Thursday, October 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ‘ಬೆಂಗಳೂರಿಗೆ ಶರಾವತಿ ಬೇಡ’ ಪತ್ರ

June 23, 2019
in Special Articles
0 0
0
Share on facebookShare on TwitterWhatsapp
Read - 2 minutes

ಶರಾವತಿ ನೀರನ್ನು ರಾಜಧಾನಿ ಬೆಂಗಳೂರಿಗೆ ಕೊಂಡೊಯ್ಯುವ ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಲೆನಾಡಿನಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಯಾವುದೇ ಕಾರಣಕ್ಕೂ ಮಲೆನಾಡಿನಿಂದ ಶರಾವತಿ ನದಿ ನೀರನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಮಲೆನಾಡಿಗರು ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಈ ಕುರಿತಂತೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿದೆ. ಆ ಪತ್ರದ ಯಥಾವತ್ ಈ ಕೆಳಗಿನಂತಿದೆ.

ಬೆಂಗಳೂರಿಗೆ ಶರಾವತಿ ಬೇಡ…

ಬೆಂಗಳೂರು ಬೆಳವಣಿಗೆಗೆ ಕಡಿವಾಣ ಹಾಕಿ, ಸಾಗರ, ಶಿರಸಿ ಶಿವಮೊಗ್ಗ ಅಭಿವೃದ್ಧಿ ಪಡಿಸಿ.

ಸಮುದ್ರಮಟ್ಟದಿಂದ ಲಿಂಗನಮಕ್ಕಿ ಎತ್ತರ ಪೂರ್ಣ ತುಂಬಿದಾಗ 1819 ಅಡಿ. ಹಾಗಾಗಿ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಠ 1650 ಅಡಿಗಳ ಮಟ್ಟದಿಂದ ಅಥವಾ ಕಾರ್ಗಲ್ ಡ್ಯಾಮಿನಿಂದ ಪೈಪ್ ಲೈನ್ ಅಳವಡಿಸಬೇಕು. ಸಮುದ್ರಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 3000 ಅಡಿಯಾದರೆ, ಬೆಂಗಳೂರಿನ ಅತ್ಯಂತ ಎತ್ತರದ ದೊಡ್ಡಬೆಟ್ಟಹಳ್ಳಿ ಇರುವುದು 3150 ಅಡಿಯಷ್ಟು ಎತ್ತರದಲ್ಲಿ. ಅಂದರೆ ಬೆಂಗಳೂರಿಗೆ ನೀರೊಯ್ಯಲು ಶರಾವತಿಯಿಂದ ಹೆಚ್ಚುಕಡಿಮೆ ಅದನ್ನು 1500 ಅಡಿ ಎತ್ತಬೇಕು. ಕೇವಲ ಅಷ್ಟು ಎತ್ತರಕ್ಕೆ ಎತ್ತುವುದಷ್ಟೇ ಅಲ್ಲ ಅದನ್ನು 400 ಕಿಲೋಮೀಟರ್ ದೂರಕ್ಕೆ ತಳ್ಳಬೇಕು.

ಈಗ ಶರಾವತಿಯ ಟರ್ಬೈನುಗಳು ಡಿಸೈನ್ ಆಗಿರುವ ಗ್ರಾಸ್ ಹೆಡ್ (ಎತ್ತರದ ಅಂತರ) ಸುಮಾರು 1525 ಅಡಿ. ಈ ಹೆಡ್ ಬಳಸಿಕೊಂಡು ಅಲ್ಲಿ ಒಂದು ಮೆಗಾವಾಟ್ ಉತ್ಪಾದಿಸಲು ಸರಿಸುಮಾರು 10 ಕ್ಯೂಸೆಕ್ಸ್ ನೀರು ಬೇಕು.

ಅಂದರೆ ಬೆಂಗಳೂರಿಗೆ ಒಯ್ಯಲು ಕೇವಲ ನೀರೆತ್ತುವುದಕ್ಕೇ ಶರಾವತಿಯಲ್ಲಿ ಉತ್ಪಾದನೆಯಾಗುವಷ್ಟೇ ಪ್ರಮಾಣದ ವಿದ್ಯುಚ್ಛಕ್ತಿ ಬೇಕು. ಇನ್ನು ಅದನ್ನು 400 ಕಿಲೋಮೀಟರ್ ತಳ್ಳಲು?

ಜೊತೆಗೆ ಎಂತಹ ಗುಣಮಟ್ಟದ ಯಾವುದೇ ಪಂಪ್ ನೂರಕ್ಕೆ ನೂರರಷ್ಟು ಕಾರ್ಯಕ್ಷಮತೆ ಹೊಂದಿರುವುದು ಸಾಧ್ಯವಿಲ್ಲ. ಹಾಗಾಗಿ ಅದರಲ್ಲಿ ವ್ಯರ್ಥವಾಗುವ ವಿದ್ಯುತ್ ಪ್ರಮಾಣವನ್ನೂ ಲೆಕ್ಕಹಾಕಬೇಕು.

ಈ ಲೆಕ್ಕಾಚಾರದಲ್ಲಿ ಶರಾವತಿಯಿಂದ ಬೆಂಗಳೂರಿಗೆ ಪ್ರತಿ ಕ್ಯೂಸೆಕ್ಸ್ ನೀರೊಯ್ಯಲು ಅದೇ ನೀರಿನಿಂದ ಶರಾವತಿಯಲ್ಲಿ ಉತ್ಪಾದನೆಯಾಗುವ ಪ್ರಮಾಣದ ಒಂದೂವರೆ ಪಟ್ಟು ವಿದ್ಯುತ್ ( ಕನಿಷ್ಠ ಅಂದಾಜು) ಬೇಕಾಗುತ್ತದೆ. 

ಇನ್ನು ಇದರಲ್ಲಿ ನೀರು ಮತ್ತು ವಿದ್ಯುತ್ ಸೋರಿಕೆಯ ಲೆಕ್ಕ ಸೇರಿಸಿಲ್ಲ.  ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮದ ಮೂಲಕ ಬೆಂಗಳೂರಿಗೆ ನೀರೊಯ್ಯುವ ಬದಲು ಬೆಂಗಳೂರನ್ನೇ ಯಾಕೆ ಸಾಗರ, ಶಿರಸಿ, ಶಿವಮೊಗ್ಗಗಳಿಗೆ ತರಬಾರದು?

ಏನು ಬೆಂಗಳೂರನ್ನೇ ಸ್ಥಳಾಂತರಿಸುವುದೇ? ಇದೆಂತಹ ಹುಚ್ಚು ಪ್ರಶ್ನೆ ಎನ್ನಬಹುದು. ಆದರೆ ಇದು ಹುಚ್ಚೂ ಅಲ್ಲ, ಮಳ್ಳೂ ಅಲ್ಲ. ಇಡೀ ಕರ್ನಾಟಕದಲ್ಲಿ , ತಮಿಳು ಮತ್ತು ತೆಲುಗರಿಗೆ ಹತ್ತಿರವಾದ ಬೆಂಗಳೂರೊಂದನ್ನೇ ಬೆಳೆಸುವ ಬದಲು ಕನ್ನಡ ನಾಡಿನ ಒಡಲೊಳಗೆ ಹುದುಗಿರುವ ಶಿವಮೊಗ್ಗ ಸಾಗರ ಶಿರಸಿಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೆ ಯಾಕೆ ಒಳಪಡಿಸಬಾರದು. ಶಿವಮೊಗ್ಗೆ ಮತ್ತು ಕಾರವಾರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿ ಬೆಂಗಳೂರಿನ ಐ ಟಿ ಇಂಡಸ್ಟ್ರಿಗಳನ್ನು ಶಿವಮೊಗ್ಗ ಶಿರಸಿ ಸಾಗರಗಳಿಗೆ ಶಿಫ್ಟ್ ಮಾಡಿಸಬಾರದು?

ಇದರಿಂದ ಇನ್ನೊಂದು ಅನುಕೂಲವೂ ಉಂಟು. ಹೇಗೂ ಬೆಂಗಳೂರಿನಲ್ಲಿ ಮಲೆನಾಡಿನ ಈ ಪ್ರಾಂತ್ಯಗಳಿಂದ ಮನೆಗೊಬ್ಬರು, ಇಬ್ಬರು ದುಡಿಮೆಯಲ್ಲಿ ಇದ್ದೇ ಇದ್ದಾರೆ. ಅವರು ಮಲೆನಾಡಿನ ತೋಟ ಗದ್ದೆಗಳ ಅಂಚಿನಲ್ಲಿರುವ ಒಂಟಿ ಹಳ್ಳಿಗಳಲ್ಲಿ ವೃದ್ಧ ತಂದೆತಾಯಿಗಳನ್ನು ಬಿಟ್ಟು ಬೆಂಗಳೂರಿನಲ್ಲಿ ಪರಿತಪಿಸುವ ಬದಲು ತಮ್ಮೂರಿನಲ್ಲೇ ಇದ್ದು, ನೌಕರಿಗಳನ್ನೂ ಮಾಡಿಕೊಂಡು, ತಂದೆತಾಯಿಯರನ್ನೂ ನೋಡಿಕೊಂಡು , ತೋಟ ಗದ್ದೆಗಳನ್ನೂ ಅಭಿವೃದ್ಧಿ ಪಡಿಸಿಕೊಂಡು ನೆಮ್ಮದಿಯ ಬದುಕನ್ನು ಬಾಳುವಂತಾಗುತ್ತದೆ. ಬೆಂಗಳೂರಿನ ಜನಸಂಖ್ಯೆಯೂ ತಗ್ಗಿ, ಟ್ರಾಫಿಕ್ ಜಾಮ್, ನೀರಡಿಕೆ, ಕಸದ ಸಮಸ್ಯೆ, ಪರಿಸರ ಮಾಲಿನ್ಯಗಳೂ ನಿಯಂತ್ರಣಕ್ಕೆ ಸಿಕ್ಕೀತಲ್ಲವೇ? ಪ್ರತಿವಾರ ಬೆಂಗಳೂರಿನಿಂದ ಸಾಗರ, ಶಿವಮೊಗ್ಗ ಶಿರಸಿಗಳಿಗೆ ಪ್ರಯಾಣಮಾಡುವವರ ಸಂಖ್ಯೆಯೂ ತಗ್ಗಿ ಉಳಿದವರಿಗೂ ಸುಖವಾಗುವುದಲ್ಲವೇ?

ಈಗ ಎಲ್ಲೆಡೆಯೂ ಇಂಟರ್ನೆಟ್ ಸೌಲಭ್ಯ ಇರುವುದರಿಂದ ಮಲೆನಾಡಿನ ಮಕ್ಕಳು ಮನೆಯಿಂದಲೇ ( ವರ್ಕ್ ಫ್ರಮ್ ಹೋಮ್) ಸೌಲಭ್ಯದಿಂದ ಹಳ್ಳಿಗಳಿಂದಲೇ ಕೆಲಸ ಮಾಡಬಹುದಲ್ಲವೇ? ಇದಾಗಬೇಕೆಂದರೆ ಎಲ್ಲ ಮೂಲಸೌಕರ್ಯಗಳನ್ನೂ ತಾನೊಂದೇ ನುಂಗುವ ಬೆಂಗಳೂರಿನ ಬೆಳವಣಿಗೆಗೆ ತಡೆಯೊಡ್ಡಬೇಕು.‌ ಅಲ್ಲಿಂದ ಕೈಗಾರಿಕೆಗಳನ್ನು ವಿಕೇಂದ್ರೀಕರಣಕ್ಕೊಳಪಡಿಸಿ, ಅದನ್ನು ಕೇವಲ ಸಾಗರ ಶಿವಮೊಗ್ಗವಷ್ಟೇ ಅಲ್ಲ ಶಿರಸಿ, ಕಾರವಾರ, ಚಿಕ್ಕಮಗಳೂರಿಗೆ ವರ್ಗಾಯಿಸಿ. ಆ ಊರುಗಳ ಮೂಲಸೌಕರ್ಯಗಳಿಗೆ ಒತ್ತು ಕೊಡಿ. ಇದರಿಂದ ಎನರ್ಜಿ ಉಳಿಯುತ್ತದೆ. ಪರಿಸರ ಉಳಿಯುತ್ತದೆ. ಎಷ್ಟೋ ವೃದ್ಧರ ಬದುಕು ಉಳಿಯುತ್ತದೆ.

Tags: BENGALURUKannada NewsLatterMalnad NewsSharavati RiverShivamoggaSocial mediaಬೆಂಗಳೂರುಮಲೆನಾಡುವಿದ್ಯುಚ್ಛಕ್ತಿಶರಾವತಿ ನದಿಶಿವಮೊಗ್ಗಸೋಷಿಯಲ್ ಮೀಡಿಯಾ
Previous Post

ಯಕ್ಷಲೋಕದ ಉದಯೋನ್ಮುಖ ಕೀರ್ತಿ ಕಿರೀಟ ಸೀತಾನದಿ ತಟದ ಈ ಕಿರಾಡಿ ಪ್ರಕಾಶ್ ಮೊಗವೀರ

Next Post

ಗೋವು ಕಳವು ಪ್ರಕರಣ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಥಳ ಪರಿಶೀಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೋವು ಕಳವು ಪ್ರಕರಣ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಥಳ ಪರಿಶೀಲನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025

ಗೋದೀಪ | ಗೋಸಂರಕ್ಷಣೆ – ಲೋಕಕಲ್ಯಾಣಕ್ಕಾಗಿ ಇಂದು ಸಂಜೆ ವಿಶ್ವಜನನಿಯ ವಿಶಿಷ್ಟ ಪೂಜೆ

October 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!