ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗುತ್ತಿಗೆದಾರ ಸಂತೋಷ್ ಪಾಟೀಲ್ Santhosh Patil ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ಆಯಾಮ ಪಡೆದಿದ್ದು, ಸಂತೋಷ್ ಆತ್ಮಹತ್ಯೆ ಪ್ರಕರಣ ಬೇಧಿಸಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ ಎನ್ನಲಾಗಿದೆ.
ಸಂತೋಷ್ ಓಡಾಡಿದ ಸ್ಥಳಗಳಲ್ಲಿ ಖಾಕಿ ಮಹಜರು ನಡೆಸಿ, ತನಿಖೆ ತೀವ್ರಗೊಂಡಿದೆ. ಹಾಗೂ ಉಡುಪಿಗೆ ಬರುವ ಮೊದಲು ಚಿಕ್ಕಮಗಳೂರು ಮತ್ತು ದಾವಣಗೆರೆಗಳಿಗೆ ತೆರಳಿ ಅಲ್ಲಿ ಹೋಮ್ ಸ್ಟೇಗಳಲ್ಲಿ ಉಳಿದುಕೊಂಡಿರುವುದಾಗಿ ಸಂತೋಷ್ನೊಂದಿಗೆ ಉಡುಪಿಗೆ ಬಂದಿದ್ದ ಸ್ನೇಹಿತರಾದ ಮೇದಪ್ಪ ಮತ್ತು ಪ್ರಶಾಂತ್ ಶೆಟ್ಟಿ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಣಿಪಾಲ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಚಿಕ್ಕಮಗಳೂರಿಗೆ, ಉಡುಪಿ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ದಾವಣಗೆರೆಗೆ ತೆರಳಿದೆ. ಮಲ್ಪೆ ಮತ್ತು ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ತಂಡ ಬೆಳಗಾವಿಗೆ ತೆರಳಿದೆ ಎಂದು ತಿಳಿದುಬಂದಿದೆ.
ಸಂತೋಷ್ ಮೃತದೇಹ ಪತ್ತೆಯಾಗಿದ್ದ ಲಾಡ್ಜ್‌ನಲ್ಲಿ ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸಂತೋಷ್ ಇದನ್ನು ಸೇವಿಸಿದ್ದರೇ ಎಂಬ ಅನುಮಾನ ಮೂಡಿಸಿದೆ. ಲಾಡ್ಜಿನ ಕಸದತೊಟ್ಟಿಯಲ್ಲಿ ಈ ವಿಷದ ಬಾಟಲಿ ಪತ್ತೆಯಾಗಿದ್ದು, ಸಂತೋಷ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ. ಸದ್ಯ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.
ಉಡುಪಿಯ ಲಾಡ್ಜ್‌ಗೆ ಬರುವ ಮುನ್ನ ಸಂತೋಷ್ ಚಿಕ್ಕಮಂಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಲಾಡ್ಜಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷ ಬಳಸಲಾಗುತ್ತದೆ ಎನ್ನಲಾಗಿದೆ. ಈ ಕೀಟನಾಶಕ ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಈ ಕೀಟನಾಶಕ ಸರ್ಕಾರದಿಂದ ನಿಷೇಧಕ್ಕೊಳಪಒಟ್ಟಿದೆ.
Also read: ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಹೋಗಲು ಅನರ್ಹರು: ನಳಿನ್ ಕುಮಾರ್ ಕಟೀಲು ಕಿಡಿ
ಕೆಲವರ್ಷಗಳ ಹಿಂದೆ ಬಿಹಾರದಲ್ಲಿ ಇದೇ ವಿಷ 23 ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕೇವಲ ಈ ವಿಷದ ಖಾಲಿ ಬಾಟಲಿಯಲ್ಲಿ ಹಾಕಲಾಗಿದ್ದ ಎಣ್ಣೆಯನ್ನು ಬಳಸಿದ ಕಾರಣದಿಂದ 23ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಮೋನೋಕ್ರೋಟೋಫಾಸ್ ಅತ್ಯಂತ ಅಪಾಯಕಾರಿಯಾಗಿರುವ ವಿಷವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post