ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಗೌರಮ್ಮ ಮಹದೇವ್ ರವರು ಅವಿರೋಧವಾಗಿ ಆಯ್ಕೆಯಾದರು. ನಿಖಟ ಪೂರ್ವ ಅಧ್ಯಕ್ಷರಾದ ಪಾರ್ವತಿ ಬಾಯಿ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರುದ್ರೇಶ್ ಆರ್ ಎನ್, ಸದಸ್ಯರಾದ ಜಯಣ್ಣ, ಕುಬೇರ್ ನಾಯ್ಕ, ವಿಶ್ವನಾಥ, ಸ್ವಾಮೀನಾಥ್, ನಾಗರಾಜ್ ಗೌಡ್ರು, ಮಲಕ್ ಬಿ ವೀರಪ್ಪನ್, ಪಾರ್ವತಿ ಬಾಯಿ ನಂಜನಾಯ್ಕ, ನೀಲಾ ಬಾಯಿ ಚಂದ್ರನಾಯ್ಕ, ಉಮಾದೇವಿ ತಿಪ್ಪೇಶ್, ಸಿದ್ದಮ್ಮ ನಾಗೇಶ್, ಭಾಗ್ಯ ರಾಮಚಂದ್ರನಾಯ್ಕ, ವಿ ಎಸ್ ಎಸ್ ಎನ್ ಅಧ್ಯಕ್ಷರಾದ ಎನ್ ಎಚ್ ಮಹೇಶಣ್ಣ, ನಗರಸಭಾ ಸದಸ್ಯರಾದ ಸುದೀಪ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಮಣಿ ಶೇಖರ್, ಮಲ್ಲೇಶಣ್ಣ, ಕೂಡ್ಲಿಗೆರೆ, ಕಲ್ಪನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ತಾಲ್ಲೂಕು ಕಾರ್ಯನಿರ್ವಹಣಾ ಅಧಿಕಾರಿ ರಮೇಶ್ ರವರು ಚುನಾವಣೆ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post