ನವದೆಹಲಿ: ಎರಡನೆಯ ಬಾರಿ ಅಧಿಕಾರಕ್ಕೇರಿದ ನಂತರ ಶತ್ರುರಾಷ್ಟ್ರದ ವಿಚಾರದಲ್ಲಿ ಕಠಿಣ ನಿಲುವು ತಳೆಯಲು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಉಗ್ರರಿಗೆ ಹಣ ಪೋಷಣೆಯನ್ನು ಮುಂಬರುವ ಸೆಪ್ಟೆಂಬರ್ ಒಳಗಾಗಿ ನಿಲ್ಲಿಸಬೇಕು ಎಂದು ಡೆಡ್’ಲೈನ್ ವಿಧಿಸಿದೆ.
ಈ ಕುರಿತಂತೆ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್’ಎಟಿಎಫ್) ನೀಡಿರುವ ವರದಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, 2019 ರ ಜನವರಿ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಕ್ರಿಯಾ ಯೋಜನೆ ವಸ್ತುಗಳನ್ನು ಪೂರ್ಣಗೊಳಿಸಲು ವಿಫಲವಾದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಸಹಕಾರ ವಿಮರ್ಶೆ ಗುಂಪು (ಐಸಿಆರ್’ಜಿ) ಮೇಲ್ವಿಚಾರಣೆಗಾಗಿ ಪಾಕಿಸ್ತಾನವನ್ನು ತನ್ನ ಅನುಸರಣೆ ದಾಖಲೆಯಲ್ಲಿ (ಅಂದರೆ ಗ್ರೇ ಲಿಸ್ಟ್) ಇರಿಸಿಕೊಳ್ಳಲು ಎಫ್‌ಎಟಿಎಫ್ ನಿರ್ಧರಿಸಿದೆ ಎಂದಿದ್ದಾರೆ.
ಎಫ್‌ಎಟಿಎಫ್‌ನ ರಾಜಕೀಯ ಬದ್ಧತೆಗೆ ಅನುಗುಣವಾಗಿ ಸೆಪ್ಟೆಂಬರ್ 2019 ರೊಳಗೆ ಉಳಿದ ಸಮಯದೊಳಗೆ ಎಫ್‌ಎಟಿಎಫ್ ಕ್ರಿಯಾ ಯೋಜನೆಯನ್ನು ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಪಾಕಿಸ್ಥಾನ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದಕ್ಕೆ ಸಂಬಂಧಿಸಿದ ಜಾಗತಿಕ ಕಳವಳಗಳನ್ನು ಪರಿಹರಿಸಲು ವಿಶ್ವಾಸಾರ್ಹ, ಪರಿಶೀಲಿಸಬಹುದಾದ, ಬದಲಾಯಿಸಲಾಗದ ಮತ್ತು ಸುಸ್ಥಿರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶದಿಂದ ಹೊರಹೊಮ್ಮುವ ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸು ಪೂರೈಕೆಯನ್ನು ನಿಲ್ಲಿಸಲೇಬೇಕು ಎಂದಿದ್ದಾರೆ.
ಇನ್ನು ಪಾಕಿಸ್ಥಾನ ತನ್ನ ನೆಲದಲ್ಲೇ ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುತ್ತಾ, ಬೆಂಬಲಿಸುತ್ತಿರುವುದನ್ನು ಎಫ್’ಎಟಿಎಫ್ ಕಟು ಶಬ್ದಗಳಲ್ಲಿ ಟೀಕಿಸಿರುವುದನ್ನು ಭಾರತ ಸ್ವಾಗತಿಸುತ್ತದೆ ಎಂದಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ಪೂರೈಕೆ ನಿಲ್ಲಿಸುವುದು ಹಾಗೂ ಉಗ್ರವಾದವನ್ನು ನಿಗ್ರಹಿಸುವ ವಿಚಾರದಲ್ಲಿ ಸಮರ್ಥ ಕ್ರಿಯಾ ಯೋಜನೆಯನ್ನು ರೂಪಿಸಿ, ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಎಫ್’ಎಟಿಎಫ್ ಪಾಕಿಸ್ಥಾನಕ್ಕೆ ನಿನ್ನೆ ಎಚ್ಚರಿಕೆ ನೀಡಿತ್ತು.
Discussion about this post