ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಎಸ್ ಡಿ ಫಿಲ್ಮ್ಸ್ ಮತ್ತು ಮೂರು ಬಿಟ್ಟವರು ಎಂಟರ್ಟೈನ್ಮೆಂಟ್ ಬ್ಯಾನರನ ಅಡಿಯಲ್ಲಿ ನಿರ್ಮಾಣವಾಗಿರುವ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ಮಾಡಿರುವಂತಹ “ವ್ಯೂಹ” Vyuha ಕನ್ನಡ ಚಲನಚಿತ್ರದ ”ಪದೆ ಪದೆ ನೆನಪಾಗಿದೆ ಅದೇ ಕಥೆ ನೆನೆದು ಮೊದಲ ಲಿರಿಕಲ್ ಹಾಡು” ಮಾಸ್ ಮ್ಯೂಸಿಕ್ ಅಡ್ಡಾ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಕೋವಿಡ್ Covid ಸಮಯದಲ್ಲಿ ನಡೆಯುವಂತಹ ಒಂದು ಸಸ್ಪೆನ್ಸ ಥ್ರಿಲ್ಲರ್ ಡ್ರಾಮಾ ಕಥೆ ಇದಾಗಿದ್ದು, ಯಾರು ಒಳ್ಳೆಯವರು ಅಲ್ಲಾ ಹಾಗೇ ಕೆಟ್ಟವರು ಅಲ್ಲಾ, ಮನುಷ್ಯನ ಪರಿಸ್ಥಿತಿ ಆತನನ್ನು ಕೆಟ್ಟವನು ಒಳ್ಳೆಯವನಾಗಿ ಮಾಡುತ್ತೆ ಎನ್ನುವುದೇ ಚಿತ್ರದೊಳಗೆ ಅಡಗಿರುವ ಕಥೆ. ಬೆಳಗಾವಿ ಸುತ್ತಮುತ್ತಲು ಚಿತ್ರೀಕರಣ ನಡೆಸಲಾದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸೂರಜ್ ದೇಸಾಯಿ, ಪ್ರವೀಣ ಸುತಾರ, ದೀಪಶ್ರೀ ಗೌಡ, ಮಾನಸಿ ಶಿವನಗೇಕರ್, ಮಹೇಶ ಪಾಟೀಲ್, ಅಭಿಜಿತ ದೇಶಪಾಂಡೆ , ಶಾಂತಾ ಆಚಾರ್ಯ, ಕಿರಣ್, ಮುಂತಾದವರು ಅಭಿನಯಿಸಿದ್ದಾರೆ.
Also read: ಜಗನ್ಮಾತೆಯ ಅನುಗ್ರಹದಿಂದ ವಿಶ್ವದ ಎಲ್ಲಾ ರೀತಿಯ ಸತ್ಕಾರ್ಯ ಸಂಪನ್ನ: ಮಾತಾಜಿ ವಿವೇಕಮಯಿ ಸಂದೇಶ
ವಿಶ್ವರಾಧ್ಯಕೋಟಿ ಛಾಯಾಗ್ರಹಣ , ಚಿತ್ರದ ಒನಲೈನ್ ಕಥೆಯನ್ನು ಸೂರಜ್ ದೇಸಾಯಿ ಬರೆದಿದ್ದಾರೆ. ಚಿತ್ರಕಥೆ, ಸಂಭಾ?ಣೆಯನ್ನು, ಪ್ರವೀಣ ಸುತಾರ, ಮಹೇಶ ಪಾಟೀಲ, ಅಭಿ?ಕ್ ದೇಸಾಯಿ ಬರೆದಿದ್ದಾರೆ. ಈಗಾಗಲೇ ಅನಾಮಿಕ, ಒಂದೊಳ್ಳೆ ಲವ್ ಸ್ಟೋರಿ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡ ಪ್ರವೀಣ ಸುತಾರ ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಫ್ರಾಂಕ್ಲೀನ್ ರಾಕಿ ಸಂಗಿತ ನಿರ್ದೇಶನ, ಪ್ರಶಾಂತ ಶೇಬನ್ನವರ ಸಂಕಲನ , ಡಾ.ಪ್ರಭು ಗಂಜಿಹಾಳ ,ಡಾ.ವೀರೇಶ ಹಂಡಿಗಿ ಅವರ ಪತ್ರಿಕಾ ಸಂಪರ್ಕ ಚಿತ್ರಕ್ಕೆ ಇದೆ. ಸಧ್ಯದಲ್ಲೇ ಚಿತ್ರ ಬಿಡುಗಡೆಗೊಳಿಸುವದಾಗಿ ನಿರ್ದೇಶಕ ಪ್ರವೀಣ ಸುತಾರ ತಿಳಿಸಿದ್ದಾರೆ.
ವರದಿ: ಡಾ.ಪ್ರಭು ಗಂಜಿಹಾಳ, ಮೊ: 9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post