No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದಿ ಕ್ಲೈಮೇಟ್ ಪ್ಲೆಡ್ಜ್ ನಿಂದ ಸಿ40 ಸಿಟೀಸ್ ಸಹಭಾಗಿತ್ವದಲ್ಲಿ ಭಾರತದ ಸರಕು ಸಾಗಣೆ ಹೆದ್ದಾರಿಗಳ ವಿದ್ಯುದ್ದೀಕರಣಕ್ಕೆ ಬ್ಲೂಪ್ರಿಂಟ್ ಬಿಡುಗಡೆ

kalpa News by kalpa News
May 15, 2026
in Special Articles
0
ದಿ ಕ್ಲೈಮೇಟ್ ಪ್ಲೆಡ್ಜ್ ನಿಂದ ಸಿ40 ಸಿಟೀಸ್ ಸಹಭಾಗಿತ್ವದಲ್ಲಿ ಭಾರತದ ಸರಕು ಸಾಗಣೆ ಹೆದ್ದಾರಿಗಳ ವಿದ್ಯುದ್ದೀಕರಣಕ್ಕೆ ಬ್ಲೂಪ್ರಿಂಟ್ ಬಿಡುಗಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

  • ಭಾರೀ ಕೈಗಾರಿಕೆಗಳ ಸಚಿವಾಲಯವು ಗುರುತಿಸಿರುವ 20 ಆದ್ಯತೆಯ ಹೆದ್ದಾರಿಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಈ ರಾಷ್ಟ್ರೀಯ ಇವಿ ಹೆದ್ದಾರಿ ಮಾರ್ಗದರ್ಶಿ ಚೌಕಟ್ಟು ಅಥವಾ ಬ್ಲೂಪ್ರಿಂಟ್, ಸರಕು ಸಾಗಣೆಯನ್ನು ಡೀಸೆಲ್‌ ನಿಂದ ಶೂನ್ಯ-ಹೊಗೆ ಹೊರಸೂಸುವ ಟ್ರಕ್‌ ಗಳಿಗೆ ಪರಿವರ್ತಿಸಲು ಭಾರತದ ಮೊದಲ ಸಾಕ್ಷ್ಯ ಆಧಾರಿತ ಮಾರ್ಗಸೂಚಿಯಾಗಿದೆ.
  • ಈ ಚೌಕಟ್ಟು ನೈಜ ಸಮಯದ ಪ್ರಾಯೋಗಿಕ ಯೋಜನೆಗಳ ಒಳನೋಟಗಳನ್ನು ಒಳಗೊಂಡಿದೆ. ಇದರಲ್ಲಿ ಸುವರ್ಣ ಚತುಷ್ಪಥದ ಉದ್ದಕ್ಕೂ 6,500 ಕಿ.ಮೀ ಕ್ರಮಿಸಿದ ಎಲೆಕ್ಟ್ರಿಕ್ ಟ್ರಕ್ ಸಂಚಾರದ ಅನುಭವವೂ ಸೇರಿದೆ. ಇದು 2035ರ ವೇಳೆಗೆ ಭಾರತದ ಹೆದ್ದಾರಿಗಳನ್ನು ಇವಿ-ಸಿದ್ಧಗೊಳಿಸುವ ನಿಖರ ಯೋಜನೆಯನ್ನು ರೂಪಿಸಿದೆ.

ಅಮೆಜಾನ್ Amazon ಸಹಯೋಗದಲ್ಲಿ ಸ್ಥಾಪಿತಗೊಂಡಿರುವ ಸಂಸ್ಥೆಯಾದ ದಿ ಕ್ಲೈಮೇಟ್ ಪ್ಲೆಡ್ಜ್ (ಟಿಸಿಪಿ), ಹವಾಮಾನ ಬದಲಾವಣೆ ತಡೆಗೆ ಕೆಲಸ ಮಾಡುವ ವಿಶ್ವದಾದ್ಯಂತದ ಸುಮಾರು 100 ನಗರಗಳ ಜಾಲವಾಗಿರುವ ಸಿ40 ಸಿಟೀಸ್ ಸಹಯೋಗದೊಂದಿಗೆ ಸರಕು ಸಾಗಣೆಯನ್ನು ಡೀಸೆಲ್‌ನಿಂದ ಶೂನ್ಯ-ಹೊಗೆ ಹೊರಸೂಸುವ ಬ್ಯಾಟರಿ ಎಲೆಕ್ಟ್ರಿಕ್ ಟ್ರಕ್‌ ಗಳಿಗೆ (ಬಿಇಟಿ) ಪರಿವರ್ತಿಸುವ ಉದ್ದೇಶದಿಂದ ಭಾರತದ ಮೊದಲ ಸಾಕ್ಷ್ಯ ಆಧಾರಿತ ಮಾರ್ಗಸೂಚಿಯನ್ನು ಇಂದು ಪ್ರಕಟಿಸಿದೆ.

ಈ ರಾಷ್ಟ್ರೀಯ ಇವಿ ಹೆದ್ದಾರಿ ಮಾರ್ಗದರ್ಶಿ ಚೌಕಟ್ಟು, ಭಾರತದ ಅತ್ಯಂತ ಜನನಿಬಿಡ ಸರಕು ಸಾಗಣೆ ಮಾರ್ಗಗಳನ್ನು 2027ರ ವೇಳೆಗೆ ಹಂತ-ಹಂತವಾಗಿ ವಿದ್ಯುದ್ದೀಕರಣಗೊಳಿಸಲು ಶಿಫಾರಸು ಮಾಡುತ್ತದೆ. ಭಾರೀ ಕೈಗಾರಿಕೆಗಳ ಸಚಿವಾಲಯವು ಗುರುತಿಸಿರುವ 20 ಆದ್ಯತೆಯ ಹೆದ್ದಾರಿಗಳಿಂದ ಈ ಕಾರ್ಯ ಆರಂಭವಾಗಲಿದ್ದು, ನಂತರ ಕೈಗಾರಿಕಾ ಕೇಂದ್ರಗಳು ಮತ್ತು ಬಂದರುಗಳಿಗೆ ವಿಸ್ತರಣೆಗೊಳ್ಳಲಿದೆ. ಅಂತಿಮವಾಗಿ 2035ರ ವೇಳೆಗೆ ದೇಶಾದ್ಯಂತ ಸರಾಗವಾದ, ಇವಿ-ಸಿದ್ಧ ರಾಷ್ಟ್ರೀಯ ಸರಕು ಸಾಗಣೆ ಜಾಲವನ್ನು ನಿರ್ಮಿಸುವ ಗುರಿಯನ್ನು ಈ ಚೌಕಟ್ಟು ಹೊಂದಿದೆ.
ಈ ಮಾರ್ಗದರ್ಶಿ ಚೌಕಟ್ಟು ಏಕೆ ಮುಖ್ಯ?

ಭಾರತದಲ್ಲಿ ಸರಕು ಸಾಗಣೆಯ ಬೇಡಿಕೆಯು ಮುಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಲಿದ್ದು, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಅಗತ್ಯತೆ ಇಂದು ಹೆಚ್ಚಿದೆ. ಪ್ರಸ್ತುತ ದೇಶದ ಒಟ್ಟು ಸರಕು ಸಾಗಣೆಯಲ್ಲಿ ರಸ್ತೆ ಸಾರಿಗೆಯ ಪಾಲು ಸುಮಾರು 70% ರಷ್ಟಿದೆ. ರಸ್ತೆಯಲ್ಲಿ ಸಂಚರಿಸುವ ಒಟ್ಟು ವಾಹನಗಳಲ್ಲಿ ಮಧ್ಯಮ ಮತ್ತು ಭಾರಿ ಗಾತ್ರದ ಟ್ರಕ್‌ ಗಳ ಸಂಖ್ಯೆ ಕೇವಲ 3% ರಷ್ಟಿದ್ದರೂ, ಅವು ಹೊರಸೂಸುವ ಒಟ್ಟು ಮಾಲಿನ್ಯಕಾರಕ ಕಣಗಳ ಪ್ರಮಾಣ ಬರೋಬ್ಬರಿ 53% ರಷ್ಟಿದೆ. 2050ರ ವೇಳೆಗೆ ಸರಕು ಸಾಗಣೆಯ ಬೇಡಿಕೆಯು ನಾಲ್ಕು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಮಾಲಿನ್ಯ ತಗ್ಗಿಸಲು ಎಲೆಕ್ಟ್ರಿಕ್ ಟ್ರಕ್‌ ಗಳ ಬಳಕೆ ಅನಿವಾರ್ಯವಾಗಿದೆ. ಭಾರತವು 2070ರ ವೇಳೆಗೆ ನೆಟ್-ಜೀರೋ (ಶೂನ್ಯ ಮಾಲಿನ್ಯ) ಗುರಿ ತಲುಪಲು ಈ ಯೋಜನೆಯು ಪ್ರಾಯೋಗಿಕ ಮಾರ್ಗಸೂಚಿಯನ್ನು ಒದಗಿಸುತ್ತದೆ.

ಈ ಕುರಿತು ನೀತಿ ಆಯೋಗದ ಗೌರವಾನ್ವಿತ ಫೆಲೋ ಆದ ಡಾ. ಓ.ಪಿ. ಅಗರ್ವಾಲ್ ಅವರು ಮಾತನಾಡಿ , “ಭಾರತವು ಪರಿಸರ ಸ್ನೇಹಿ ಸರಕು ಸಾಗಣೆ ಪ್ರಕ್ರಿಯೆಗೆ ಬದಲಾಗಲು ಸರ್ಕಾರ ಮತ್ತು ಕೈಗಾರಿಕಾ ವಲಯದ ನಡುವೆ ಬಲವಾದ ಸಹಯೋಗದ ಅಗತ್ಯವಿದೆ. ಇಂದು ಲೇನ್‌ ಶಿಫ್ಟ್ ಕಾರ್ಯಕ್ರಮದ ಅಡಿಯಲ್ಲಿ ಬಿಡುಗಡೆ ಮಾಡಲಾದ ಇವಿ ಹೆದ್ದಾರಿ ಮಾರ್ಗದರ್ಶಿ ಚೌಕಟ್ಟು ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ದೇಶದಲ್ಲಿ ಎಲೆಕ್ಟ್ರಿಕ್ ಟ್ರಕ್ ಸಂಚಾರಕ್ಕೆ ದೊಡ್ಡ ಮಟ್ಟದ ದಾರಿಯನ್ನು ಸುಗಮಗೊಳಿಸುತ್ತದೆ. ನೀತಿ ಆಯೋಗವು ಈಗಾಗಲೇ ಇ- ಫಾಸ್ಟ್ ಇಂಡಿಯಾ ವೇದಿಕೆಯ ಮೂಲಕ ಲಾಜಿಸ್ಟಿಕ್ಸ್ ಆಪರೇಟರ್‌ ಗಳು, ವಾಹನ ತಯಾರಕರು, ಇಂಧನ ಪೂರೈಕೆದಾರರು ಮತ್ತು ಹಣಕಾಸು ಸಂಸ್ಥೆಗಳನ್ನು ಒಂದೇ ಸೂರಿನಡಿ ತರುತ್ತಿದೆ. ಈ ಪ್ರಯತ್ನಗಳ ಮುಂದುವರಿದ ಭಾಗವಾಗಿ ಸಿ40 ಸಿಟೀಸ್, ದಿ ಕ್ಲೈಮೇಟ್ ಪ್ಲೆಡ್ಜ್ ಹಾಗೂ ಅಮೆಜಾನ್ ಮತ್ತು ಅಶೋಕ್ ಲೇಲ್ಯಾಂಡ್‌ ನಂತಹ ಖಾಸಗಿ ವಲಯದ ಸಂಸ್ಥೆಗಳ ಸಹಭಾಗಿತ್ವವು, ಎಲೆಕ್ಟ್ರಿಕ್ ಸರಕು ಸಾಗಣೆಯನ್ನು ಪ್ರಾಯೋಗಿಕ ಹಂತದಿಂದ ಬೃಹತ್ ಮಟ್ಟದ ಬಳಕೆಗೆ ತರಲು ಸಹಕಾರಿಯಾಗಲಿದೆ,” ಎಂದು ಹೇಳಿದರು.

Also read: ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

ಈ ಕುರಿತು ಅಮೆಜಾನ್ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷರಾದ ಅಭಿನವ್ ಸಿಂಗ್ ಅವರು ಮಾತನಾಡಿ , “ನಮ್ಮ ಕಾರ್ಯಾಚರಣೆಗಳನ್ನು ಹೆಚ್ಚು ಸುಸ್ಥಿರವಾಗಿಸಲು ನಾವು ನಿರಂತರವಾಗಿ ಹೂಡಿಕೆ ಮಾಡುತ್ತಿದ್ದೇವೆ ಮತ್ತು ನಮ್ಮ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ವಿದ್ಯುದ್ದೀಕರಣಗೊಳಿಸುವುದು ಈ ಪ್ರಯತ್ನದ ಪ್ರಮುಖ ಭಾಗವಾಗಿದೆ. ದಿ ಕ್ಲೈಮೇಟ್ ಪ್ಲೆಡ್ಜ್ ಮೂಲಕ, ಭಾರತದಲ್ಲಿ ಎಲೆಕ್ಟ್ರಿಕ್ ಸರಕು ಸಾಗಣೆ ಪರಿಹಾರಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ನಾವು ಸಂಬಂಧಪಟ್ಟ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯ ಸಂಶೋಧನೆಗಳು ಮತ್ತು ಮಾರ್ಗದರ್ಶಿ ಚೌಕಟ್ಟು ಆಶಾದಾಯಕವಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಸರ್ಕಾರ ಮತ್ತು ಕೈಗಾರಿಕಾ ವಲಯದ ನಡುವಿನ ನಿರಂತರ ಸಹಯೋಗದ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುತ್ತವೆ,” ಎಂದು ಹೇಳಿದರು.

ಪೈಲೆಟ್ ಪ್ರಾಜೆಕ್ಟ್ ನಿಂದ ಪಾಲಿಸಿವರೆಗೆ

ಈ ಮಾರ್ಗದರ್ಶಿ ಚೌಕಟ್ಟನ್ನು ಸಿ40 ಸಿಟೀಸ್ ಮತ್ತು ದಿ ಕ್ಲೈಮೇಟ್ ಪ್ಲೆಡ್ಜ್ ನೇತೃತ್ವದ ಲೇನ್‌ ಶಿಫ್ಟ್ ಪ್ರಾಯೋಗಿಕ ಯೋಜನೆಯ ಒಳನೋಟಗಳಿಂದ ರೂಪಿಸಲಾಗಿದೆ. ಈ ಯೋಜನೆಯು ಟ್ರಕ್ ತಯಾರಕರು, ವಾಹನ ಆಪರೇಟರ್‌ ಗಳು, ಲಾಜಿಸ್ಟಿಕ್ಸ್ ಪೂರೈಕೆದಾರರು ಮತ್ತು ಹಣಕಾಸು ಸಂಸ್ಥೆಗಳನ್ನು ಒಟ್ಟುಗೂಡಿಸಿ ಎಲೆಕ್ಟ್ರಿಕ್ ಸರಕು ಸಾಗಣೆಯ ಸಾಮರ್ಥ್ಯವನ್ನು ಪರೀಕ್ಷಿಸಿದೆ.

ಯೋಜನೆಯ ಭಾಗವಾಗಿ ಎಲೆಕ್ಟ್ರಿಕ್ ಟ್ರಕ್‌ಗಳು ಬೆಂಗಳೂರು-ಚೆನ್ನೈ ಕಾರಿಡಾರ್‌ ನಲ್ಲಿ ವಿವಿಧ ವಲಯಗಳ ಅಡಿಯಲ್ಲಿ 2,00,000 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸಿ, 600ಕ್ಕೂ ಹೆಚ್ಚು ಟ್ರಿಪ್‌ ಗಳನ್ನು ಪೂರ್ಣಗೊಳಿಸಿವೆ. ಇದರಿಂದ ವಾಹನಗಳ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ವೆಚ್ಚದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಇದರ ವ್ಯಾಪ್ತಿಯನ್ನು ಪರೀಕ್ಷಿಸಲು ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಹೆದ್ದಾರಿಯಲ್ಲಿ 6,500 ಕಿ.ಮೀ ಉದ್ದದ ಪ್ರಾಯೋಗಿಕ ಚಾಲನೆಯನ್ನು ಕೂಡ ಯಶಸ್ವಿಯಾಗಿ ನಡೆಸಲಾಯಿತು.

ಲೇನ್‌ ಶಿಫ್ಟ್ ಯೋಜನೆಯು ಎಲೆಕ್ಟ್ರಿಕ್ ಸರಕು ಸಾಗಣೆಯು ಎಲ್ಲಾ ಹಂತದ ಬಳಕೆಗೆ ಸೂಕ್ತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ವಿಶೇಷವಾಗಿ ದಿನಕ್ಕೆ 400 ಕಿ.ಮೀ ಗಿಂತ ಹೆಚ್ಚು ಸಂಚರಿಸುವ ವಾಹನಗಳಿಗೆ ಇದು ಆರ್ಥಿಕವಾಗಿ ಲಾಭದಾಯಕ ಎಂಬುದು ದೃಢಪಟ್ಟಿದೆ. ಈ ಯೋಜನೆಯ ಪ್ರಭಾವದಿಂದ ಎಲೆಕ್ಟ್ರಿಕ್ ಟ್ರಕ್‌ ಗಳ ಬೇಡಿಕೆಯಲ್ಲಿ 4.2 ಪಟ್ಟು ಹೆಚ್ಚಳ ಕಂಡುಬಂದಿದೆ ಮತ್ತು ಹಲವು ದೀರ್ಘಾವಧಿಯ ವಾಣಿಜ್ಯ ಒಪ್ಪಂದಗಳು ಏರ್ಪಟ್ಟಿವೆ. ಇದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳ ಮೇಲೆ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಈ ಕುರಿತು ಸಿ40 ಸಿಟೀಸ್ ಸಂಸ್ಥೆಯ ದಕ್ಷಿಣ ಮತ್ತು ಪಶ್ಚಿಮ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ನೈಮ್ ಕೆರುವಾಲಾ ಅವರು ಮಾತನಾಡಿ, “ಸರಕು ಸಾಗಣೆ ವಲಯವನ್ನು ಇಂಗಾಲ ಮುಕ್ತಗೊಳಿಸುವುದು ಕೇವಲ ಮುಂದಿನ ಗುರಿ ಮಾತ್ರವಲ್ಲ; ಇದು ದೇಶದ ಆರ್ಥಿಕತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂದಿನ ತುರ್ತು ಅಗತ್ಯವಾಗಿದೆ. ಶೂನ್ಯ-ಹೊಗೆ ಹೊರಸೂಸುವ ಟ್ರಕ್‌ ಗಳು ದೀರ್ಘಾವಧಿಯ ಮಾರ್ಗಗಳಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಗಬಲ್ಲವು, ಅದರಿಂದ ವೆಚ್ಚಗಳು ಕಡಿಮೆಯಾಗುತ್ತಿವೆ ಮತ್ತು ಸರಿಯಾದ ಪಾಲುದಾರರು ಕೈಜೋಡಿಸಿದರೆ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು ಎಂಬುದನ್ನು ಲೇನ್‌ ಶಿಫ್ಟ್ ತೋರಿಸಿಕೊಟ್ಟಿದೆ. ಭಾರತವು ಈ ಬದಲಾವಣೆಗೆ ಬೇಕಾದ ಬೃಹತ್ ಮಾರುಕಟ್ಟೆ, ಪೂರಕ ನೀತಿಗಳು ಮತ್ತು ಕೈಗಾರಿಕಾ ಆಸಕ್ತಿಯನ್ನು ಹೊಂದಿದೆ” ಎಂದು ಹೇಳಿದರು.

ಈ ಮಾರ್ಗದರ್ಶಿ ಚೌಕಟ್ಟು ಮೂಲಸೌಕರ್ಯ, ಬೇಡಿಕೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದೆ. ಇದರ ಸಂಪೂರ್ಣ ವರದಿಯು c40knowledgehub.org ನಲ್ಲಿ ಲಭ್ಯವಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: AmazonBengaloreKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಅಮೆಜಾನ್ಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಿಎಂ ಸುವೇಂಧು ಇನ್ ಆಕ್ಷನ್ | ಆರ್’ಜಿ ಕರ್ ರೇಪ್ & ಮರ್ಡರ್ ಕೇಸ್ | 3 IPS ಅಧಿಕಾರಿಗಳ ಸಸ್ಪೆಂಡ್

Next Post

PCCF Kumar Pushkar Warns Human Intolerance Fueling Biodiversity Crisis

kalpa News

kalpa News

Next Post
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL