ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬೀದಿ ಬದಿಯಲ್ಲಿರುವ ಗೋವುಗಳಿಗೆ ಆಗುವ ರಸ್ತೆ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವುಗಳ ಕೊಂಬುಗಳಿಗೆ ಭದ್ರಾವತಿಯ ಜೀವಾಮೃತ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ರೇಡಿಯಮ್ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಮಾಡಲಾಗಿದೆ.
ರಸ್ತೆಯಲ್ಲಿ ಬಿಡಾಡಿ ದನಗಳಲ್ಲಿ ಬಹಳಷ್ಟು ವಾಹನ ಅಪಘಾತಕ್ಕೀಡಾಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ರೇಡಿಯಮ್ ಸ್ಟಿಕ್ಕರ್ ಮೇಲೆ ರಾತ್ರಿ ದೀಪದ ಬೆಳಕು ಬಿದ್ದಾಗ ಅದು ಸ್ಪಷ್ಟವಾಗಿ ಗೋಚರಿಸುವುದರಿಂದ ಅಪಘಾತದ ಸಾಧ್ಯತೆಯನ್ನು ತಪ್ಪಿಸಬಹುದಾಗಿದೆ. ಹೀಗಾಗಿ, ನಗರದಲ್ಲಿರುವ ಬೀದಿ ಬದಿ ಗೋವುಗಳ ಕೊಂಬುಗಳಿಗೆ ಜೀವಾಮೃತ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ರೇಡಿಯಮ್ ಸ್ಟಿಕ್ಕರ್ ಹಚ್ಚುವ ಕಾರ್ಯ ನಡೆಸಲಾಗಿದೆ.
ನಿನ್ನೆ ರಾತ್ರಿ ವೇಳೆ ಬಸವೇಶ್ವರ ಸರ್ಕಲ್, ಚನ್ನಗಿರಿ ರಸ್ತೆ, ಬಿಎಚ್ ರಸ್ತೆ, ಬೈಪಾಸ್ ರಸ್ತೆ ಸೇರಿದಂತೆ ಹಲವು ಕಡೆ ರೇಡಿಯಮ್ ಸ್ಟಿಕ್ಕರ್ ಹಚ್ಚುವ ಕಾರ್ಯ ಮಾಡಲಾಗಿದೆ.
ಗೋರಕ್ಷಣೆಯ ಭಾಗವಾಗಿ ಇಂತಹ ಒಂದು ಪ್ರಯತ್ನವನ್ನು ಮಾಡಿರುವ ಜೀವಾಮೃತ ಚಾರಿಟೆಬಲ್ ಸೇವಾ ಟ್ರಸ್ಟ್ ಸದಸ್ಯರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















