ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರೆಂಟ್‌ನ್ನು ಕಾಣದ ಕುಗ್ರಾಮದಲ್ಲಿ ಬೆಳೆದ ನನಗೆ ವಿಶ್ವವನ್ನು ಪರಿಚಯಿಸಿದ್ದು ವಾಯುಸೇನೆ ಎಂದು ವಾಯುಸೇನೆಯ ಹಿರಿಯ ಕಾರ್ಪೊರಲ್ ವೇಣುಗೋಪಾಲ್ ಹೇಳಿದರು.
ನಗರದ ಸೈನಿಕ್ ಪಾರ್ಕ್‌ನಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾ ಮಾಜಿ ಸೈನಿಕ ಸಂಘದಿಂದ ಹಮ್ಮಿಕೊಂಡಿದ್ದ ಭಾರತೀಯ ವಾಯುಸೇನೆ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸರ್ಜಿ ಫೌಂಡೇಶನ್ ವತಿಯಿಂದ ವಾಯುಸೇನೆಯ ಮಾಜಿ ಸೈನಿಕರಿಗೆ ನೀವು ನಮ್ಮ ಹೆಮ್ಮೆ ಶೀರ್ಷಿಕೆಯ ನೆನಪಿನ ಕಾಣಿಕೆ ಸ್ವೀಕರಿಸಿದ ಸಂದರ್ಭ ಅವರು ಮಾತನಾಡಿದರು. ಅಂದಿನ ಕಾಲದಲ್ಲಿ ಮೂರು ತಿಂಗಳಿಗೊಮ್ಮೆ ಆಕಾಶದಲ್ಲಿ ವಿಮಾನವನ್ನು ನೋಡುತ್ತಿದ್ದೆವು. ಕರೆಂಟಿಲ್ಲದ ಊರಲ್ಲಿ ಅಂದು ವಾಯುಸೇನೆಗೆ ಆಯ್ಕೆಯಾಗಿದ್ದ ಬೆರಳೆಣಿಕೆಯ ಮಂದಿಯಲ್ಲಿ ನಾನೂ ಒಬ್ಬನಾಗಿದ್ದು ಹೆಮ್ಮೆ ಹಾಗೂ ಮರೆಯಲಾಗದು ಎಂದು ಹೇಳಿದರು.

Also read: ಮತಾಂಧರ ಚಟುವಟಿಕೆಗಳನ್ನು ಸಮರ್ಪಕವಾಗಿ ಹತ್ತಿಕ್ಕುವಲ್ಲಿ ಮೋದಿ ಸರ್ಕಾರ ಯಶಸ್ವಿ: ಶಾಸಕ ಈಶ್ವರಪ್ಪ
ಕಾರ್ಯಕ್ರಮವನ್ನು ಕರ್ನಲ್ ಡಾ.ರಘುನಾಥ್ ಉದ್ಘಾಟಿದರು. ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಕಾರ್ಯದರ್ಶಿ ಉಮೇಶ್‌ಬಾಪಟ್, ಸಂಚಾಲಕ ಶ್ರೀಕಾಂತ್, ಮಹಾಬಲೇಶ್ವರ ಹೆಗಡೆ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮೊದಲು ಹುತಾತ್ಮ ಯೋಧರಿಗೆ ಮೌನ ಆಚರಿಸಲಾಯಿತು.

ಕಳೆದ 15 ವರ್ಷಗಳಿಂದ ಮಕ್ಕಳ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದು, ನಮ್ಮ ಆಸ್ಪತ್ರೆಯಲ್ಲಿ ಆರಂಭದಿಂದಲೂ ಸೈನಿಕರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ, ಎಲ್ಲ ಸೈನಿಕರೂ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಮನವಿ ಮಾಡಿದರು.











Discussion about this post