ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಎರಡು ವರ್ಷಗಳ ನಂತರ ತಾಲೂಕು ನಗರಸಭೆಯ 35 ವಾರ್ಡ್‌ಗಳಿಗೆ ಏ.27ರಂದು ಚುನಾವಣೆ ನಡೆಯಲಿದೆ.
ಏ.8ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ.15 ಕೊನೆಯ ದಿನವಾಗಿದೆ. ಏ.16 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.19 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಏ.27ರಂದು ಮತದಾನ ನಡೆಯಲಿದ್ದು, ಏ.30ರಂದು ಮತ ಎಣಿಕೆ ನಡೆಯಲಿದ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ 7 ನಗರಸಭೆ, 3 ಪುರಸಭೆ ಹಾಗೂ 2 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಘೋಷಿಸಲಾಗಿದೆ.
ಮೀಸಲಾತಿ ಗೊಂದಲದಿಂದ ಚುನಾವಣೆ ವಿಳಂಬ:
ಭದ್ರಾವತಿ ನಗರಸಭೆ 35 ವಾರ್ಡ್‌ಗಳ ಮೀಸಲಾತಿ ಸಂಬಂಧ ಹಲವು ಬಾರಿ ತಕರಾರು ಅರ್ಜಿಗಳು ಸಲ್ಲಿಕೆಯಾಗಿ, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ವಿಚಾರಣೆ ನಡೆದು ಅಂತಿಮ ತೀರ್ಪು ಪ್ರಕಟವಾದ ನಂತರ, ಸರ್ಕಾರ ಪುನಃ ಹೊಸದಾಗಿ ಮಿಸಲಾತಿ ನಿಗದಿಪಡಿಸಿದ ಹಿನ್ನಲೆಯಲ್ಲಿ ಚುನಾವಣೆ ಸುಮಾರು 2 ವರ್ಷ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post