ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇತ್ತೀಚೆಗೆ ವಿಧಾನ ಪರಿಷತ್’ಗೆ ಆಯ್ಕೆಯಾಗಿ ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ ಪಾಲ್ಗೊಂಡಿರುವ ಎಂಎಲ್’ಸಿ ಡಿ.ಎಸ್. ಅರುಣ್, ವಿಧಾನ ಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಪ್ರವೇಶಿಸಿದರು.
ಸಾಧನೆಯ ಪಥದಲ್ಲಿ ಅಧಿಕಾರದ ಗದ್ದುಗೆ ಏರಿ ವಿಧಾನಸೌಧದ ಮೆಟ್ಟಿಲು ಮೂಲಕ ಹಾದುಹೋಗುವ ನಡುವೆ ಮೊದಲ ಅನುಭವವನ್ನು ಪ್ರಜಾಪ್ರಭುತ್ವದ ದೇಗುಲದ ಮೆಟ್ಟಿಲಿಗೆ ನಮಸ್ಕರಿಸಿ ಪ್ರವೇಶಿಸಿದರು.
ತಾನೊಬ್ಬ ಸೇವಕನಾಗಿ ಭಾರತಾಂಬೆಯ ಆರಾಧಕರಾಗಿ ನಮಸ್ಕರಿಸಿ ಮುಂದೆ ನಡೆದ ಅಪರೂಪದ ಸಜ್ಜನ ರಾಜಕಾರಣಿ ಅರುಣ್ ಅವರು, ತಮ್ಮ ಸದ್ದಿಲದ ಸಾಧನೆಯಿಂದಲೇ ಜನಾನುರಾಗಿಯಾದವರು. ಇಂತಹ ವ್ಯಕ್ತಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ಇಂದು ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post