No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Sunday, September 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಕ್ಕನೊಂದಿಗೆ ಅನುಭಾವ… ಡಾ॥ ಕೆ.ಎಸ್. ಪವಿತ್ರ ಅವರ ಅಪರೂಪದ ಏಕವ್ಯಕ್ತಿ ನೃತ್ಯ ಪ್ರಸ್ತುತಿ

kalpa News by kalpa News
August 22, 2019
in Special Articles
0
ಅಕ್ಕನೊಂದಿಗೆ ಅನುಭಾವ… ಡಾ॥ ಕೆ.ಎಸ್. ಪವಿತ್ರ ಅವರ ಅಪರೂಪದ ಏಕವ್ಯಕ್ತಿ ನೃತ್ಯ ಪ್ರಸ್ತುತಿ
Share on FacebookShare on TwitterShare on WhatsApp

ಅಕ್ಕಮಹಾದೇವಿಯ ವಚನಗಳನ್ನು ಆಗಾಗ ಬಿಡಿಬಿಡಿಯಾಗಿ ನಾನು ನೃತ್ಯ ಕಾರ್ಯಕ್ರಮಗಳಲ್ಲಿ ಮಾಡುತ್ತಿದ್ದದ್ದು ಸಾಕಷ್ಟು ಹಿಂದೆಯೇ. ಕನ್ನಡದಲ್ಲಿ ಮಧುರ ಭಕ್ತಿಯ ಜಾವಳಿಗಳು. ಹರಿದಾಸರ ದೇವರನಾಮಗಳು ಬಹಳಷ್ಟಿದ್ದರೂ, ಶಿವನ ಬಗೆಗೆ ಕನ್ನಡದಲ್ಲಿ ಶೃಂಗಾರ ಪದಗಳನ್ನು ಮಾಡಬೇಕಾದ ಸಂದರ್ಭದಲ್ಲಿ ನನಗೆ ಮೊಟ್ಟಮೊದಲು ನೆನಪಿಗೆ ಬರುತ್ತಿದ್ದದ್ದು ಅಕ್ಕನ ವಚನಗಳೇ. ಸುಮಾರು 14 ವರ್ಷಗಳ ಹಿಂದೆ ಶಿವರಾತ್ರಿ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಗಳೆರಡೂ ಒಂದೇ ದಿನ ಬಂದಾಗ ಅಕ್ಕನ ವಚನಗಳನ್ನೇ ಆಧರಿಸಿ ಪ್ರಕೃತಿ-ಶರಣಸತಿ ಲಿಂಗಪತಿ ಎಂಬ ಭಾವ ಮತ್ತು ಸ್ತ್ರೀ ಮನಸ್ಸು ಇವುಗಳನ್ನು ಕೇಂದ್ರದಲ್ಲಿಟ್ಟುಕೊಂಡು ಎರಡು ಗಂಟೆಗಳ ಪ್ರಾತ್ಯಕ್ಷಿಕೆಯನ್ನು ನೀಡಿದ್ದೆ. ಬೀರೂರಿನ ಅಕ್ಕಮಹಾದೇವಿಯ ದೇವಸ್ಥಾನದಲ್ಲಿಯೂ ಈ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದರು.

ಅದೇಕೋ 15ನೆಯ ವರ್ಷವೈಭವಕ್ಕೆ ಏನು ಮಾಡಬೇಕು ಎಂದು ಯೋಚಿಸುವಾಗ ನೆನಪಾದವಳು ‘ಅಕ್ಕ’. ಹಿಂದೆ ನೋಡಿದ್ದ ವಚನಗಳನ್ನೇ ಈಗ ಮತ್ತೆ ನೋಡಿದಾಗ ಅವುಗಳ ಅರ್ಥ ವಿಸ್ತಾರ ಬೆರಗು ಮೂಡಿಸುತ್ತದೆ. ಅಕ್ಕನ ವಚನಗಳನ್ನು ಬಿಡಿ ಬಿಡಿಯಾಗಿ ನೋಡುವುದಕ್ಕೂ, ಅವುಗಳನ್ನು ಒಬ್ಬ ವ್ಯಕ್ತಿಯ ಬದುಕಿನ ಬರೆಹಗಳಂತೆ ನೋಡುವುದಕ್ಕೂ ಅಂತರವಿದೆ. ಅಕ್ಕನ ವಿಷಯದಲ್ಲಿ ಹಾಗೆ ‘ಬದುಕಿನ ಬರೆಹ’ಗಳಂತೆ ನೋಡುವುದೇ ಹೆಚ್ಚು ಅರ್ಥಪೂರ್ಣ ಎಂದು ನನಗನ್ನಿಸುತ್ತದೆ.

ಅಕ್ಕಮಹಾದೇವಿ ಹುಟ್ಟಿದ ಊರು ನಮ್ಮ ಶಿವಮೊಗ್ಗೆಗೆ ಸಮೀಪದಲ್ಲಿರುವ ಉಡುತಡಿ. ಮಕ್ಕಳು ಅಧ್ಯಯನ ಪ್ರವಾಸಕ್ಕಾಗಿ, ಕಲಾವಿದರು-ಕವಯಿತ್ರಿಯರು ಸ್ಫೂರ್ತಿ ಪಡೆಯುವುದಕ್ಕಾಗಿ ಅರ್ಧ ದಿನದಲ್ಲಿ ಆರಾಮವಾಗಿ ಹೋಗಿಬರಬಹುದಾದ ಸ್ಥಳ. ಈಗ ಅಲ್ಲಿ ಅಧ್ಯಯನ ಸಂಸ್ಥೆಯಿದೆ, ಅಕ್ಕನ ಕಂಚಿನ ಪ್ರತಿಮೆ, ಅಕ್ಕಮಹಾದೇವಿಯ ದೇವಾಲಯ, ಸುಂದರ ಉದ್ಯಾನ ಈ ಎಲ್ಲವೂ ಇವೆ. ಕನ್ನಡದ ಪ್ರಥಮ ಕವಯಿತ್ರಿ ಶಿವಮೊಗ್ಗೆಯವಳು ಎಂಬುದು ಶಿವಮೊಗ್ಗೆಯ ಹಿರಿಮೆ!

ಅಕ್ಕನ ಜೀವನ ಘಟ್ಟಗಳು ಸರಳವಾಗಿ ಕೆಲವೇ ವಾಕ್ಯಗಳಲ್ಲಿ ಹೇಳುವಂತಿದ್ದರೂ, ಅದೊಂದು ಕಠಿಣ ಸಾಧನೆಯ ದಾರಿ. ಉಡುತಡಿಯಲ್ಲಿ ನಿರ್ಮಲ-ಸುಮತಿಯರ ಮಗಳಾಗಿ ಜನಿಸುವ ಮಹಾದೇವಿ ಬಾಲ್ಯದಿಂದಲೂ ಶಿವಭಕ್ತೆ. ಆಕೆಗೆ ಗುರುಲಿಂಗದೇವರು ಎಂಬ ಆಚಾರ್ಯರಿಂದ ಲಿಂಗದೀಕ್ಷೆಯಾಗಿರುತ್ತದೆ. ಲಿಂಗವನ್ನೇ ಪತಿಯಾಗಿ ಭಾವಿಸಿ, ಮಾನಸಿಕವಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನನ್ನೇ ಮದುವೆಯಾಗಿರುತ್ತಾಳೆ. ಮಹಾದೇವಿ ಹೀಗಿರುವಾಗ ಕೌಶಿಕನೆಂಬ ದೊರೆ ಆಕೆಯನ್ನು ನೋಡಿ ಮೋಹಗೊಂಡು ಮದುವೆಯಾಗಬೇಕೆನ್ನುತ್ತಾನೆ. ಮದುವೆಯನ್ನು ನಿರಾಕರಿಸಿದರೆ ತನ್ನ ಕುಟುಂಬಕ್ಕೆ ಒದಗಬಹುದಾದ ಆಪತ್ತನ್ನು ಕಂಡು ಮಹಾದೇವಿ ಶಿವಧ್ಯಾನಕ್ಕೆ ಮುಕ್ತ ಅವಕಾಶವಿರಬೇಕೆನ್ನುವ ಷರತ್ತಿನೊಡನೆ ಅರಮನೆ ಪ್ರವೇಶಿಸುತ್ತಾಳೆ. ಕೌಶಿಕ ಈ ಷರತ್ತನ್ನು ಮುರಿದು, ಬಲವಂತಕ್ಕೆಳಸಿದಾಗ ಮಹಾದೇವಿ ತೋರಿದ ಪ್ರತಿಭಟನೆಯ ರೀತಿ ಇಂದಿಗೂ ಲೋಕವನ್ನು ಬೆಚ್ಚಿ ಬೀಳಿಸುತ್ತಲೇ ಇದೆ!

ಬಟ್ಟೆಯನ್ನೇ ಬಿಸುಟು, ದಿಗಂಬರೆಯಾಗಿ, ನಂತರ ಕೇಶಾಂಬರೆಯಾಗುವ ಮಹಾದೇವಿ ಕಲ್ಯಾಣದಲ್ಲಿ ಅಲ್ಲಮನಿಂದ ತೀಕ್ಷ್ಣ ಪರೀಕ್ಷೆಗೆ ಒಳಗಾಗುತ್ತಾಳೆ. ತನ್ನ ಅನುಭವಗಳನ್ನು ಹಾಡಿಕೊಂಡೇ ತಿರುಗುತ್ತಾ ಆಕೆ ಕೊನೆಯಲ್ಲಿ ತಲುಪುವುದು ತನ್ನ ಆರಾಧ್ಯದೈವ-ಪ್ರಿಯತಮ-ಸಂಗಾತಿ ಚೆನ್ನಮಲ್ಲಿಕಾರ್ಜುನನಿರುವ ಶ್ರೀಶೈಲವನ್ನು.

ಈ ಇಡೀ ಕಥೆಗೆ ಆಧಾರವಾಗಿ ಅಕ್ಕನದೇ ವಚನಗಳಿವೆ. ಆಕೆಯ ಪ್ರತಿಭೆಗೆ ಸಾಕ್ಷಿಯಾಗಿ ಇತರ ಶರಣರು ಬರೆದಿರುವ ವಚನಗಳಿವೆ. ಅಕ್ಕನ ವಚನಗಳನ್ನು ಮಹಿಳಾ ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ, ನೃತ್ಯ-ಸಂಗೀತ ಪ್ರಯೋಗಗಳಿಗೆ ವಿಭಿನ್ನವಾಗಿ ಈ ವಚನಗಳು ಒದಗಿಬರುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬೇಕಿದೆ. ಏಕೆಂದರೆ ಅಕ್ಕ ಒಬ್ಬ ಮಹಿಳೆ. ಆಕೆಯ ವಚನಗಳಲ್ಲಿ ಶೃಂಗಾರ-ಲೈಂಗಿಕ ಪ್ರತಿಮೆಗಳೊಂದಿಗೇ, ಸಮಾಜ ಹೆಣ್ಣಿಗೆ ಒಡ್ಡುವ ಒತ್ತಾಯ-ಸವಾಲು-ಅಡ್ಡಿ-ಆತಂಕಗಳೂ ಚಿತ್ರಿತವಾಗಿವೆ. ಅಕ್ಕ ಕವಯಿತ್ರಿಯಾಗಿರುವ ಜೊತೆಗೇ ಆಕೆ ಸಂಗೀತ ಜ್ಞಾನವುಳ್ಳವಳೂ ಆಗಿದ್ದಳೆಂಬುದಕ್ಕೆ ಆಕೆಯ ರಚನೆಗಳು ಎನ್ನಲಾದ ಸ್ವರ ವಚನಗಳು-ಕೊರವಂಜಿ ಹಾಡುಗಳು ನಿದರ್ಶನ. ಇದರೊಂದಿಗೇ ಅಭಿನಯಕ್ಕೆ ಒದಗುವ ಮಧುರ ಭಕ್ತಿ-ವಿವಿಧ ನಾಯಕಿಯರು, ನೃತ್ಯ ಕಲಾವಿದರ ಇಷ್ಟ ದೈವ ಶಿವ, ಆತನ ವರ್ಣನೆ ಇವು, ಸಂಗೀತ-ನೃತ್ಯಗಳೆರಡರ ಜೀವಾಳವಾದ ಅಧ್ಯಾತ್ಮ ಇವು ಅಕ್ಕನ ವಚನಗಳಲ್ಲಿವೆ.

‘ಶಿವ’ ಮತ್ತು ‘ಜೀವ’ ಗಳು ಒಂದಾಗುವುದು ಪ್ರತಿಯೊಂದು ನೃತ್ಯ ಸಾಧಕನ ಕನಸು. ನಿಜವಾದ ನೃತ್ಯ ಕಲಾವಿದ ತನ್ನ ಸಾಧನೆಯ ಮುಖ್ಯ ಗುರಿಯಾಗಿಸಿ ಕೊಳ್ಳುವುದು ಕಾರ್ಯಕ್ರಮ-ಪ್ರೇಕ್ಷಕ-ಧನ-ಖ್ಯಾತಿಗಳನ್ನಲ್ಲ! ‘ಶಿವ-ಜೀವ’ ರನ್ನು ಒಂದಾಗಿಸುವ ರಸೋತ್ಪತ್ತಿ- ರಸಾನುಭವ- ಅಧ್ಯಾತ್ಮದ ಅನುಭಾವವನ್ನು! ಆಶ್ಚರ್ಯಕರವಾಗಿ ಶಿವಶರಣರ ‘ಐಕ್ಯಸ್ಥಲ’ ಸಾಧನೆ, ಅಕ್ಕಮಹಾದೇವಿಯ ‘ಶಿವೈಕ್ಯ’ ಇವು, ನರ್ತಕನ ಸಾಧನೆಯ ಹಾದಿಯ ಗುರಿಗಳಂತೆಯೇ ಎನಿಸುತ್ತದೆ. ‘ಕದಳಿ ಎಂಬುದು ತನು-ಕದಳಿ ಎಂಬುದು ಮನ’ ಎಂಬ ಅಕ್ಕನ ವಚನ ವೈಯಕ್ತಿಕವಾಗಿ ಹಾಡಿದ್ದಾದರೂ, ತನು-ಮನಗಳ ವಿಷಯಂಗಳನ್ನು ಗೆದ್ದು, ಹೊರಗಿನ ಎಲ್ಲ ಚಿಂತೆಗಳನ್ನು ಮರೆತು-ಗೆದ್ದು ರಸೈಕ್ಯವನ್ನು ಸಾಧಿಸುವ ಕಲಾವಿದೆಗೂ ಅನ್ವಯಿಸುತ್ತದೆ ಅಲ್ಲವೆ? !

ಅಕ್ಕನ ವಚನಗಳನ್ನು, ತನ್ನ ಬದುಕನ್ನೇ ಬರಹವಾಗಿಸಿದ್ದನ್ನು ಈಗ ನೃತ್ಯದ ಮೂಲಕ ರಂಗಕ್ಕೆ ತರುವ ನನ್ನ ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೇರ ಹಿನ್ನೆಲೆ ಸಂಗೀತದೊಂದಿಗೆ ಆಗಸ್ಟ್‌ 25ರ ಭಾನುವಾರದಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಸಾಕಾರಗೊಳ್ಳಲಿದೆ. ಶ್ರೀವಿಜಯದ 15 ನೇ ವರ್ಷ ವೈಭವದ ಎರಡನೇ ದಿನವಾದ ಆಗಸ್ಟ್‌ 25 ರಂದು ಲೇಖಕಿ-ಸಂಶೋಧಕಿ ಡಾ. ವಿಜಯಾದೇವಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ, ಡಾ.ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಕ್ಕನ ಬಗೆಗೆ ಒಂದಷ್ಟು ಚಿಂತನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಶಿವಮೊಗ್ಗೆಯ ಸಹೃದಯರು ಇರುತ್ತೀರಿ ಅಲ್ಲವೆ?

ಲೇಖನ: ಡಾ॥ ಕೆ.ಎಸ್. ಪವಿತ್ರ

Tags: AkkamahadeviAkkanondige anubhavaDanceDr K S PavitraKannada ArticleShivamoggaSrivijaya Kalanickethanaಅಕ್ಕನೊಂದಿಗೆ ಅನುಭಾವಅಕ್ಕಮಹಾದೇವಿಡಾ॥ ಕೆ.ಎಸ್. ಪವಿತ್ರಶ್ರೀವಿಜಯ ಕಲಾನಿಕೇತನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವೈದ್ಯಲೋಕವನ್ನೇ ತಲ್ಲಣಗೊಳಿಸಿತೆ ಮೋದಿ ಸರ್ಕಾರದ ಮೊದಲ ತಪ್ಪು ಹೆಜ್ಜೆ!

Next Post

ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನ ಬಂಧನ

kalpa News

kalpa News

Next Post
ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನ ಬಂಧನ

ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನ ಬಂಧನ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL