ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು #Mantralaya Subhudendra Thirtha Shri 24 ಅಡಿ ಎತ್ತರದ ರಾಯರ ಪ್ರತೀಕವನ್ನು ಉದ್ಘಾಟಿಸಿದರು.
ಶ್ರೀ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದ ನಂತರ ಪುಷ್ಪಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ ಕಾಮಧೇನು-ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರತೀಕವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ರಾಯರ ಅಂತರಂಗ ಭಕ್ತರಾದ, ಪ್ರತೀಕದ ಸಂಪೂರ್ಣ ವೆಚ್ಚವನ್ನು ಭರಿಸಿದ ಮುಕುಂದ ಕೃಷ್ಣ ಅವರಿಗೂ ಮತ್ತು ಈ ಚಿತ್ರಕಲೆ ನಿರ್ಮಾಣ ಮಾಡಿದ ಶಿವದತ್ತರಿಗೂ ರಾಯರ ಶೇಷ ವಸ್ತ್ರ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು.
Also read: ಕುಸ್ತಿಪಟು ಬಜರಂಗ್ ಪುನಿಯಾ ನಾಲ್ಕು ವರ್ಷ ಬ್ಯಾನ್ | NADA ಆದೇಶ
ವಿಶೇಷವಾಗಿ ಈ ರಾಯರ ಪ್ರತೀಕವೂ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಭಕ್ತರ ಸಹಕಾರದೊಂದಿಗೆ ಭಕ್ತರಿಂದ, ಭಕ್ತರಿಗಾಗಿ, ಭಕ್ತರ ಅನುಗ್ರಹಕ್ಕಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಬಹಳ ಸುಂದರ ಅಪರೂಪವಾದ ಕಾಮಧೇನು-ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರತೀಕದ ಸಂಪೂರ್ಣ ಜವಾಬ್ದಾರಿಯ ನಿರ್ವಹಣೆಯನ್ನು ಮಾಡಿದ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರಿಗೆ ಶ್ರೀ ಗುರುರಾಯರ ಅನುಗ್ರಹ ಸದಾ ಕಾಲ ಇರಲಿ ಎಂದು ಅನುಗ್ರಹಿಸಿದರು.
ಪೂರ್ಣಪ್ರಜ್ಞ ವಿದ್ಯಾ ಪೀಠದ ಹತ್ತಿರ ಇರುವ ಸ್ಥಪತಿ ಕ್ರಿಯೇಶನ್ಸ್ ನ ಮುಖ್ಯಸ್ಥರಾದ ಎನ್ ಶಿವದತ್ತ ರವರ ನಿರ್ದೇಶನದಲ್ಲಿ ಸುಮಾರು ಎರಡೂವರೆ ತಿಂಗಳಿನ ಗಡುವಿನಲ್ಲಿ 24 ಅಡಿ ಎತ್ತರದ 12 ಅಡಿ ಅಗಲ 3 ಅಡಿ ದಪ್ಪ ಉಳ್ಳ ಎಫ್ ಆರ್ ಪಿ ಮೌಲ್ಡ್ ಇಂದ “ಕಾಮಧೇನು ಕಲ್ಪವೃಕ್ಷ “ಶ್ರೀ ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀ ರಾಮ ಕೃಷ್ಣರ” ಭಾವಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಶಿವದತ್ತರವರ ತಂಡವರಾದ ರವಿಕುಮಾರ್, ಪ್ರವೀಣ್ ಕುಮಾರ್, ಶ್ರೀ ರಾಮ್, ನಾಗರಾಜ್, ಪ್ರದೀಪ್, ಶರತ್ ಚಂದ್ರ, ಮತ್ತು ಚಾಂದ್ ಇವರುಗಳ ಸಹಕಾರದಿಂದ ಒಟ್ಟುಗೂಡಿ ಸುಂದರವಾದ ಈ ಪ್ರತೀಕವನ್ನು ಶ್ರದ್ಧೆ ಮತ್ತು ಭಕ್ತಿ ತನು ಮನದಿಂದ ನಿರ್ಮಾಣ ಮಾಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತರಾಗಿದ್ದಾರೆ ಎಂದು ಶ್ರೀ ಮಠದ ಪುರೋಹಿತರಾದ ನಂದ ಕಿಶೋರ್ ಆಚಾರ್ಯರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post