ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-22 |
ಸಂಸ್ಕೃತ-ಕನ್ನಡ ವಾಙ್ಮಯಗಳಲ್ಲಿ ಸಮಾನವಾಗಿ ಮುಖ್ಯವಾಗಿ ಕಾಣುವ ಕಲೆ ಅವಧಾನ. ಈ ಕಲೆಯಲ್ಲಿ ಮುಖ್ಯವಾಗಿ ಕಂಡುಬರುವ ಅಂಗವೇನೆಂದರೆ ಚಿತ್ರಕಾವ್ಯ/ ಆಶುಕವಿತ್ವ. ಅವಧಾನದ ಬೇರೆಯ ಅಂಗಗಳಲ್ಲಿ ಕೇವಲ ಪದ್ಯರಚನೆಯು ಉತ್ತರವಾಗಿರುತ್ತದೆ. ಆದರೆ ಈ ಅಂಗದಲ್ಲಿ ಏನೂ ಪ್ರತಿಬಂಧಕಗಳು ಇಲ್ಲದಿರುವುದರಿಂದ ಇಲ್ಲಿ ಅಲಂಕಾರದ ಜೊತೆಯಲ್ಲಿ ಪದ್ಯರಚನೆ ಮಾಡಬೇಕಾಗಿರುತ್ತದೆ. ಆ ಅಲಂಕಾರದ ವಿಷಯದಲ್ಲಿ ಸ್ವಲ್ಪ ಚಿಂತನೆ ನಡೆಸೋಣ.
ಅಲಂಕಾರವು ಎರಡು ವಿಧ – ರ‍್ಥಾಲಂಕಾರ ಮತ್ತು ಶಬ್ದಾಲಂಕಾರ. ಶಬ್ದಾಲಂಕಾರಕ್ಕೆ ಪ್ರಸಿದ್ಧರಾದ ಕವಿಗಳ ಪಟ್ಟಿ ಮುಗಿಯುವುದೇ ಇಲ್ಲ. ಕಾಳಿದಾಸನಿಂದ ಆರಂಭಿಸಿ ಈಗಿನ ಆಧುನಿಕ ಕವಿಗಳಿಗೆಲ್ಲರಿಗೂ ಶಬ್ದಾಲಂಕಾರದ ಪರಿಚಯ ಇದ್ದೇ ಇರುತ್ತದೆ. ಈ ಶಬ್ದಾಲಂಕಾರವು ಅನುಪ್ರಾಸವೆಂದು ಹೆಸರಿಸಲ್ಪಡುತ್ತದೆ. ಅನುಪ್ರಾಸವೆಂದರೆ ಆವೃತ್ತಿ; ಸಮಾನ ಅಕ್ಷರಗಳ ಆವೃತ್ತಿ.
Also Read>> ಬೆಂಗಳೂರಿಗರಿಗೆ ಮತ್ತೊಂದು ಶಾಕ್! ಶೀಘ್ರ ಮೆಟ್ರೋ ಪ್ರಯಾಣದ ದರ ಏರಿಕೆ ಸಾಧ್ಯತೆ
ಅನುಪ್ರಾಸ ಮೂರು ವಿಧ – ಛೇಕಾನುಪ್ರಾಸ, ವೃತ್ತ್ಯನುಪ್ರಾಸ ಮತ್ತು ಲಾಟಾನುಪ್ರಾಸ. ಛೇಕಾನುಪ್ರಾಸವೆಂದರೆ ಭಿನ್ನ ರ‍್ಥ ಉಳ್ಳ ಸಮಾನ ಅಕ್ಷರಗಳ ವ್ಯವಧಾನವಿಲ್ಲದ ಆವೃತ್ತಿ.
ಉದಾ: ‘ಅಯಿ ಕೃಪಾಲಯ ಪಾಲಯ ಬಾಲಕಮ್’, ‘-ಸುಪೌರುಷ- ಧಾತುಸಪ್ತಕಧರ‍್ಯಶರ‍್ಯೌದರ‍್ಯಚಾತರ‍್ಯ |’ ಇತ್ಯಾದಿ. ವ್ಯವಧಾನ ಉಳ್ಳ ಛೇಕಾನುಪ್ರಾಸವನ್ನೇ ವೃತ್ತ್ಯನುಪ್ರಾಸವೆನ್ನುತ್ತಾರೆ.
ಉದಾ:
‘ಶ್ರೀಮನೋರಮ ಮೇರುತ್ರಿಕಕು-ದ್ಧಾಮ ಸತ್ಕಲ್ಯಾಣಗುಣನಿಃ-ಸೀಮ ಪಾವನನಾಮ ದಿವಿಜೋದ್ದಾಮ ರಘುರಾಮ|’ ಇತ್ಯಾದಿ.
ಕನ್ನಡ ಪ್ರಚುರವಾದ ದ್ವಿತೀಯಾಕ್ಷರ ಪ್ರಾಸವೂ ಈ ವೃತ್ತ್ಯನು ಪ್ರಾಸವೇ. ಕೆಲವು ಸಂಸ್ಕೃತ ಪದ್ಯಗಳಲ್ಲಿ ತೃತೀಯಾಕ್ಷರ ಪ್ರಾಸವೂ ಕಂಡುಬರುತ್ತದೆ.
ಉದಾ:
‘ರ‍್ಯೈಕ್ಷಿ ಪ್ರಭುರಿತರೈಃ ಶಿವಾಗ್ನಿಪರ‍್ವೈ-ರ‍್ನೋಪೈಕ್ಷಿ ಪ್ರಬಲತರೈಸ್ತಥಾ ಪ್ರಯತ್ನೈಃ |
ನಾವೈಕ್ಷಿ ಕ್ವಚಿದಪಿ ಶಕ್ತಿಪರ‍್ತಿರಸ್ಮಿ- ನ್ನುತ್ಪ್ರೈಕ್ಷಿ ಸ್ವಯಮಪಿ ಭೀಮ ಇತ್ಯವಶ್ಯಮ್ ||’
ಲಾಟಾನುಪ್ರಾಸವೆಂದರೆ ಸಮಾನಪದಗಳಾಗಿದ್ದರೂ ಪ್ರಕೃತ ಪದ್ಯದಲ್ಲಿ ವಿಶೇಷವಾದ ಸ್ವಾರಸ್ಯವನ್ನು ತುಂಬಿಸಲು ಮಾಡುವ ಪದಗಳ ವ್ಯವಧಾನರಹಿತ ಆರ‍್ತನೆ. ಇದು ಕನ್ನಡದಲ್ಲಿ ಬಹಳವಾಗಿ ಕಂಡುಬರುವುದಿಲ್ಲ.
ಉದಾ:
‘ಮಧು ಮಧುಕರರಾಜೋ ನಿಷ್ಪತನ್ ಪೌಷ್ಪಮಾಪ್ತುಮ್’, ‘ಆ ರವಮಂ ನರ‍್ಜಿತಕಂ- ಠೀರವರವಮಂ ನಿರಸ್ತಘನರವಮಂ-’ಎಂಬ ಈ ಹಳೆಗನ್ನಡದಲ್ಲಿ ಕಂಡುಬರುವ ಲಾಟಾನುಪ್ರಾಸ ರನ್ನನ ಗದಾಯುದ್ಧದ್ದು. ಮುಂದಿನ ಸಂಚಿಕೆಯಲ್ಲಿ ಯಮಕ ಹಾಗೂ ಚಿತ್ರ ಎಂಬ ಶಬ್ದಾಲಂಕಾರ ವಿಶೇಷಗಳೊಂದಿಗೆ ಮುಂದುವರೆಯೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post