ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಮೈಸೂರು |
ಮೈಸೂರು-ತಾಳಗುಪ್ಪ #Talguppa ಹಾಗೂ ಬೆಂಗಳೂರು-ಹಾಸನ #Hassan ನಡುವಿನ ರೈಲು ಪ್ರಯಾಣಿಕರಿಗೆ ಇಲಾಖೆ ಹೊಸ ತಾತ್ಕಾಲಿಕ ಬದಲಾವಣೆಯ ಮಾಹಿತಿ ನೀಡಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಇಲಾಖೆ ಮಾಹಿತಿ ಪ್ರಕಟಿಸಿದ್ದು, ಹಾಸನ ಮತ್ತು ಮಾವಿನಕೆರೆ ನಡುವೆ ಟ್ರಾö್ಯಕ್ ನವಿಕರಣ ಕಾಮಗಾರಿ ನಡೆಯುವುದರಿಂದ ಕೆಳಗಿನ ರೈಲುಗಳ ಸೇವೆಯನ್ನು 18 ದಿನಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದೆ.
ಯಾವೆಲ್ಲಾ ರೈಲುಗಳ ನಿಯಂತ್ರಣ?
1. ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು #Mysore ಎಕ್ಸ್’ಪ್ರೆಸ್, ಜೂನ್ 18ರಿಂದ 20, ಜೂನ್ 23ರಿಂದ 27, ಜೂನ್ 30ರಿಂದ ಜುಲೈ 04 ಮತ್ತು ಜುಲೈ 07ರಿಂದ 11 ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

3. ರೈಲು ಸಂಖ್ಯೆ 06583 ಕೆಎಸ್‌ಆರ್ ಬೆಂಗಳೂರು – ಹಾಸನ ಡೆಮು, ಜೂನ್ 18ರಿಂದ 20, ಜೂನ್ 23ರಿಂದ 27, ಜೂನ್ 30ರಿಂದ ಜುಲೈ 04 ಮತ್ತು ಜುಲೈ 07ರಿಂದ 11 ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post