ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೆಸಿಐ ಶಿವಮೊಗ್ಗ ವಿವೇಕ್, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಆ. 23ರಂದು ಸಂಜೆ 5 ಗಂಟೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಕಂದಾವರ ರಘುರಾಮಶೆಟ್ಟಿ ವಿರಚಿತ ‘ಚೆಲುವೆ ಚಿತ್ರಾವತಿ’ ಎಂಬ ಯಕ್ಷಗಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಶಿವಮೊಗ್ಗ ವಿವೇಕದ ಪ್ರಮುಖ ಉದಯ್ ಕಡಂಬ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ದರ್ಶನ್ ಗೌಡ ಗೋಳಿಹೊಳೆ, ಅತಿಥಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆ ವಾದಕರಾಗಿ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ಚೆಂಡೆ ವಾದಕರಾಗಿ ಪ್ರಜ್ವಲ್ ಮುಂಡಾಡಿ ಆಗಮಿಸುವರು ಎಂದರು.
ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ವಿಶ್ವನಾಥ್ ಆಚಾರ್ಯ ತೊಂಬೊಟ್ಟು, ಉದಯ ಹೆಗಡೆ ಕಡಬಾಳ, ಕೆ.ಜಿ. ಕಾರ್ತಿಕ್, ಭಾಸ್ಕರ್ ಮರಾಠೆ, ದತ್ತು ಮರಾಠೆ ಆಗಮಿಸುವರು. ಅತಿಥಿ ಕಲಾವಿದರಾಗಿ ಕಾರ್ತಿಕ್ ಚಿಟ್ಟಾಣಿ ಭಾಗವಹಿಸಲಿದ್ದಾರೆ. ಸ್ತ್ರೀ ಭೂಮಿಕೆಯಲ್ಲಿ ಸುಧೀರ್ ಉಪ್ಪೂರು, ಸಂತೋಷ್ ಹೆಂಗವಳ್ಳಿ, ಪುರುಷೋತ್ತಮ್ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪಾತ್ರದಲ್ಲಿ ಶೇಖರ್ ಶೆಟ್ಟಿ ಯಳಬೇರು, ಪುರಂದರ ಮೂಡ್ಕಣಿ ಅಭಿನಯಿಸಲಿದ್ದಾರೆ ಎಂದ ಅವರು, ಸುಮಾರು 20 ವರ್ಷಗಳ ನಂತರ ಇಂತಹ ಪ್ರದರ್ಶನ ಆಯೋಜನೆಯಾಗುತ್ತಿದೆ ಎಂದು ತಿಳಿಸಿದರು.
ಯಕ್ಷಗಾನ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ದಾನಿಗಳಿಗೆ ವಿಶೇಷ ಪ್ರವೇಶ ಪಾಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8884411009, 8217318814 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಟನ್ ಜಗದೀಶ್, ವಿಜಯಲಕ್ಷ್ಮಿ ಕಡಂಬ, ಡಾ.ಪರಿಸರ ನಾಗರಾಜ್, ಬದ್ರೀಶ್, ಭಾರತಿ, ಶ್ರೀನಿವಾಸ ಆಚಾರ್ಯ, ಜಯಕುಮಾರ್, ಶ್ಯಾಮಲಾ, ಬಾಲರಾಜ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








