ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತನ್ನ ಪಾಡಿಗೆ ತಾನು ಸುಮ್ಮನೆ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ ವ್ಯಕ್ತಿಯೊಬ್ಬ ಸಾಯಿಸಿರುವ ಘಟನೆ ನಡೆದಿದೆ.
ರಾಜಧಾನಿ ಬೆಂಗಳೂರಿನ ಜಯನಗರ 9ನೆಯ ಬ್ಲಾಕ್’ನ 28ನೆಯ ಮುಖ್ಯರಸ್ತೆಯ 39ನೆಯ ಅಡ್ಡರಸ್ತೆಯ ಮಿಲ್ಕ್ ಬೂತ್ ಬಳಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಕಾರು ಚಲಾಯಿಸಿದ ವ್ಯಕ್ತಿಯ ವಿರುದ್ಧ ಎಫ್’ಐಆರ್ ದಾಖಲಾಗಿದೆ.
ಮೃತ ಕರಿಯ ಎಂಬ ಹೆಸರಿನ ಸಾಕು ನಾಯಿ ಮಾಲಿಕ 9ನೆಯ ಬ್ಲಾಕ್ ನಿವಾಸಿ ಸಿ.ಎ. ಚನ್ನಕೇಶವ ಎಂಬುವವರು ನೀಡಿದ ದೂರಿನ ಮೇರೆಗೆ ತಿಲಕ ನಗರ ಠಾಣೆ ಪೊಲೀಸರು ಎಫ್’ಐಆರ್ ದಾಖಲಿಸಿದ್ದಾರೆ. ನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಿ ಪರಾರಿಯಾಗಿರುವ ಕಾರು ಚಾಲಕನ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಈ ಸಾಕು ನಾಯಿ ಮಿಲ್ಕ್ ಬೂತ್ ಮುಂಭಾಗ ರಸ್ತೆಯಲ್ಲಿ ಮಲಗಿತ್ತು. ಇಲ್ಲಿಗೆ ಸಮೀಪದ ಡೆಂಟಲ್ ಕ್ಲಿನಿಕ್ ಎದುರು ನಿಲ್ಲಿಸಿದ್ದ ಕಾರನ್ನು ಚಾಲಕ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಹತ್ತಿಸಿಕೊಂಡು ಪರಾರಿಯಾಗಿದ್ದಾನೆ. ತೀವ್ರಗಾಯಗೊಂಡ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದೆ.
Also read: ಮೋತಿಪುರ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಅಗತ್ಯ ನೆರವು: ಶಾಸಕ ಖಾಶೆಂಪುರ್ ಭರವಸೆ
ಕಾರು ಚಾಲಕ ನಾಯಿ ಮೇಲೆ ಕಾರು ಹತ್ತಿಸಿಕೊಂಡು ಹೋಗಿರುವ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಚಾಲಕ ರಸ್ತೆಯಲ್ಲಿ ಮಲಗಿದ್ದ ನಾಯಿಯ ಕುತ್ತಿಗೆಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಈ ವೇಳೆ ನಾಯಿ ಒದ್ದಾಡಿ ಮೇಲೆದ್ದು ಕೆಲವೇ ಅಡಿಗಳಲ್ಲಿ ಕುಸಿದು ಬಿದ್ದು ನರಳಿ ಪ್ರಾಣ ಬಿಟ್ಟಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post