ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇದೇ ತಿಂಗಳು ನಡೆಯಲಿರುವ ಭದ್ರಾವತಿ ನಗರಸಭೆ ಚುನಾವಣೆಗೆ ಬಿಜೆಪಿ ಮೊದಲ ಹಂತದಲ್ಲಿ 21 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಮಾತನಾಡಿದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬೂತ್ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಮಾಡಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಸಾಧನೆ, ಭದ್ರಾವತಿಯಲ್ಲಿ ಯುವಕರ ಬದಲಾವಣೆಯ ಅಪೇಕ್ಷೆಯಿಂದಾಗಿ ಈ ಬಾರಿ ಬಿಜೆಪಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಈ ಬಾರಿ ಭದ್ರಾವತಿ ನಗರಸಭೆಯಲ್ಲಿ ಆಡಳಿತ ಹಿಡಿಯುವುದೇ ಬಿಜೆಪಿಯ ಗುರಿಯಾಗಿದೆ. ಜೈಶ್ರೀರಾಮ್ ಘೋಷಣೆ ನಮಗೆ ಯಾವಾಗಲೂ ಶ್ರೀರಕ್ಷೆಯಾಗಲಿದೆ ಎಂದರು.
ಯಾರೆಲ್ಲಾ ಕಣದಲ್ಲಿದ್ದಾರೆ?
2 ನೆಯ ವಾರ್ಡ್ | ಲೋಯರ್ ಹುತ್ತಾ | ಲತಾ ಪ್ರಭಾಕರ್ |
3 ನೆಯ ವಾರ್ಡ್ | ಬಿಎಚ್ ರಸ್ತೆ ಎಡ-ಬಲ, ಚಾಮೇಗೌಡ ಏರಿಯಾ | ನಕುಲ್ |
4 ನೆಯ ವಾರ್ಡ್ | ಕನಕ ಮಂಟಪ ಪ್ರದೇಶ | ಅನುಪಮಾ ಚನ್ನೇಶ್ |
6 ನೆಯ ವಾರ್ಡ್ | ಸಿದ್ಧಾರೂಢ ನಗರ | ಸತೀಶ್ |
10 ನೆಯ ವಾರ್ಡ್ | ಹನುಮಂತನಗರ, ಅಶ್ವತ್ಥ್ ನಗರ | ಅನಿತಾ ಮಲ್ಲೇಶ್ |
11 ನೆಯ ವಾರ್ಡ್ | ಸುಭಾಷ್ ನಗರ | ಜಿ. ಧರ್ಮಪ್ರಸಾದ್ |
12 ನೆಯ ವಾರ್ಡ್ | ಅಣ್ಣಾ ನಗರ | ಎಂ. ಪ್ರಭಾಕರ್ |
14 ನೆಯ ವಾರ್ಡ್ | ಹೊಸ ಭೋವಿ ಕಾಲೋನಿ | ಜಿ. ಅನಂದ ಕುಮಾರ್ |
15 ನೆಯ ವಾರ್ಡ್ | ಹೊಸಮನೆ, ಅಶ್ವತ್ಥ್ ನಗರ | ಕಲಾವತಿ ನಾರಾಯಣಪ್ಪ |
18 ನೆಯ ವಾರ್ಡ್ | ಎಂಎಂ ಕಾಂಪೌಂಡ್ | ಸುನೀಲ್ |
19 ನೆಯ ವಾರ್ಡ್ | ಎಂಪಿಎಂ ಆಸ್ಪತ್ರೆ | ನಾಗಮಣಿ |
20 ನೆಯ ವಾರ್ಡ್ | ಸುರಗಿ ತೋಪು | ರೀಟಾ ಪ್ರಕಾಶ್ |
23 ನೆಯ ವಾರ್ಡ್ | ತಿಮ್ಲಾಪುರ-ಡಿಜಿ ಹಳ್ಳಿ | ಅನ್ನಪೂರ್ಣ |
24 ನೆಯ ವಾರ್ಡ್ | ಬೊಮ್ಮನಕಟ್ಟೆ | ಪಿ. ಗಣೇಶ್ ರಾವ್ |
25 ನೆಯ ವಾರ್ಡ್ | ಹುಡ್ಕೋ-ಹೊಸ ಬುಳ್ಳಾಪುರ | ಚಂದ್ರು |
26 ನೆಯ ವಾರ್ಡ್ | ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ | ನಾಗಲಕ್ಷ್ಮೀ |
27 ನೆಯ ವಾರ್ಡ್ | ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್ | ಸುಶ್ಮಿತಾ |
28 ನೆಯ ವಾರ್ಡ್ | ಗಣೇಶ ಕಾಲೋನಿ | ಶಿವಕುಮಾರ್ |
30 ನೆಯ ವಾರ್ಡ್ | ಹೊಸ ಸಿದ್ದಾಪುರ | ರಾಮಕೃಷ್ಣ |
31 ನೆಯ ವಾರ್ಡ್ | ಜಿಂಕ್ ಲೈನ್ | ಮಂಜುಳಾ |
32 ನೆಯ ವಾರ್ಡ್ | ಜನ್ನಾಪುರ | ಸರಸ್ವತಿ ಚಂದ್ರಪ್ಪ |
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post