ಬೆಂಗಳೂರು: ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟರ್ ಬ್ರಾಡ್ ಹಾಗ್ ನಿನ್ನೆ ಬೆಂಗಳೂರಿನ ವಿದ್ಯಾರ್ಥಿ ಭವನ್ ಹೊಟೇಲ್’ಗೆ ಭೇಟಿ ನೀಡಿ, ಅಲ್ಲಿನ ದೋಸೆ ರುಚಿಯನ್ನು ಸವಿದರು.
ಗಾಂಧಿ ಬಜಾರ್’ನಲ್ಲಿರುವ ವಿದ್ಯಾರ್ಥಿ ಭವನ್ ಹೊಟೇಲ್ ವಿವಿಧ ರೀತಿಯ ದೋಸೆ ಅದರಲ್ಲೂ ಮಸಾಲೆ ದೋಸೆ ಹಾಗೂ ಬೆಣ್ಣೆ ಮಸಾಲೆಗೆ ಖ್ಯಾತಿಯನ್ನು ಪಡೆದಿದೆ.
ಇಲ್ಲಿಗೆ ಭೇಟಿ ನೀಡಿದ್ದ ಹಾಗ್ ಅವರೊಂದಿಗೆ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಸಹ ಸಾಥ್ ನೀಡಿದ್ದರು. ವಿದ್ಯಾರ್ಥಿ ಭವನ್ ಹೊಟೇಲ್ ಬಗ್ಗೆ ಕೇಳಿ ತಿಳಿದಿದ್ದ ಹಾಗ್, ನಿನ್ನೆ ಭೇಟಿ ನೀಡಿದ ವೇಳೆ ಮಸಾಲೆ ದೋಸೆ, ಇಡ್ಲಿ, ವಡೆ, ಸಾಂಬಾರ್, ಚೌಚೌ ಬಾತ್, ಪೂರಿ ಸಾಗು ಹಾಗೂ ಕಾಫಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಇಲ್ಲಿನ ಮಾಣಿಗಳು ದೋಸೆ ಪ್ಲೇಟ್’ಗಳನ್ನು ಒಂದರ ಮೇಲೆ ಒಂದರಂತೆ ವಿಭಿನ್ನವಾಗಿಟ್ಟುಕೊಂಡು ಸರ್ವ್ ಮಾಡುವ ರೀತಿಗೆ ಹಾಗ್ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
Discussion about this post