.
Also read: ಬಗರ್‌ಹುಕುಂ ಭೂಮಿ ವಜಾಗೊಳಿಸಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯ
ವಿಐಎಸ್‌ಎಲ್ ಉದ್ಯೋಗಿಗಳು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು, ವಿದ್ಯಾರ್ಥಿಗಳು, ತರಂಗ ಕಿವುಡ ಮತ್ತು ಮೂಕರ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















