ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅರುಣ ಪಿಕ್ಚರ್‍ಸ್ ಬ್ಯಾನರ್ ಅಡಿಯಲ್ಲಿ ‘ತೋಳ ಬಂತು ತೋಳ ‘ ಕನ್ನಡ ಚಲನಚಿತ್ರದ ಚಿತ್ರೀಕರಣ ಕಳೆದ ಹತ್ತು ದಿನಗಳಿಂದ ಬೆಂಗಳೂರು ಸುತ್ತ ಮುತ್ತ ಭರದಿಂದ ಸಾಗಿದೆ.
ಬೆಂಗಳೂರಿನಲ್ಲಿ ಹುಡುಗಿಯರ ನಿಗೂಢ ಕೊಲೆಗಳಾಗುತ್ತವೆ. ಪೊಲೀಸ್ ಡಿಪಾರ್ಟಮೆಂಟ್ ಸೀರಿಯಲ್ ಕಿಲ್ಲರ್‌ನ್ನು ಹುಡುಕಲು ಸ್ಪೇಷಲ್ ಟೀಮ್ ಒಂದನ್ನು ನಿರ್ಮಿಸುತ್ತದೆ. ಸಿರಿಯಲ್ ಕಿಲ್ಲರ್ ಆ ಸ್ಪೇಷಲ್ ಟೀಮ್ ದಾರಿ ತಪ್ಪಿಸಿ ಹುಡುಗಿಯರ ಹಂಟಿಂಗ್ ಮಾಡುತ್ತಿರುತ್ತಾನೆ. ಈ ಮದ್ಯೆ ಸ್ಪೇಷಲ್ ಪೊಲೀಸ್ ಆಫೀಸರ್ ಭಾರ್ಗವ ತನ್ನ ಗೆಳತಿಯನ್ನು ಕಳೆದುಕೊಳ್ಳುತ್ತಾನೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿಯುವಂತೆ ಮಾಡುತ್ತದೆ. ಕಥೆಯ ಸಂಪೂರ್ಣ ಥ್ರಿಲ್ಲರ್ ಅನುಭವವನ್ನು ಚಿತ್ರಮಂದಿರದಲ್ಲೇ ಪ್ರೇಕ್ಷಕರು ಪಡೆಯಬೇಕು. ಈಗಾಗಲೇ ಶೇ.30ರಷ್ಟು ಚಿತ್ರೀಕರಣ ಮುಗಿಸಿದ್ದು ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಮ್ಮ ತಂಡದ್ದು ಎಂದು ಯುವ ನಿರ್ದೇಶಕ ಅರುಣ ಹೇಳುತ್ತಾರೆ.
ತಾರಾಗಣದಲ್ಲಿ ಅರುಣ್, ಡಾರ್ಲಿಂಗ್ ನವೀನ್, ಡಿ.ರುದ್ರೇಶ್ ಕುಮಾರ್,ಕೆ.ರಾಜೇಶ್, ಖುಷಿ ಮೊಹಾಂತೋ, ಸೋಫಿ, ಆರಜು, ಕವಿತ ಸಿಂಗ್, ಅಮರ್, ಇತರರು ಅಭಿನಯಿಸುತ್ತಿದ್ದಾರೆ. ವಿನಾಯಕ ರೇವಡಿ ಅವರ ಛಾಯಾಗ್ರಹಣ . ಸಂಕಲನ ಮುತ್ತುರಾಜ್. ಟಿ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಸಾಹಸ ಯೋಗೇಶ್, ಸಂಗೀತ ಜೈ ಬೋರ, ಸಹ ನಿರ್ದೇಶನ ಅಶೋಕ.ಎನ್ ಅವರದಿದೆ . ಕಥೆ, ಚಿತ್ರಕತೆ, ಸಂಭಾಷಣೆ ನಿರ್ದೇಶನ ಅರುಣ್ ಅವರದಿದ್ದು ಅರುಣ ಪ್ರಸಾದ್, ನವೀನ್ ರಾಜ್, ಡಿ.ರುದ್ರೇಶ್ ಕುಮಾರ್ ಮತ್ತು ಮೋಹನ್ ಸುಗಂಧಿ ಚಿತ್ರ ನಿರ್ಮಿಸುತ್ತಿದ್ದಾರೆ.
ವರದಿ: ಡಾ.ಪ್ರಭು ಗಂಜಿಹಾಳ-9448775346, ಡಾ.ವೀರೇಶ ಹಂಡಗಿ -9242078901
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post