ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ನವದೆಹಲಿ |
ದೇಶದ ಹೆಮ್ಮೆಯ ಭದ್ರಾವತಿಯಲ್ಲಿನ ವಿಐಎಸ್’ಎಲ್ ಕಾರ್ಖಾನೆಯನ್ನು #VISL Factory ಪುನರುಜ್ಜೀವನಗೊಳಿಸಲು 10,000 ರಿಂದ 15,000 ಕೋಟಿ ರೂ.ಗಳ ಬಂಡವಾಳ ಹೂಡಿಕೆ #Capital Invest ಮಾಡಲು ಚಿಂತನೆ ನಡೆದಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ #Union Minister H D Kumaraswamy ತಿಳಿಸಿದ್ದಾರೆ.
ವಿಐಎಸ್’ಎಲ್ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ #B Y Raghavendra ಅವರನ್ನು ಭೇಟಿಯಾದ ಬಿಜೆಪಿ ಪ್ರಮುಖ ಮಂಗೋಟೆ ರುದ್ರೇಶ್, ಕಾರ್ಮಿಕರ ಸಂಘದ ಜಗದೀಶ್ ಸೇರಿದಂತೆ ಹಲವರ ನಿಯೋಗದೊಂದಿಗೆ ಅವರು ಚರ್ಚೆ ನಡೆಸಿ, ಮಾತನಾಡಿದರು.
Also read: ಜೈಲು ಪಾಲಾದ ನಟ ಅಲ್ಲು ಅರ್ಜುನ್ | ಎಷ್ಟು ದಿನ ನ್ಯಾಯಾಂಗ ಬಂಧನ?
ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಕೈಬಿಟ್ಟು ಅಗತ್ಯವಿರುವ ಸೂಕ್ತ ಬಂಡವಾಳವನ್ನು ತೊಡಗಿಸಿ, ಪುನರಜ್ಜೀವನಗೊಳಿಸಬೇಕು ಎಂದು ನಿಯೋಗ ಸಚಿವರಿಗೆ ಮನವಿ ಮಾಡಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ಕುಮಾರಸ್ವಾಮಿ ಹಾಗೂ ರಾಘವೇಂದ್ರ ಅವರುಗಳು, ವಿಐಎಸ್’ಎಲ್ ಕಾರ್ಖಾನೆಗೆ ಸುಮಾರು 10ರಿಂದ 15 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಚಿಂತನೆ ನಡದಿದೆ ಎಂದಿದ್ದಾರೆ.
ಅಲ್ಲದೇ, ಹೂಡಿಕೆ ಕಾರ್ಯ ಸಾಧ್ಯ ಮಾಡಲು ವರದಿ ತಯಾರಿಸಲು ಕೋಲ್ಕತ್ತಾ ಮೂಲದ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಭದ್ರಾವತಿಯ ಕಾರ್ಖಾನೆಗೆ ಕಳುಹಿಸಿ ಕೊಡಲಾಗುವುದು. ಒಂದು ವಾರದೊಳಗೆ ವರದಿ ಪಡೆದು ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಮಂಡಿಸಲಾಗುವುದು ಎಂದು ತಿಳಿಸಿದರು.
ಸಂಸದರು ಕಾರ್ಖಾನೆಗೆ ಬಂಡವಾಳ ಹೂಡಿಕೆ ವಿಚಾರ ಸಂಸತ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿ, ಸರ್ಕಾರದ ಗಮನ ಸೆಳೆದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೋರುತ್ತೇನೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post