ಕಲ್ಪ ಮೀಡಿಯಾ ಹೌಸ್ | ಗೋಣಿಬೀಡು(ಭದ್ರಾವತಿ) |
ಭದ್ರಾವತಿಯ ಸರ್ಕಾರಿ ಬಸ್ ನಿಲ್ಧಾಣಕ್ಕೆ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಹೆಸರಿಡಲು ನವೆಂಬರ್ 1ರವರೆಗೂ ಗಡುವು ನೀಡುತ್ತಿದ್ದೇವೆ ಎಂದು ವೈಎಸ್‌ವಿ ದತ್ತಾ ಹೇಳಿದ್ದಾರೆ.
ಗೋಣಿಬೀಡಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದಲೂ ಈ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರಿಡುವಂತೆ ಒತ್ತಾಯಿಸಲಾಗುತ್ತಿದೆ. ಹಿಂದೆ ಈ ಬಗ್ಗೆ ಪ್ರತಿಭಟನೆ ನಡೆಸಿದ ವೇಳೆ ಮನವಿ ಸ್ವೀಕರಿಸಿದ್ದ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದರು.
ಡಿಸಿ ಅವರು ಅದನ್ನು ವಿಧಾನಸೌದಕ್ಕೆ ಕಳುಹಿಸಿದ್ದಾರೆ. ಆದರೆ, ಅಲ್ಲಿರುವವರಿಗೆ ಇದನ್ನು ಜಾರಿಗೊಳಿಸಲು ಇನ್ನೂ ಸಮಯ ಬಂದಿಲ್ಲ. ಹೀಗಾಗಿ ಈ ವಿಚಾರದಲ್ಲಿ ಬೃಹತ್ ಹೋರಾಟ ನಡೆಯಬೇಕಿದ್ದು, ಇದರ ನೇತೃತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಇಂದು ಇಲ್ಲಿ ಸೇರಿರುವವರೆಲ್ಲ ವಿಧಾನಸೌಧಕ್ಕೆ ಬನ್ನಿ ಅಲ್ಲಿ ಹೋರಾಟ ಮಾಡಿದರೆ ಇದರಲ್ಲಿ ಯಶಸ್ಸು ಸಾಧ್ಯ. ನವೆಂಬರ್ 1ರೊಳಗಾಗಿ ಭದ್ರಾವತಿ ಸರ್ಕಾರಿ ಬಸ್ ನಿಲ್ದಾಣದ ಹೆಸರು ಬದಲಾಗಬೇಕು ಇದಕ್ಕಾಗಿ ಅಕ್ಟೋಬರ್ ತಿಂಗಳಿನಿಂದಲೇ ಹೋರಾಟ ಆರಂಭಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post