No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

India-Indonesia | ಸಂಸ್ಕೃತಿಯಿಂದ ರಕ್ಷಣೆಯವರೆಗೆ ಸಹಕಾರದ ಹೊಸ ಅಧ್ಯಾಯ

kalpa News by kalpa News
July 13, 2026
in Special Articles
0
a new chapter in india indonesia cooperation
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಭಾರತದ (India) ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಇಂಡೋನೇಷಿಯಾದ (Indonesia) ನೆಲದಲ್ಲಿ ನಿಂತು, ಅಲ್ಲಿನ ಇತಿಹಾಸ ಪ್ರಸಿದ್ಧ ಬ್ರಹ್ಮ, ವಿಷ್ಣು ಮಹೇಶ್ವರನ ಪ್ರಂಬನನ್ ದೇಗುಲವನ್ನು ಜೀರ್ಣೋದ್ದಾರ ಮಾಡುವ ಘೋಷಣೆಯನ್ನು ಮಾಡಿದರು. ಈ ಘೋಷಣೆ ವಿದೇಶಿ ನೆಲದಲ್ಲಿ ಭಾರತದ ಪ್ರಧಾನಿಯೊಬ್ಬ ಮಾಡಿದ ಘೋಷಣೆ ಅಷ್ಟೇ ಆಗಿರದೆ, ಉಭಯ ದೇಶಗಳ ನಾಗರಿಕ ಬಾಂಧವ್ಯಗಳನ್ನು ಪುನರುತ್ಥಾನದ ಶಂಖನಾದದಂತಿದೆ.

ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು 2,000 ವರ್ಷಗಳಿಗಿಂತಲೂ ಹಳೆಯದಾಗಿದೆ. ಭಾರತ ಮತ್ತು ಇಂಡೋನೇಷಿಯಾ ನಡುವಿನ ಸಂಬಂಧಗಳು ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗಿಲ್ಲ; ಅವು ಶತಮಾನಗಳಷ್ಟು ಹಳೆಯ ನಾಗರಿಕ, ಸಾಂಸ್ಕೃತಿಕ ಹಾಗೂ ವ್ಯಾಪಾರಿಕ ಬಾಂಧವ್ಯಗಳ ಮೇಲೆ ನಿರ್ಮಿತವಾಗಿವೆ.

ಇತ್ತೀಚೆಗೆ ಇಂಡೋನೇಷ್ಯಾ ಭೇಟಿ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ್ಯಕರ್ತಾದಲ್ಲಿರುವ ಪ್ರಸಿದ್ಧ ಪ್ರಂಬನನ್ ದೇವಾಲಯದ ಜೀರ್ಣೋದ್ಧಾರಕ್ಕೆ ಭಾರತ ನೆರವು ನೀಡುವುದಾಗಿ ಘೋಷಿಸಿರುವುದು, ಈ ಸಂಬಂಧಕ್ಕೆ ಹೊಸ ದಿಕ್ಕನ್ನು ನೀಡಿದೆ.

Also Read>> Yelahanka – Arasikere | ಜುಲೈ 14ರಿಂದ ಮೆಮು ರೈಲು ಸಂಚಾರ ಆರಂಭ

ಇಂಡೋನೇಷ್ಯಾ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ಪ್ರದಾನ ಮಾಡಿರುವುದು ಕೇವಲ ಒಬ್ಬ ನಾಯಕರಿಗೆ ಸಲ್ಲಿಸಿದ ಗೌರವವಲ್ಲ. ಇದು ಭಾರತದ ಪುರಾತನ ನಾಗರಿಕತೆ ಮತ್ತು ಎರಡು ದೇಶಗಳ ನಡುವೆ ಇರುವ ಆಳವಾದ ಸಾಂಸ್ಕೃತಿಕ ಬಾಂಧವ್ಯದ ಮಾನ್ಯತೆಯಾಗಿದೆ.

ಭಾರತವು ತನ್ನ ನಾಗರಿಕತೆಯನ್ನು ಇತಿಹಾಸದ ಭಾಗವಾಗಿ ಮಾತ್ರ ನೋಡದೇ, ಭವಿಷ್ಯದ ಸಹಕಾರಕ್ಕೆ ಒಂದು ಬಲವಾದ ಆಧಾರವಾಗಿ ಬಳಸುತ್ತಿದೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ತಮ್ಮಲ್ಲಿ ಭಾರತೀಯ ಡಿಎನ್‌ಎ ಇದೆ ಎಂದು ಹೇಳಿರುವುದು ಹಾಗೂ ಭಾರತದ ಆಡಳಿತವನ್ನು ಪ್ರಶಂಸಿಸಿರುವುದು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ತೋರಿಸುತ್ತದೆ.

India & Indonesia | 2 ಶತಮಾನಗಳ ಸಂಬಂಧ

ಭಾರತ ಹಾಗೂ ಇಂಡೋನೇಷಿಯ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಈ ಸಂಬಂಧಕ್ಕೆ ಸುಮಾರು 2 ಶತಮಾನಗಳಷ್ಟು ಇತಿಹಾಸವಿದೆ. ಸಮುದ್ರದಿಂದ ಬೇರ್ಪಟ್ಟಿರುವ ಈ ಎರಡು ದೇಶಗಳು, ನೌಕಯಾನದ ಮೂಲಕ ಒಂದನೊಂದು ಬೆಸೆದುಕೊಂಡಿದ್ದವು. ಸಮುದ್ರ ಯಾನದ ಮೂಲಕ ಉಭಯ ದೇಶಗಳ ನಡುವೆ ಸಾಂಬಾರು ಪದಾರ್ಥ, ಆಹಾರ ಧಾನ್ಯಗಳು, ಬಟ್ಟೆಗಳು, ಬೆಲೆ ಬಾಳುವ ಹರಳುಗಳು, ಚಿನ್ನ ಬೆಳ್ಳಿಗಳ ಆಯಾತ ನಿರ್ಯಾತ ನಡೆಯುತ್ತಿತ್ತು.ಈ ಸಮುದ್ರ ಮಾರ್ಗ ಕೇವಲ ವ್ಯಾಪಾಕ್ಕೆ ಮಾತ್ರ ಮೀಸಲಾಗದೆ, ಕಲೆ, ಸಂಸ್ಕೃತಿ ಹಾಗೂ ಜ್ಞಾನ ಪ್ರಸಾರಕ್ಕೂ ಕಾರಣವಾಗಿತ್ತು. ಭಾರತ ಬೌದ್ಧ ಭಿಕ್ಕುಗಳು ಇದೇ ಮಾರ್ಗದ ಮೂಲಕ ತೆರಳಿ ಜ್ಞಾನ ಪ್ರಸಾರ ಮಾಡಿದ್ದರು. ಪಲ್ಲವರ ದೂರೆಯು ಇಂಡೋನೇಷಿಯಾದಲ್ಲಿ ವಿಶ್ವದ ಬೃಹತ್ ದೇಗುಲ ನಿರ್ಮಿಸಲು ಸಹ ಈ ಸಮುದ್ರ ಮಾರ್ಗವೇ ಆಧಾರವಾಗಿತ್ತು. ಇಂದಿಗೂ ಸಹ ಇಂಡೋನೇಷಿಯಲ್ಲಿ ರಾಮಾಯಣ, ಮಹಾಭಾರತದಂಥ ಪೌರಾಣಿಕ ಗ್ರಂಥಗಳು ಪ್ರಸ್ತುತವಾಗಿರುವುದು ಉಭಯ ದೇಶಗಳ ನಡುವಿನ ನಾಗರಿಕತೆಯ ಕೊಂಡಿಯಾಗಿದೆ.

ಇದೇ ಸಂಬಂಧದ ಎಳೆಯನ್ನು ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಧವ್ಯದ ಹೊಸ ವಸ್ತ್ರವನ್ನು ನೇಯುತ್ತಿದ್ದಾರೆ. ಭಾರತದ ಅಂಡಮಾನ್ ನಿಕೋಬಾರ್ ಹಾಗೂ ಇಂಡೋನೇಷಿಯಾದ ನಡುವೆ ಮಲ್ಲಕಾ ಜಲಸಂಧಿಯಿದೆ. ಈ ಜಲಸಂಧಿಯ ಮೂಲಕವೇ ಪೂರ್ವಾತ್ಯ ರಾಷ್ಟ್ರಗಳ ಬಹುತೇಕ ವ್ಯಾಪಾರ ಚಟುವಟಿಕೆಗಳು ನಡೆಯುತ್ತವೆ. ಈ ಜಲ ಮಾರ್ಗದಲ್ಲಿ ಪ್ರಾಬಲ್ಯ ಸಾಧಿಸಬೇಕಾದರೆ ಇಂಡೋನೇಷಿಯಾದೊಂದಿಗೆ ಬಾಂಧವ್ಯ ಪುನಃಸ್ಥಾಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ನರೇಂದ್ರ ಮೋದಿ ಅವರು ಭಾವನಾತ್ಮಕವಾದ ಅಸ್ತ್ರ ಹಿಡಿದಿದ್ದಾರೆ. ಸಹ ನಾಗರಿಕತೆಯಿಂದ ಸಹ ರಕ್ಷಣಾ ತಂತ್ರದ ರಾಜಕೀಯ ತಂತ್ರ ಹೆಣೆದಿದ್ದಾರೆ.

ಹಾಗೆ ನೋಡಿದ್ರೆ, ಭಾರತ ಹಾಗೂ ಇಂಡೋನೇಷಿಯಾ ನಡುವುನ ರಾಜತಾಂತ್ರಕ ಬಾಂಧ್ಯವ ಅಷ್ಟರಲ್ಲಿಯೇ ಇತ್ತು. 1965ರ ಯುದ್ಧದಲ್ಲಿ ಇಂಡೋನೇಷಿಯಾ ಸಂಪೂರ್ಣವಾಗಿ ಪಾಕಿಸ್ತಾನದ ಪರವಾಗಿಯೇ ನಿಂತಿತ್ತು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿನ ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ತನ್ನ ನೆಲವನ್ನು ಬಿಟ್ಟು ಕೊಡಲು ಸಿದ್ಧವಾಗಿತ್ತು. ಇಂಥ ರಾಷ್ಟ್ರ ಇಂದು ಸಂಪೂರ್ಣವಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಮತ್ತು ದೂರದರ್ಶಿ ವಿದೇಶಾಂಗ ನೀತಿಯ ಪರಿಣಾಮವಾಗಿ, ಅಂದು ಪಾಕಿಸ್ತಾನವನ್ನು ಬೆಂಬಲಿಸಿದ್ದ ಅದೇ ಇಂಡೋನೇಷ್ಯಾ, ಇಂದು ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತದ ಅತ್ಯಂತ ನಿಕಟ ಹಾಗೂ ಆಪ್ತ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ.

ರಾಮಾಯಣ, ಮಹಾಭಾರತ, ಸಂಸ್ಕೃತ, ಗರುಡ ಮತ್ತು ಬಾಲಿ ಮೊದಲಾದ ಸಾಮಾನ್ಯ ಸಾಂಸ್ಕೃತಿಕ ಚಿಹ್ನೆಗಳು ಈಗ ಕೇವಲ ಪರಂಪರೆಯ ಸಂಕೇತಗಳಲ್ಲ; ಅವು ಭಾರತ-ಇಂಡೋನೇಷ್ಯಾ ಸಂಬಂಧಗಳ ಪ್ರಮುಖ ಅಸ್ತಿವಾರಗಳಾಗಿವೆ.

ವಿಕಾಸ್ ಭೀ, ವಿರಾಸತ್ ಭೀ ಎಂಬ ದೃಷ್ಟಿಕೋನದಡಿ, ಭಾರತವು ಇಂಡೋನೇಷ್ಯಾದ ಪ್ರಸಿದ್ಧ ಪ್ರಾಂಬನನ್ ದೇವಸ್ಥಾನದ ಸಂರಕ್ಷಣೆಗೆ ಸಹಾಯ ಮಾಡಲು ಮುಂದಾಗಿದೆ. ಇದು ಹಂಚಿಕೊಂಡ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವತ್ತ ಭಾರತದ ಬದ್ಧತೆಯನ್ನು ತೋರಿಸುತ್ತದೆ.ಹಳೆಯ ಕಾಲದಲ್ಲಿ ಭಾರತೀಯ ವ್ಯಾಪಾರಿಗಳು ಮತ್ತು ಸಂನ್ಯಾಸಿಗಳು ನಿರ್ಮಿಸಿದ ನಂಬಿಕೆಯ ಸೇತುವೆಗಳನ್ನು, ಇಂದು ಭಾರತವು ರಕ್ಷಣಾ, ಶಿಕ್ಷಣ, ತಂತ್ರಜ್ಞಾನ ಮತ್ತು ಸಾಗರ ಭದ್ರತೆ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಬಳಸುತ್ತಿದೆ.

ಭಾರತದ ಸಾಫ್ಟ್ ಪವರ್ ಈಗ ಯೋಗ ಮತ್ತು ಸಂಸ್ಕೃತಿಗೆ ಮಾತ್ರ ಸೀಮಿತವಾಗಿಲ್ಲ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ಮತ್ತು ಪರಂಪರೆಯ ಸಂಕ್ಷಣೆ-ಈಗ ಭಾರತದ ಜಾಗತಿಕ ಪ್ರಭಾವದ ಭಾಗವಾಗಿವೆ.

ಒಮ್ಮೆ 1965ರಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದ ಇಂಡೋನೇಷ್ಯಾ, ಇಂದು ಭಾರತದ ಪ್ರಮುಖ ತಂತ್ರಾತ್ಮಕ ಸಹಭಾಗಿಯಾಗಿ ಪರಿಣಮಿಸಿರುವುದು ಭಾರತದ ಬಲಿಷ್ಠ ವಿದೇಶಾಂಗ ನೀತಿಯನ್ನು ತೋರಿಸುತ್ತದೆ.

ಮಹತ್ವದ ಒಪ್ಪಂದಗಳು ಮತ್ತು ಸಹಕಾರ

ಭಾರತ-ಇಂಡೋನೇಷ್ಯಾ ಸಂಬಂಧಗಳು ಈಗ ರಕ್ಷಣಾ, ಆರ್ಥಿಕ, ತಂತ್ರಜ್ಞಾನ ಮತ್ತು ಸಮುದ್ರ ಸಹಕಾರದ ಕ್ಷೇತ್ರಗಳಲ್ಲಿ ಹೊಸ ಹಂತಕ್ಕೆ ಪ್ರವೇಶಿಸಿವೆ.

ರಕ್ಷಣಾ ಕ್ಷೇತ್ರ
ಇಂಡೋನೇಷ್ಯಾ ಬ್ರಹ್ಮೋಸ್ ಸೂಪರ್ಸೋನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ಅಸ್ತ್ರ ಏರ್-ಟು-ಏರ್ ಕ್ಷಿಪಣಿಗಳನ್ನು ಖರೀದಿಸಿರುವುದು ಭಾರತದ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ. ಭಾರತೀಯ ರಕ್ಷಣಾ ಸಂಸ್ಥೆಗಳಲ್ಲಿ ತರಬೇತಿ ಅವಕಾಶಗಳು ಸಹ ಸಹಕಾರವನ್ನು ಬಲಪಡಿಸುತ್ತಿವೆ.

ಸಾಗರ ಭದ್ರತೆ
ಕರಾವಳಿ ರಕ್ಷಣೆ, ನೀಲಿ ಆರ್ಥಿಕತೆ ಮತ್ತು ಬಂದರು ಅಭಿವೃದ್ಧಿಗೆ ಸಂಬಂಧಿಸಿದಂತೆ ಒಪ್ಪಂದಗಳು ಕೈಗೊಳ್ಳಲಾಗಿದೆ. ಮಲಕ್ಕಾ ಜಲಸಂಧಿಗೆ ಸಮೀಪದಲ್ಲಿರುವ ಸಬಾಂಗ್ ಬಂದರು ಅಭಿವೃದ್ಧಿ ಮಹತ್ವದ್ದಾಗಿದೆ.

ಕೈಗಾರಿಕೆ ಮತ್ತು ಖನಿಜಗಳು
ಅಪರೂಪದ ಖನಿಜಗಳು ಮತ್ತು ಕೈಗಾರಿಕಾ ಸಹಕಾರದ ಭಾಗವಾಗಿ, ಉಕ್ಕು, ನಿಕಲ್ ಮತ್ತು ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಗೆ ಸಂಬಂಧಿಸಿದ ಯೋಜನೆಗಳು ರೂಪುಗೊಂಡಿವೆ. ಇದು ಜಾಗತಿಕ ಸರಬರಾಜು ಸರಪಳಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಅಂತರಿಕ್ಷ
ಅಂತರಿಕ್ಷ ಕ್ಷೇತ್ರದಲ್ಲಿ, ಉಪಗ್ರಹ ತಂತ್ರಜ್ಞಾನ, ಸಂಶೋಧನೆ ಮತ್ತು ಡೇಟಾ ಹಂಚಿಕೆಯಲ್ಲಿ ಸಹಕಾರ ವಿಸ್ತರಿಸಲಾಗುತ್ತಿದೆ. ಇದು ಕೃಷಿ, ವಿಪತ್ತು ನಿರ್ವಹಣೆ ಮತ್ತು ಸಂಪರ್ಕ ವ್ಯವಸ್ಥೆಗಳಿಗೆ ಸಹಕಾರ ನೀಡುತ್ತದೆ.

ಶಿಕ್ಷಣ ಕ್ಷೇತ್ರ
ಐಐಎಂ ಬೆಂಗಳೂರು ಇಂಡೋನೇಷ್ಯಾದಲ್ಲಿ ತನ್ನ ಮೊದಲ ವಿದೇಶಿ ಕ್ಯಾಂಪಸ್ ಆರಂಭಿಸುವ ಮೂಲಕ, ಭವಿಷ್ಯದ ವೃತ್ತಿಪರ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸುತ್ತಿದೆ.JNNCE Shivamoggaಪ್ರಜಾಸತ್ತಾತ್ಮಕ ಸಹಕಾರ
ಪ್ರಜಾಸತ್ತಾತ್ಮಕ ಸಹಕಾರದಡಿ, ಭಾರತವು ಇಂಡೋನೇಷ್ಯಾಕ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳ ಅಭಿವೃದ್ಧಿಯಲ್ಲಿ ನೆರವು ನೀಡುತ್ತಿದೆ.

ಆರೋಗ್ಯ ಕ್ಷೇತ್ರ
ಭಾರತವು ಕಡಿಮೆ ದರದ ಔಷಧಿಗಳನ್ನು ಒದಗಿಸುವುದರ ಜೊತೆಗೆ ವೈದ್ಯಕೀಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿದೆ. ಮಧ್ಯಾಹ್ನದ ಊಟ ಯೋಜನೆ ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮಾದರಿಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಕೃಷಿ ಕ್ಷೇತ್ರ
ಭಾರತವು ಗುಣಮಟ್ಟದ ಗೋಧಿ ಬೀಜಗಳನ್ನು ಪೂರೈಸಿ ಆಹಾರ ಭದ್ರತೆಯನ್ನು ಉತ್ತೇಜಿಸುತ್ತದೆ.

ಡಿಜಿಟಲ್ ಕ್ಷೇತ್ರ
ಯುಪಿಐ ಮತ್ತು ಕ್ಯೂಆರ್’ಐಎಸ್ ನಡುವಿನ ಸಂಪರ್ಕ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಸಹಕಾರ ಹೆಚ್ಚುತ್ತಿದೆ.

ವಿಪತ್ತು ನಿರ್ವಹಣೆ
ಮುನ್ನೆಚ್ಚರಿಕಾ ವ್ಯವಸ್ಥೆಗಳು ಮತ್ತು ಸಂಯೋಜಿತ ಪ್ರತಿಕ್ರಿಯೆ ಮೂಲಕ ಜೀವಗಳನ್ನು ರಕ್ಷಿಸಲು ಒಪ್ಪಂದಗಳು ಸಹ ಸಹಾಯ ಮಾಡುತ್ತವೆ.

ಒಟ್ಟಿನಲ್ಲಿ, ಭಾರತ ಮತ್ತು ಇಂಡೋನೇಷಿಯಾ ನಡುವಿನ ಸಂಬಂಧಗಳು ಈಗ ನಾಗರಿಕ ಬಾಂಧವ್ಯದಿಂದ ವ್ಯೂಹಾತ್ಮಕ ಪಾಲುದಾರಿಕೆಗೆ ರೂಪಾಂತರಗೊಂಡಿವೆ. ಭಾರತ-ಇಂಡೋನೇಷ್ಯಾ ಸಂಬಂಧಗಳು ಹಳೆಯ ನಾಗರಿಕತೆಯ ಬಲವನ್ನು ಆಧುನಿಕ ತಂತ್ರಾತ್ಮಕ ಸಹಕಾರಕ್ಕೆ ಬಳಸಿಕೊಳ್ಳುವ ವಿಶಿಷ್ಟ ಮಾದರಿಯಾಗಿದೆ. ಹಂಚಿಕೊಂಡ ಪರಂಪರೆ ಮತ್ತು ಭವಿಷ್ಯದ ದೃಷ್ಟಿಕೋನ ಒಂದಾಗಿ ಬಂದಾಗ, ಪ್ರಾದೇಶಿಕ ಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಪ್ರಭಾವವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಪ್ರಾಚೀನ ಸಂಸ್ಕೃತಿಯ ಬೇರುಗಳಿಂದ ಆಧುನಿಕ ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರದವರೆಗೆ ವಿಸ್ತರಿಸಿರುವ ಈ ಸ್ನೇಹ, ಮುಂದಿನ ದಿನಗಳಲ್ಲಿ ಜಾಗತಿಕ ರಾಜಕೀಯ ಸಮತೋಲನದಲ್ಲಿಯೂ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalpa News Advertising DisclaimerKalahamsa Infotech private limited

Tags: DefenceDisaster ManagementEducationElectronic Voting MachinesEVMsIndonesiaTrimurtiUNESCO World HeritageUPI–QRISVikas BhiVirasat Bhiಇಂಡೋನೇಷಿಯಾಇಂಡೋನೇಷ್ಯಾಪ್ರಧಾನಿ ನರೇಂದ್ರ ಮೋದಿಭಾರತರಾಜತಾಂತ್ರಿಕ ನಡೆವಿಶೇಷ ಲೇಖನ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

S. Janaki | ಗಾನ ಮಾಧುರ್ಯೆ ಎಂದೆಂದಿಗೂ ಚಿರಸ್ಥಾಯಿ: ಗುರುಮೂರ್ತಿ

Next Post

Bengaluru | ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ನಿಧನ

kalpa News

kalpa News

Next Post
former minister ramachandre gowda passes away in bengaluru

Bengaluru | ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ನಿಧನ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL