ಕಲ್ಪ ಮೀಡಿಯಾ ಹೌಸ್ | ಮೈಸೂರು/ಶಿವಮೊಗ್ಗ |
ಮೈಸೂರು #Mysore ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ, ಕೆಲವು ರೈಲು ಸೇವೆಗಳ ಪುನಃ ಆರಂಭ ಹಾಗೂ ಭಾಗಶಃ ರದ್ದುಪಡಿಸಲಾಗುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಮಾಹಿತಿ ನೀಡಿದ್ದು, ವಿವರಗಳು ಇಂತಿವೆ.
ಹಿಂದೆ ಭಾಗಶಃ ರದ್ದುಪಡಿಸಲಾಗಿದ್ದ ರೈಲುಗಳ ಪುನಃ ಆರಂಭ
2026 ಮಾರ್ಚ್ 21 ಮತ್ತು 24 ರಂದು ಭಾಗಶಃ ರದ್ದುಪಡಿಸಲಾಗಿದ್ದ ಕೆಳಗಿನ ರೈಲುಗಳು ಈಗ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.
56267 ಸಂಖ್ಯೆಯ #Arsikere ಅರಸೀಕೆರೆ – ಮೈಸೂರು ಪ್ಯಾಸೆಂಜರ್ ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದ್ದ ಈ ರೈಲು ಮರು ಆರಂಭವಾಗಿದ್ದು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.
16225 ಸಂಖ್ಯೆಯ ಮೈಸೂರು – ಶಿವಮೊಗ್ಗ #Shivamogga ಟೌನ್ ಎಕ್ಸ್’ಪ್ರೆಸ್ ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗಿದ್ದ ಈ ರೈಲು ಮರು ಆರಂಭವಾಗಿದ್ದು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.
ಈ ರೈಲುಗಳ ಭಾಗಶಃ ರದ್ದು
ರಸ್ತೆ ಕೆಳಸೇತುವೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಕೆಳಗಿನ ರೈಲುಗಳು 2026 ಮಾರ್ಚ್ 28 ಮತ್ತು 31 ರಂದು ಭಾಗಶಃ ರದ್ದುಪಡಿಸಲಾಗುವುದು.
56267 ಸಂಖ್ಯೆಯ ಅರಸೀಕೆರೆ – ಮೈಸೂರು ಪ್ಯಾಸೆಂಜರ್ ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಬೆಳಗುಳದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
16225 ಸಂಖ್ಯೆಯ ಮೈಸೂರು – ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಮೈಸೂರು ಬದಲಿಗೆ ಬೆಳಗುಳದಿಂದ ತನ್ನ ಪ್ರಯಾಣ ಆರಂಭಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















