ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಎಜುಕೇಶನ್ ಅಂಡ್ ವೆಲ್‌ಫೇರ್ ಫೌಂಡೇಶನ್ ವತಿಯಿಂದ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಿಗೆ ನೀಡಲಾಗುವ ಪ್ರತಿಷ್ಠಿತ ಪುಸ್ತಕ ಪ್ರಶಸ್ತಿಗಳಿಗಾಗಿ ಲೇಖಕರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.
Also read: Amrit Bharat Station | ಪುನರಾಭಿವೃದ್ಧಿಗೊಂಡ ಬಾದಾಮಿ ರೈಲು ನಿಲ್ದಾಣ ಲೋಕಾರ್ಪಣೆ
ಈ ಕುರಿತು ಸಂಸ್ಥೆಯ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಕಟಣೆ ನೀಡಿ, ಸಾಹಿತ್ಯ ಕ್ಷೇತ್ರದ ಮೂರು ವಿಭಿನ್ನ ಪ್ರಕಾರಗಳ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ಕೃತಿಗೆ ‘ಜಾನಪದ ಸಿರಿ ಪ್ರಶಸ್ತಿ’, ಮಹಿಳಾ ಲೇಖಕಿಯರು ರಚಿಸಿದ ಯಾವುದೇ ಸಾಹಿತ್ಯ ಕೃತಿಗೆ ‘ಅಕ್ಕ ಪ್ರಶಸ್ತಿ’, 18 ವರ್ಷದೊಳಗಿನ ಮಕ್ಕಳಿಂದ ರಚಿಸಲಾದ ಸಾಹಿತ್ಯ ಕೃತಿಗೆ ‘ಅರಳು ಮೊಗ್ಗು ಪ್ರಶಸ್ತಿ’ ನೀಡಲಾಗುತ್ತದೆ.
ಪ್ರತಿಯೊಂದು ಪ್ರಶಸ್ತಿಯು ₹25,000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ತಿಳಿಸಲಾಗಿದೆ.
ಈ ಪ್ರಶಸ್ತಿಗೆ ಜನವರಿ 2025ರಿಂದ ಡಿಸೆಂಬರ್ 2025ರ ಅವಧಿಯಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ (ಪ್ರಥಮ ಆವೃತ್ತಿ) ಕೃತಿಗಳು ಮಾತ್ರ ಅರ್ಹವಾಗಿರುತ್ತವೆ.

ಆಸಕ್ತ ಲೇಖಕರು ತಮ್ಮ ಕೃತಿಯ ಮೂರು ಪ್ರತಿಗಳನ್ನು ನವೆಂಬರ್ 5, 2026ರೊಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ:
Hubli | ವಿಳಾಸ
ಶ್ರೀ ಚಂದ್ರಶೇಖರ ವಸ್ತ್ರದ
‘ಬೆಳಗು’
ಆನಂದ ಆಶ್ರಮ ರಸ್ತೆ, ಪಂಚಾಕ್ಷರಿ ನಗರ, 5ನೇ ಕ್ರಾಸ್
ಗದಗ – 582101
ದೂರವಾಣಿ: 94486-77434
ಕನ್ನಡ ಸಾಹಿತ್ಯ ಕ್ಷೇತ್ರದ ಲೇಖಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







