ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು (Bengaluru) ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅ.15ರಂದು ಗುರುವಾರ ಸಂಜೆ ‘ವೀಣಾ ವಾದನ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಹಾಗೂ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯ ಅವರ ನೇತೃತ್ವದಲ್ಲಿ ಈ ಸಂಗೀತ ಕಾರ್ಯಕ್ರಮ (Music Program) ನಡೆಯಲಿದೆ.
ವಿದುಷಿ ಗೀತಾ ಆರ್. ಭಟ್ ಅವರಿಂದ ವೀಣಾ ವಾದನ
ಅ.15ರಂದು ಗುರುವಾರ ಸಂಜೆ 5.15ಕ್ಕೆ ಖ್ಯಾತ ವಿದುಷಿ ಗೀತಾ ಆರ್. ಭಟ್ ಅವರು ವೀಣಾ ವಾದನ ಪ್ರಸ್ತುತಪಡಿಸಲಿದ್ದಾರೆ. ಸಂಗೀತಾಸಕ್ತರಿಗೆ ಶಾಸ್ತ್ರೀಯ ವೀಣಾ ವಾದನವನ್ನು ಆಸ್ವಾದಿಸುವ ಅವಕಾಶ ಕಲ್ಪಿಸಲಾಗಿದೆ.
Also Read>> ಶಿವಮೊಗ್ಗ | ಮುಂದಿನ ವರ್ಷ ಅದ್ದೂರಿ ಸಾಹಿತ್ಯ ಸಮ್ಮೇಳನ : ಶಾಸಕ ಚನ್ನಬಸಪ್ಪ
ಕಾರ್ಯಕ್ರಮದಲ್ಲಿ ಪ್ರಜ್ವಲ್ ಭಾರಧ್ವಾಜ್ ಅವರು ಮೃದಂಗದಲ್ಲಿ ಹಾಗೂ ಹರಿಶ್ಚಂದ್ರ ಅವರು ಖಂಜಿರದಲ್ಲಿ ಸಹವಾದ್ಯ ನೀಡಲಿದ್ದಾರೆ.
Bengaluru: ಸಂಗೀತಾಸಕ್ತರಿಗೆ ಆಹ್ವಾನ
ಕಾರ್ಯಕ್ರಮ ನಡೆಯುವ ಸ್ಥಳ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ,
ಜಯನಗರ 5ನೇ ಬಡಾವಣೆ, ಬೆಂಗಳೂರು–41.
ಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೀಣಾ ವಾದನವನ್ನು ಆನಂದಿಸುವಂತೆ ನಂದಕಿಶೋರಾಚಾರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















