No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

S. Janaki | ಗಾನ ಮಾಧುರ್ಯೆ ಎಂದೆಂದಿಗೂ ಚಿರಸ್ಥಾಯಿ: ಗುರುಮೂರ್ತಿ

ಸೊರಬದಲ್ಲಿ ಸ್ವರ ಸಾಮ್ರಾಜ್ಞೆ ಎಸ್. ಜಾನಕಿಯಮ್ಮನಿಗೆ ನುಡಿ ನಮನ

kalpa News by kalpa News
July 13, 2026
in ಸೊರಬ
0
Soraba - Tribute Paid to Legendary Singer S. Janaki
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸೊರಬ  |  (ವರದಿ: ಮಧುರಾಮ್, ಸೊರಬ)  | 

ಗಾಯಕರಿಗೆ ಭಾಷೆಯ ಗಡಿ ಇಲ್ಲ ಎನ್ನುವುದಕ್ಕೆ ಎಸ್. ಜಾನಕಿ (S. Janaki) ಅವರೇ ಅತ್ಯುತ್ತಮ ಉದಾಹರಣೆ. ಸುಮಾರು 17 ಭಾಷೆಗಳಲ್ಲಿ ಸುಮಧುರವಾಗಿ ಹಾಡುವ ಮೂಲಕ ಎಲ್ಲರ ಮನಸ್ಸಿನಲ್ಲಿ ಗಾನಗಂಧರ್ವೆಯಾಗಿ ಚಿರಸ್ಥಾಯಿಯಾಗಿದ್ದಾರೆ. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಗಾನ ಮಾಧುರ್ಯ ಎಂದೆಂದಿಗೂ ಜೀವಂತವಾಗಿರಲಿದೆ ಎಂದು ಸುಗಮ ಸಂಗೀತ ಪರಿಷತ್ ಸೊರಬ ಅಧ್ಯಕ್ಷ ಗುರುಮೂರ್ತಿ ಹೇಳಿದರು.

ಸೋಮವಾರ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಸುಗಮ ಸಂಗೀತ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಹೆಲ್ಪಿಂಗ್ ಹ್ಯಾಂಡ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾವಪೂರ್ಣ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Also Read>> Chamarajanagar | 72 ವರ್ಷದ ಪರಂಪರೆಯ ಶ್ರೀ ವೆಂಕಟೇಶ್ವರ ಬೇಕರಿ ಪುನರಾರಂಭ

S. Janaki | ಗಿನ್ನೆಸ್ ದಾಖಲೆಗೆ ಪಾತ್ರ

ಸಂಗೀತ ಲೋಕದಲ್ಲಿ ಕೋಗಿಲೆ ಕಂಠದ ಮಂತ್ರಶಕ್ತಿಯ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯ ಗೆದ್ದಿದ್ದ ಸ್ವರ ಸಾಮ್ರಾಜ್ಞೆ ಎಸ್. ಜಾನಕಿ. ಕನ್ನಡ ಭಾಷೆಯನ್ನು ತಮ್ಮ ಗೀತೆಗಳ ಮೂಲಕ ದೇಶದಾದ್ಯಂತ ಪರಿಚಯಿಸಿದ ಅವರು ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ. ಯುಗಾದಿ ಬಂದರೆ ಅವರ ಧ್ವನಿಯೇ ನೆನಪಾಗುತ್ತದೆ ಎಂದು ಹೇಳಿದರು.

ಯುಗ ಯುಗಗಳಾದರೂ ಅವರ ಹಾಡುಗಳು ಸಂಗೀತಾಸಕ್ತರ ಮನಸ್ಸಿನಲ್ಲಿ ಮೊಳಗುತ್ತಲೇ ಇರುತ್ತವೆ. ದಕ್ಷಿಣ ಭಾರತದ ಅಪರೂಪದ ಗಾಯಕಿಯಾಗಿ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದರೂ ಅತ್ಯಂತ ನಿರಹಂಕಾರಿಯಾಗಿ ಬದುಕಿದ ವ್ಯಕ್ತಿತ್ವ ಅವರದು. ಆಂಧ್ರಪ್ರದೇಶದಲ್ಲಿ ಜನಿಸಿದರೂ ಕನ್ನಡ ನಾಡಿನ ಮೇಲಿದ್ದ ಅವರ ಅಪಾರ ಪ್ರೀತಿ ಸದಾ ಸ್ಮರಣೀಯ ಎಂದು ಹೇಳಿದರು.

ಪೂರ್ಣಿಮಾ ಭಾವೆ, ಲಕ್ಷ್ಮೀ ಮುರಳಿಧರ, ಕಾವ್ಯಶ್ರೀ ಭಾವೆ, ರೂಪ ಮಧುಕೇಶ್ವರ ಹಾಗೂ ಸುಮಾ ಅರುಣ್ ಕುಮಾರ್ ಅವರು ಎಸ್. ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಗಾಯನ ಮೂಲಕ ಭಾವಪೂರ್ಣ ಸಂಗೀತ ನಮನ ಸಲ್ಲಿಸಿದರು. ಅವರ ಗಾಯನ ಕಾರ್ಯಕ್ರಮದಲ್ಲಿ ನೆರೆದಿದ್ದ ಸಂಗೀತಾಭಿಮಾನಿಗಳನ್ನು ಭಾವುಕರನ್ನಾಗಿಸಿತು.
ಬಳಿಕ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು.

ಸುಗಮ ಸಂಗೀತ ಪರಿಷತ್ ಕಾರ್ಯದರ್ಶಿ ಶಿಕ್ಷಕ ಎಚ್. ವೀರಪ್ಪ ಕಾರ್ಯಕ್ರಮದ ನಿರ್ವಹಣೆ ವಹಿಸಿದ್ದರು. ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಂದೀಪ್ ರಾಯ್ಕರ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಜ್ಞಾನೇಶ್, ನಾಗರಾಜ ಗುತ್ತಿ, ರಾಜು ಹಿರಿಯವಲಿ, ಪಾಣಿರಾಜಪ್ಪ, ನಟರಾಜ ಉಪ್ಪಿನ್, ಮಧುರಾಯ್ ಶೇಟ್, ಮೋಹನ್ ಸುರಭಿ, ವಸಂತ ಬಾಂಬೊರೆ, ಮೂಡಿ ವಿಜಯಕುಮಾರ್, ಮಹೇಶ್ ಖಾರ್ವಿ ಸೇರಿದಂತೆ ಸಾಹಿತ್ಯಾಸಕ್ತರು, ಸಂಗೀತಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tribute Paid to Legendary Singer S. Janaki; Music Lovers Offer Emotional Homage

“S. Janaki is the finest example that music knows no language barriers. By singing melodiously in around 17 languages, she has remained immortal in the hearts of millions as a divine voice. Though she is no longer with us today, her musical legacy will live on forever,” said Gurumurthy, President of Sugama Sangeetha Parishat, Soraba.

He was speaking while presiding over a heartfelt tribute program organized on Monday at Sri Swami Vivekananda High School in the town. The event was jointly hosted by Sugama Sangeetha Parishat, Kannada Sahitya Parishat, Helping Hand, and several other organizations.

S. Janaki sang over 48,000 songs

Remembering the legendary singer, he said S. Janaki, often hailed as the “Nightingale of Music,” captivated millions of music lovers worldwide with her magical voice. She sang over 48,000 songs in multiple languages, earning recognition in the Guinness records. Through her songs, she played a significant role in popularizing the Kannada language across the country. “Her voice is especially remembered during the festival of Ugadi,” he added.

He further noted that her songs will continue to resonate in the hearts of music enthusiasts for generations. Despite receiving numerous accolades, including four National Awards, she remained a humble personality. Though born in Andhra Pradesh, her deep affection for Karnataka will always be remembered, he said.

On the occasion, Poornima Bhave, Lakshmi Muralidhar, Kavyashree Bhave, Roopa Madhukeshwara, and Suma Arun Kumar presented popular songs of S. Janaki, offering a soulful musical tribute. Their performances moved the audience emotionally.

Later, floral tributes were offered to the portrait of S. Janaki, followed by a moment of silence in her remembrance.

H. Veerappa, Secretary of Sugama Sangeetha Parishat and a teacher, compered the program. Sandeep Raikar, Headmaster of Sri Swami Vivekananda High School, extended support for the event.

Several dignitaries and attendees, including Dr. Jnanesh, Nagaraj Gutti, Raju Hiriyavali, Panirajappa, Nataraj Uppin, Madhuraya Shet, Mohan Surabhi, Vasantha Bambore, Mudi Vijayakumar, Mahesh Kharvi, along with literature enthusiasts, music lovers, office bearers of various organizations, and members of the public, were present.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
JNNCE ShivamoggaKalpa News Advertising DisclaimerKalahamsa Infotech private limited

Tags: Helping Handಎಸ್. ಜಾನಕಿಸೊರಬಹೆಲ್ಪಿಂಗ್ ಹ್ಯಾಂಡ್
Share216Tweet135Send
Aniruddha Vasishta S R

Aniruddha Vasishta S R

Editor-in-Chief

Previous Post

Yelahanka – Arasikere | ಜುಲೈ 14ರಿಂದ ಮೆಮು ರೈಲು ಸಂಚಾರ ಆರಂಭ

Next Post

India-Indonesia | ಸಂಸ್ಕೃತಿಯಿಂದ ರಕ್ಷಣೆಯವರೆಗೆ ಸಹಕಾರದ ಹೊಸ ಅಧ್ಯಾಯ

kalpa News

kalpa News

Next Post
a new chapter in india indonesia cooperation

India-Indonesia | ಸಂಸ್ಕೃತಿಯಿಂದ ರಕ್ಷಣೆಯವರೆಗೆ ಸಹಕಾರದ ಹೊಸ ಅಧ್ಯಾಯ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL