ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ ಕಾಮಗಾರಿಯ ಪ್ರಯುಕ್ತ ಮೈಸೂರಿನಿಂದ ಹೊರಡುವ ಎರಡು ರೈಲುಗಳ ಸಂಚಾರವನ್ನು ಕೆಲವು ದಿನಾಂಕಗಳಂದು ಭಾಗಷಃ ರದ್ದು ಮಾಡಲಾಗಿದೆ.
ಯಾವ ದಿನಗಳು ಭಾಗಷಃ ರದ್ದು?
#Mysore ಮೈಸೂರು-ಅರಸೀಕೆರೆ ಹಾಗೂ ಮೈಸೂರು-ಶಿವಮೊಗ್ಗ #Shivamogga ಎರಡೂ ರೈಲುಗಳು ಫೆಬ್ರವರಿ 11, 14, 28 ಹಾಗೂ ಮಾರ್ಚ್ 02, 05, 07, 21 ಮತ್ತು 24 ರಂದು ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ.
ಅರಸೀಕೆರೆಯಿಂದ ಹೊರಡುವ 56267 ಸಂಖ್ಯೆಯ ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲನ್ನು ಮೇಲ್ಕಂಡ ದಿನಗಳಂದು ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಮೈಸೂರಿನವರೆಗೆ ಸಂಚರಿಸುವ ಬದಲಾಗಿ ಬೆಳಗುಳ ನಿಲ್ದಾಣದ¯್ಲೆÃ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ರೈಲು ಮೇಲ್ಕಂಡ ದಿನಾಂಕಗಳಂದು ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
ಈ ರೈಲು ಮೈಸೂರು ನಿಲ್ದಾಣದ ಬದಲಾಗಿ ಬೆಳಗುಳ ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಶಿವಮೊಗ್ಗದತ್ತ ಪ್ರಯಾಣ ಆರಂಭಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















