ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಯುವುದರ ಹಿನ್ನೆಲೆಯಲ್ಲಿ ಫೆಬ್ರವರಿ 19, 20 ಮತ್ತು 21 ರಂದು ಸತತ ಮೂರು ದಿನಗಳ ಕಾಲ ವಿವಿಧ ಬಡಾವಣೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಮೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಈ ಮೂರೂ ದಿನಗಳಂದು ಬೆಳಿಗ್ಗೆ 9:00 ಗಂಟೆಯಿAದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಕುವೆಂಪುನಗರದ ಸೂಡಾ ಸಿ ಮತ್ತು ಡಿ ಬ್ಲಾಕ್, ಶಿವಕುಮಾರಸ್ವಾಮಿ ಲೇಔಟ್, ಇನ್ಫ್ರಾ ಸಿಟಿ, ಮ್ಯಾಕ್ಸ್ ಲೇಔಟ್, ಎಂಇಎಸ್ ಲೇಔಟ್, ರೆಡ್ಡಿ ಲೇಔಟ್ ಹಾಗೂ ಸವಳಂಗ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ.
ಇದರೊಟ್ಟಿಗೆ ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು ಹಾಗೂ ಕೃಷಿ ಕಾಲೇಜು ಆವರಣ, ಗ್ರಾಮೀಣ ಭಾಗಗಳಾದ ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಹಳ್ಳಿ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ಗೋಂದಿ ಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಕರೆಂಟ್ ಇರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















