ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಈಗಾಗಲೇ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ಮಹಾಮಾರಿ ನವೆಂಬರ್ ವೇಳೆಗೆ ಭಾರೀ ಪ್ರಮಾಣದಲ್ಲಿ ಉಲ್ಬಣವಾಗಲಿದೆ ಎಂಬ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ.
ಈ ಕುರಿತಂತೆ ಐಸಿಎಂಆರ್ ವರದಿ ಪ್ರಕಟಿಸಿದ್ದು, ನವೆಂಬರ್ ವೇಳೆಗೆ ದೇಶದಲ್ಲಿ ಕೋವಿಡ್‌ಟ9 ಪ್ರಕರಣಗಳು ಗರಿಷ್ಠಮಟ್ಟ ಮುಟ್ಟಲಿದೆ. ಅಲ್ಲದೇ ಪ್ರಮುಖವಾಗಿ ಆ ವೇಳೆಗೆ ದೇಶದಲ್ಲಿ ಐಸೋಲೇಶನ್ ಬೆಡ್’ಗಳು, ಐಸಿಯು ಹಾಗೂ ವೆಂಟಿಲೇಟರ್’ಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಐಸಿಎಂಆರ್ ಸಾಂಖ್ಯಿಕ ಅಧ್ಯಯನ ನಡೆಸಿದ್ದು, ಇದರ ಆಧಾರದ ಮೇಲೆ ಅಭಿಮತಕ್ಕೆ ಬಂದಿದ್ದು, ಇದರಲ್ಲಿ ಹಲವು ಸಂಸ್ಥೆಗಳು, ಪ್ರಯೋಗಾಲಯಗಳು, ವಿವಿಗಳು ಸೇರಿದಂತೆ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿದೆ.
Get In Touch With Us info@kalpa.news Whatsapp: 9481252093
Discussion about this post