ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-2 |

ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿ ಮಾಡಿದ ದೇವರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ #Father ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ ಅತಿ ಎನ್ನಿಸುವ ಶಿಸ್ತು, ಅನುಮಾನ, ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೇ ಅಮೂರ್ತ ಭಯ. ಅಷ್ಟೇ ಪ್ರೀತಿ ಹಾಗೂ ಮಮತೆಯ ಮಡಿಲೂ ಸಹ ಅಪ್ಪ.
ಅಮ್ಮ #Mother ನನಗೆ ಏನು ಕಾಣಿಸುತ್ತದೋ ಅದು ಮಗುವಿಗೆ ಕಾಣಿಸಲಿ ಎಂದು ನಮ್ಮನ್ನು ಟೊಟಕದ ಮೇಲೆ ಕೂಡಿಸಿಕೊಳ್ಳುತ್ತಾರೆ. ಆದರೆ ಅಪ್ಪ ತನಗೆ ಏನು ಕಾಣಿಸುವುದಿಲ್ಲವೋ ಅದನ್ನು ಮಗು ನೋಡಲಿ ಎಂದು ಕುತ್ತಿಗೆಯ ಮೇಲೆ ಕೂಡಿಸಿಕೊಳ್ಳುವಂತಹ ಬೆಲೆ ಕಟ್ಟಲಾಗದ ಉಡುಗೊರೆ ಅಪ್ಪ.

ಅಮ್ಮ ಮನೆಗೆಲಸಗಳನ್ನು ಮಾಡುತ್ತಾಳೆ, ಆದರೆ ಅಪ್ಪ ಕೆಲಸಕ್ಕೆ ಹೋಗಿ ದುಡಿದು ಸಂಪಾದಿಸಿ ಮನೆಗೆ ಬಂದು ಮಗುವಿನ ಜೊತೆ ಆಟ ಆಡಿ, ಅದಾದ ಮೇಲೆ ಮಗುವನ್ನು ಮಲಗಿಸುವ ಮಾತೃಹೃದಯಿ ಅಪ್ಪ.
ಇಷ್ಟು ಮಾತ್ರ ಎಂದುಕೊಂಡಿರಾ! ಅಮ್ಮನಿಗೆ ಮನೆಕೆಲಸಗಳಲ್ಲೂ ಸಹ ಸಹಾಯ ಮಾಡಿ, ಕಚೇರಿ ಕೆಲಸಗಳನ್ನು ದೂರವಾಣಿ ಮೂಲಕವೇ ಒಂದಷ್ಟು ಮುಗಿಸಿ ಮಲಗುತ್ತಾರೆ. ಬೆಳಗ್ಗೆ ಎದ್ದು ಸ್ನಾನ, ಸಂಧ್ಯಾವಂದನೆ, #Sandhyavandane ದೇವರ ಪೂಜೆ ಪೂರ್ಣಗೊಳಿಸಿ, ತಿಂಡಿ ಮಾಡಿ ಮತ್ತೆ ಕೆಲಸಕ್ಕೆ ತೆರಳುತ್ತಾರೆ. ಇವೆಲ್ಲವನ್ನೂ ಅವರು ಮಕ್ಕಳು ಏಳುವುದರೊಳಗೇ ಮುಗಿಸುತ್ತಾರೆ ಎನ್ನುವುದು ವಿಶೇಷ. 
ಮಗು ಏನು ತಿಂದಿರಬಹುದು, ಜಾಸ್ತಿ ತಿಂದಿರುತ್ತದಾ, ಕಮ್ಮಿ ತಿಂದಿರುತ್ತದಾ ಹೀಗೆ ಆಲೋಚನೆ ಮಾಡುತ್ತಾ ಕೆಲಸ ಮುಗಿಸಿ ಖುಷಿಯಿಂದ ಮನೆಗೆ ಬಂದು ಮಗುವನ್ನು ಮಾತಾಡಿಸುತ್ತಾರೆ.
ಇನ್ನು ಭಾನುವಾರವಂತು ಏನಾಗುತ್ತದೋ ಅದರಿಂದ ಮಗುವನ್ನು ಸಂತೋಷಪಡಿಸಬೇಕು ಎಂದು ಉದ್ದೇಶ ಇಟ್ಟುಕೊಂಡು ಹೊರಗೆ ಕರೆದುಕೊಂಡು ಹೋಗಿ ಖುಷಿ ಪಡಿಸುತ್ತಾರೆ.
ಇಂತಹ ಅಪ್ಪನನ್ನು ಪಡೆದ ಮಕ್ಕಳು ಎಂದೂ ಅವರ ಮನಸು ನೋಯಿಸಬಾರದು. ದೊಡ್ಡವರಾದ ಮೇಲೆ ಅವರನ್ನು ವೃದ್ಧಾಶ್ರಮಕ್ಕೆ ಕಳಿಸದೇ ಪ್ರೀತಿಯಿಂದ ನೋಡಿಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post