No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
  • Advertise With Us
  • Grievances
  • About Us
  • Contact Us
Tuesday, September 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಂಸ್ಕೃತಿ ಶ್ರೀಮಂತ ಜಿಲ್ಲಾಧಿಕಾರಿ ಶ್ರೀ ಕೆ.ಎ. ದಯಾನಂದ್

kalpa News by kalpa News
August 7, 2019
in Special Articles
0
ಸಂಸ್ಕೃತಿ ಶ್ರೀಮಂತ ಜಿಲ್ಲಾಧಿಕಾರಿ ಶ್ರೀ ಕೆ.ಎ. ದಯಾನಂದ್
Share on FacebookShare on TwitterShare on WhatsApp

ಯಾಕೋ ಸಂಸ್ಕೃತಿಗೂ ರಾಜಕೀಯ ಮೇಲಾಟದ ವ್ಯಕ್ತಿಗಳಿಗೂ ಸದಾ ತಳುಕು ಬೀಳುವುದೇ ಇಲ್ಲ. ಈ ಮಾತಿಗೆ ತಕ್ಕ ದೃಷ್ಟಾಂತವಾಗಿದೆ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕೆ.ಎ. ದಯಾನಂದ್ ಅವರ ಎತ್ತಂಗಡಿ.

ಸದಾ ಹಸನ್ಮುಖಿ, ಜನಪರ ಕಾಳಜಿ ಮತ್ತು ಕರ್ತವ್ಯ ನಿಷ್ಠೆಯ ಅಪರೂಪದ ಅಧಿಕಾರಿ ಕೆ.ಎ. ದಯಾನಂದ್.

ಒಬ್ಬ ಜಿಲ್ಲಾಧಿಕಾರಿ ಆಡಳಿತದಲ್ಲಿ ದಕ್ಷತೆ ತೋರಿ ಜನಮನ ಗೆಲ್ಲುವುದನ್ನು ಆಗೊಮ್ಮೆ ಈಗೊಮ್ಮೆ ನೋಡಿದ್ದೇವೆ. ಆದರೆ ದಯಾನಂದ್ ನಮಗೆ ಆಪ್ತರಾಗುವುದು ಆಡಳಿತ ಒಂದೇ ಅಲ್ಲ ನಮ್ಮ ಸಂಸ್ಕೃತಿಯ ಬಗ್ಗೆ ಅವರು ತಾಳಿರುವ ಅಪಾರ ಪ್ರೀತಿ ಹಾಗೂ ಅಭಿಮಾನದ ಬಗ್ಗೆ.

ಆಡಳಿತದಲ್ಲಿ ಜಿಲ್ಲಾಧಿಕಾರಿಗಳು ಜಬರ್ದಸ್ತ್‌ ಆಗಿ ಕೆಲಸ ಮಾಡುತ್ತಾರೆ. ಹೆಸರು ಮಾಡುತ್ತಾರೆ. ನಂತರ ಈ ಪ್ರಕ್ರಿಯೆಯಲ್ಲಿ ಜನಾನುರಾಗಿಗಳಾಗುತ್ತಾರೆ. ಈ ಜನಪ್ರಿಯತೆಯನ್ನು ರಾಜಕೀಯ ನೇತಾಗಳು ಸಹಿಸದೇ ತಕ್ಷಣ ವರ್ಗ ಮಾಡಿಸುತ್ತಾರೆ.

ಇನ್ನೂ ಬಂದು ಒಂದು ವರ್ಷವಾಯಿತಷ್ಟೆ. ಅಲ್ಪ ಅವಧಿಯಲ್ಲೇ ಮಾನ್ಯ ದಯಾನಂದ್ ಅವರು ಸಾಮಾನ್ಯರ ಕಣ್ಮಣಿಗಳಾಗಿ ಕೆಲಸ ಮಾಡಿದ್ದಾರೆ. ಅವರ ಕಾರ್ಯಾಲಯದ ಬಾಗಿಲನ್ನು ಹಳ್ಳಿ ಬೋರೇಗೌಡ ನಿಂತು ಕಾಯುವ ಹಾಗಿಲ್ಲ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಬಾಗಿಲು ಸದಾ ತೆರೆದಿಡಲಾಗಿತ್ತು. ಇನ್ನು ಮುಂದೆ ಹೇಗೋ ಗೊತ್ತಿಲ್ಲ.

ಅವರದು ಸದಾ ತೆರೆದ ಮನಸ್ಸು. ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ವ್ಯಾಸಂಗ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಸಾಧಕರು. ಭೇಟಿಯಾದಾಗ ಅವರು ತಮ್ಮ ಕೈ ತೋರಿಸಿ ಇದು ಮಣ್ಣಿನೊಂದಿಗೆ ಕೆಲಸ ಮಾಡಿದ ಕಾರ್ಮಿಕರ ಕೈ. ಈಗಲೂ ನಾನು ದಿನಾ ಬೆಳಿಗ್ಗೆ ಪಿಕಾಸಿ ಹಿಡಿದು ತಮ್ಮ ಕೈತೋಟದಲ್ಲಿ ತರಕಾರಿ, ಹೂವು ಗಿಡಗಳ ಒಡನಾಟದಲ್ಲಿರುವುದು ನನ್ನ ದಿನಚರಿ ಎಂದಿದ್ದರು.

ಜಿಲ್ಲಾಧಿಕಾರಿಗಳಿಗೆ ಅತ್ಯಂತ ಸಂಕಷ್ಟ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ಚುನಾವಣೆ ನಿರ್ವಹಣೆ ಪ್ರಮುಖವಾದದ್ದು.

ಈ ವರ್ಷದ ಲೋಕಸಭಾ ಚುನಾವಣೆಯನ್ನು ಅತ್ಯಂತ ದಕ್ಷವಾಗಿ ನಿರ್ವಹಿಸಿದ ಕೀರ್ತಿಗೆ ಇವರು ಭಾಜನರಾಗಿದ್ದಾರೆ.

ಈ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯನ್ನು ಹೆಚ್ಚಿಸುವಲ್ಲಿ ಮತದಾರರ ಜಾಗೃತಿ ಬಹಳ ಮುಖ್ಯ. ಶೇಕಡಾವಾರು ಮತದಾನ ಜಾಸ್ತಿಯಾಗಬೇಕು ಎಂಬುದು ಚುನಾವಣಾ ಆಯೋಗದ ಒಂದು ಪ್ರಬಲ ಆಕಾಂಕ್ಷೆಯೂ ಆಗಿದೆ. ಆದರೆ ಇದು ನಿಷ್ಪಕ್ಷವಾಗಿಯೂ ನಡೆಯಬೇಕು. ಇದೂ ಕೂಡ ಬಹಳ ಸೂಕ್ಷ್ಮವಾದ ಸಂಗತಿ.

ಇಂತಹ ಗಹನವಾದ ವಿಚಾರವನ್ನು ಅಷ್ಟೇ ಸರಳವಾಗಿ ಜನಸಮುದಾಯದಲ್ಲಿ ಮನಮುಟ್ಟುವಂತೆ ಮಾಡಬೇಕು. ಈ ದಿಸೆಯಲ್ಲಿ ಶ್ರೀದಯಾನಂದ್ ಅವರು ಸ್ಥಳೀಯ ಕಲಾವಿದರು, ಸ್ವಯಂಸೇವಾ ಸಂಘ ಸಂಸ್ಥೆಗಳು, ಜನಾಭಿಪ್ರಾಯ ಮುಖಂಡರು ಇತ್ಯಾದಿ ಎಲ್ಲರ ಸಹಕಾರ ಪಡೆದು ಮತದಾರ ಜಾಗೃತಿ ಆಂದೋಲನವನ್ನೇ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಮಾಡಿದರು.

ಅವರ ಕಿರೀಟಕ್ಕೆ ಮತ್ತೊಂದು ಗರಿ, ಸಹ್ಯಾದ್ರಿ ಉತ್ಸವ. ಬಹಳ ವರ್ಷಗಳಿಂದ ನಡೆಸಲಾಗದೇ ನೆನೆಗುದಿಗೆ ಬಿದ್ದಿದ್ದ ಸಹ್ಯಾದ್ರಿ ಉತ್ಸವವನ್ನು ಈ ಬಾರಿ ಹಮ್ಮಿಕೊಂಡಿದ್ದು ಅವರ ನಿಶ್ವಲಿತ ಸಂಕಲ್ಪಕ್ಕೆ ಒಂದು ಉದಾಹರಣೆ.

ವೈವಿಧ್ಯಮಯ ಮತ್ತು ವರ್ಣಮಯ ಹಬ್ಬವನ್ನು ಆಚರಿಸಿ ಜಿಲ್ಲೆಯಾದ್ಯಂತ ಹೊಸ ಸಂಚಲನವನ್ನೇ ತಂದರು. ಬಹಳ ಮಂದಿ ಈ ಉತ್ಸವದ ನೆಪದಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರದಿಂದ ದೊಡ್ಡ ಬಜೆಟನ್ನೇ ಮಂಜೂರು ಮಾಡಿಸಬೇಕಾಗುತ್ತದೆ. ಈಗ ಅದೆಲ್ಲಿ ಸಾಧ್ಯ? ಅದೂ ಅಲ್ಲದೇ ಮಂಗನ ಕಾಯಿಲೆಯಿಂದ ಜಿಲ್ಲೆಯ ಮಂದಿ ತುತ್ತಾಗಿದ್ದಾರೆ. ಈ ಸೂತಕದ ಸನ್ನಿವೇಶದಲ್ಲಿ ಉತ್ಸವ, ಆಚರಣೆ ಸೂಕ್ತವಲ್ಲ ಎಂಬ ಅಪಸ್ವರವೂ ಬಲವಾಗಿ ಕೇಳಿಬಂತು.

ಜಿಲ್ಲಾ ಉತ್ಸವ ಎಂದರೆ ಜಿಲ್ಲೆಯ ಹಬ್ಬ. ನಮ್ಮ ಎಷ್ಟೇ ಕಷ್ಟಗಳಿದ್ದರೂ ನಾವು ನಮ್ಮ ಮನೆಯ ಹಬ್ಬ ಆಚರಿಸದೇ ಇರುತ್ತೇವೆಯೆ? ಹೇಗೋ ನಮ್ಮ ಇತಿಮಿತಿಯಲ್ಲಿ ನಡೆಸುತ್ತೇವೆ ಎನ್ನುವುದು ಅವರ ತಾರ್ಕಿಕವಾದ.

ಈ ವಾದಕ್ಕೆ ಪುಷ್ಠಿ ಕೊಟ್ಟಂತೆ ಅವರು ಹೇಳುವ ಮಾತಿದೆ.ಈ ರೀತಿಯಾಗಿಯೇ ನಾನು ಬೇರೆಡೆ ಜಿಲ್ಲಾಧಿಕಾರಿಯಾಗಿದ್ದಾಗ ಯೋಚಿಸುತ್ತಿದ್ದೆ. ಆದರೆ ಒಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾದ ಮೇಲೆ ನನ್ನ ಲಹರಿಯೇ ಬದಲಾಯಿತು ಎನ್ನುತ್ತಾರೆ. ತಾವು ಯಾವತ್ತೂ ಇಂತಹ ಉತ್ಸವಗಳ ಪರವಾಗಿಯೇ ನಿಲ್ಲುವ ಮನಸ್ಸು ಹೊಂದಿದ್ದೇನೆ ಎಂಬ ನಿಚ್ಚಳ ನಿರ್ಧಾರ ಅವರದ್ದು.

ಅವರ ಕೌಶಲವೆಂದರೆ ಕರ್ತೃತ್ವ ಶಕ್ತಿಯಿರುವವರನ್ನು ಗುರುತಿಸಿ ಅವರಿಂದಲೇ ಕೆಲಸ ಮಾಡಿಸುವ ಕಲಾವಂತಿಕೆ.

ಸಹ್ಯಾದ್ರಿ ಉತ್ಸವದಲ್ಲಿ ದಯಾನಂದ್ ಅವರು ಒಬ್ಬರೇ ಏಕಮೇವರಂತೆ ಮೆರೆಯಲಿಲ್ಲ. ಬದಲಾಗಿ ಕ್ರಿಯಾಶೀಲರನ್ನು ಮುನ್ನೆಲೆಗೆ ತಂದರು. ಎಲ್ಲೂ ದೊಡ್ಡ ದೊಡ್ಡ ಬ್ಯಾನರ್, ಫೋಟೋಗಳಿಗೆ ಮುಖತೋರಗೊಡಲಿಲ್ಲ ಮತ್ತೂ ಒಂದು ಜಾಣತನವೆಂದರೆ ಅವರು ದೊಡ್ಡ ಬಜೆಟ್’ಗೆ ಹೋಗದೇ ಜಿಲ್ಲಾ ಮಟ್ಟದಲ್ಲಿ ಖರ್ಚಾಗದೇ ಮಿಕ್ಕಿದ್ದ ಹಣದಲ್ಲೇ ಸಂಪೂರ್ಣ ಉತ್ಸವವನ್ನು ಸಾಂಗವಾಗಿ ಸಮಾರೋಪಗೊಳಿಸಿದ ಕೀರ್ತಿ ಅವರದ್ದಾಗಿದೆ.

ಇಂತಹ ದಕ್ಷ, ಜನಪರ ಹಾಗೂ ಹೃದಯವಂತ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಅವರನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಡುವ ಸಮಯ ಬಂದಿದೆ.

ಇಂತಹ ಶ್ರೀದಯಾನಂದ್ ಈಗ ಶಿವಮೊಗ್ಗ ಬಿಟ್ಟು ಬೇರೆಡೆಗೆ ವರ್ಗವಾಗಿ ಹೋಗುತ್ತಿದ್ದಾರೆ. ನಮ್ಮ ಜಿಲ್ಲೆಗೆ ಕ್ರಿಯಾಶೀಲ ಮತ್ತು ಜನಸ್ಪಂದನವುಳ್ಳ ಅಧಿಕಾರಿಯನ್ನು ಕಳಕೊಂಡ ನಷ್ಟ. ಆದರೆ ಬೇರೆ ಇಲಾಖೆಗೆ ಅದು ಭರಪೂರ ಲಾಭ.

Kudos ದಯಾನಂದ್ Sir

ಪ್ರಮುಖರು ಹೇಳಿದ್ದು…

ಸರಳ ಸಜ್ಜನಿಕೆಯ ವ್ಯಕ್ತಿ. ಆಡಳಿತದಲ್ಲಿ ಸದಾ ನಿರತ ಮತ್ತು ಸಂಸ್ಕೃತಿವಂತ ಸಹೃದಯಿ ಜಿಲ್ಲಾಧಿಕಾರಿ.
-ಲಕ್ಷ್ಮೀನಾರಾಯಣ ಕಾಶಿ,
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರು

ಉತ್ತಮ ಆಡಳಿತಗಾರ ಹಾಗೂ ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಪರಿಹರಿಸುತ್ತಿದ್ದ. ಕರ್ತವ್ಯನಿಷ್ಠ ಜಿಲ್ಲಾಧಿಕಾರಿ ಮಾನ್ಯ ದಯಾನಂದ್.
-ಕೆ.ಜಿ. ಮಂಜುನಾಥ ಶರ್ಮ
ರಿಟೈರ್ಡ್ ತಹಶಿಲ್ದಾರ್, ಶಿವಮೊಗ್ಗ

ಲೇಖನ: ಡಾ.ಚನ್ನಗಿರಿ ಸುಧೀಂದ್ರ

Tags: K A Dayanand IASKannada ArticleMalnad NewsShivamoggaShivamogga DC Dayanandಜಿಲ್ಲಾಧಿಕಾರಿಜಿಲ್ಲಾಧಿಕಾರಿ ಕೆ.ಎ.ದಯಾನಂದಶಿವಮೊಗ್ಗ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪಾಕ್ ಸರ್ವನಾಶಕ್ಕೆ ಮೋದಿ ‘ಕಾಶ್ಮೀರ ಕ್ರಾಂತಿ’ ನಾಂದಿ, ವಿಶ್ವದ ಭೂಪಟದಿಂದ ಕಿತ್ತು ಹೋಗಲಿದೆ ‘ಪಾಪಿಸ್ಥಾನ’

Next Post

ಭಾರೀ ಮಳೆ ಹಿನ್ನೆಲೆ: ಶಿವಮೊಗ್ಗ ಜಿಲ್ಲೆ ಶಾಲಾ-ಕಾಲೇಜುಗಳಿಗೆ ಬುಧವಾರವೂ ರಜೆ

kalpa News

kalpa News

Next Post
ಭಾರೀ ಮಳೆ ಹಿನ್ನೆಲೆ: ಶಿವಮೊಗ್ಗ ಜಿಲ್ಲೆ ಶಾಲಾ-ಕಾಲೇಜುಗಳಿಗೆ ಬುಧವಾರವೂ ರಜೆ

ಭಾರೀ ಮಳೆ ಹಿನ್ನೆಲೆ: ಶಿವಮೊಗ್ಗ ಜಿಲ್ಲೆ ಶಾಲಾ-ಕಾಲೇಜುಗಳಿಗೆ ಬುಧವಾರವೂ ರಜೆ

Leave a Reply Cancel reply

Your email address will not be published. Required fields are marked *

No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL